ಅಫ್ಘಾನಿಸ್ತಾನ ದಾಳಿಯನ್ನು ಕಟುಶಬ್ದಗಳಿಂದ ಖಂಡಿಸಿದ ಮೋದಿ

ನವದೆಹಲಿ, ಜೂನ್ 02: ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದಾರೆ.

ಇಲ್ಲಿನ ಜಲಾಲಾಬಾದ್ ನಲ್ಲಿ ಭಾನುವಾರ ಆತ್ಮಾಹುತಿ ದಾಳಿ ನಡೆದಿದ್ದು, ಮುಖ್ಯವಾಗಿ ಸಿಕ್ಖ್ ಮತ್ತು ಹಿಂದು ಸಮುದಾಯವನ್ನೇ ಗುರಿಯಾಗಿಸಿ ನಡೆದ ಈ ದಾಳಿಯಲ್ಲಿ 19 ಜನ ಮೃತರಾಗಿದ್ದಾರೆ. 20 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರಾದ 19 ರಲ್ಲಿ 10 ಜನ ಅಫ್ಘಾನಿಸ್ತಾನ್ ಸಿಕ್ಖ್ ಸಮುದಾಯಕ್ಕೆ ಸೇರಿದವರೆಂಬುದು ತಿಳಿದುಬಂದಿದೆ. ಘಟನೆಯನ್ನು ಭಾರತ ಕಟುಶಬ್ದಗಳಿಂದ ಖಂಡಿಸಿದೆ.

ಭಾರತ ಇದನ್ನು ಖಂಡಿಸುತ್ತದೆ!

ಅಫ್ಘಾನಿಸ್ತಾನದಲ್ಲಾದ ಆತ್ಮಾಹುತಿ ಬಾಂಬ್ ದಾಳಿಯನ್ನು ಭಾರತ ಕಟುವಾಗಿ ಖಂಡಿಸುತ್ತದೆ. ಇದು ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲಾದ ದಾಳಿ. ಮೃತರ ಕುಟುಂಬಕ್ಕೆ ನನ್ನ ಸಾಂತ್ವನ. ಗಾಯಗೊಂಡವರು ಬೇಗನೇ ಗುಣಮುಖರಾಗಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಭಾರತ ನಿಲ್ಲುತ್ತದೆ. ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಸಂತ್ರಸ್ಥರ ಕುಟುಂಬಕ್ಕೆ ನಮ್ಮ ಪ್ರಾರ್ಥನೆ

ಅಫ್ಘಾನಿಸ್ತಾನ ದಾಳಿಯ ಸಂತ್ರಸ್ಥರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು. ಈ ದುರಂತದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಮೃತರ ಸಂಬಂಧಿಗಳನ್ನು ನಾನು ಇಂದು ಭೇಟಿ ಮಾಡುತ್ತೇನೆ ಎಂದು ವಿದೇಶಾಂಕ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಇದು ನೈತಿಕತೆಗೆ ಒಡ್ಡಿದ ಸವಾಲು!

ಈ ಬಾಂಬ್ ಸ್ಫೋಟವನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಈ ಘಟನೆ ಅತುಂತ ಹೀನಾಯ ಮತ್ತು ನಾವು ನಂಬಿದ ಎಲ್ಲ ತತ್ವಗಳಿಗೂ ವಿರುದ್ಧವಾದುದು, ನೈತಿಕತೆಗೆ ಒಡ್ಡಿದ ಸವಾಲು. ಈ ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ಸಾಂತ್ವನ ಕೋರುತ್ತೇನೆ ಎಂದಿದ್ದಾರೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯ್.

ಸಂತ್ರಸ್ಥರಿಗೆ ನ್ಯಾಯ ಸಿಗಲಿ

ಈ ಹೀನಾಯ ಘಟನೆಯನ್ನು ನಾನು ಖಂಡಿಸುತ್ತೇನೆ. ಇದು ಸಿಕ್ಖರನ್ನೇ ಗುರಿಯಾಗಿಸಿ ನಡೆಸಿದ ದಾಳಿ. ಸಂತ್ರಸ್ಥ ಕುಟುಂಬಗಳಿಗೆ ನನ್ನ ಸಾಂತ್ವನ ಮತ್ತು ಪ್ರಾರ್ಥನೆ. ಸಂತ್ರಸ್ಥರಿಗೆ ನ್ಯಾಯ ಸಿಗಲಿ ಎಂಬುದೇ ನನ್ನ ಪ್ರಾರ್ಥನೆ ಎಂದಿದ್ದಾರೆ ಪತ್ರಕರ್ತ ರಜತ್ ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+