ಸೋನಿಯಾ ಬಳಿ ಇರುವ ನೆಹರು ಪತ್ರಗಳನ್ನು ಮರಳಿ ಕೊಡಿ: ರಾಹುಲ್‌ ಗಾಂಧಿಗೆ ಪಿಎಂ ಮೆಮೋರಿಯಲ್‌ ಪತ್ರ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ವೈಯಕ್ತಿಕ ಪತ್ರಗಳು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಬಳಿ ಇವೆ. ಅವುಗಳನ್ನು ಮರಳಿಸಬೇಕೆಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂ ಮೆಮೋರಿಯಲ್) ಸೊಸೈಟಿ ಪತ್ರ ಬರೆದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ರೀತಿಯ ವಿನಂತಿಯನ್ನು ಸೋನಿಯಾ ಗಾಂಧಿ ಅವರಿಗೆ ಮಾಡಲಾಗಿತ್ತು ಎಂದು ತಿಳಿದುಬಂದಿತ್ತು.

ಡಿಸೆಂಬರ್ 10ರಂದು ಪಿಎಂ ಮೆಮೋರಿಯಲ್‌ ಸದಸ್ಯ ರಿಜ್ವಾನ್ ಖಾದ್ರಿ ಅವರು ರಾಹುಲ್‌ ಗಾಂಧಿಗೆ ಪತ್ರವನ್ನು ರವಾನಿಸಿದ್ದಾರೆ. ಈ ಪತ್ರದ ಪ್ರಕಾರ, ನೆಹರು ಅವರು ಬರೆದಿರುವ ವೈಯಕ್ತಿಕ ಪತ್ರಗಳನ್ನು ಮೂಲ ರೂಪದಲ್ಲಿ ಮರಳಿಸಬೇಕು. ಇಲ್ಲವೇ ಆ ಪತ್ರಗಳ ಡಿಜಿಟಲ್ ಪ್ರತಿಗಳು ಅಥವಾ ಫೋಟೋ ಪ್ರತಿಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

PM Memorial urges Rahul Gandhi to return Nehru s letters that Sonia took in 2008

ನೆಹರು ಅವರು ವೈಯಕ್ತಿಕ ಪತ್ರಗಳು ಅಗಾಧವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಪತ್ರಗಳನ್ನು 1971ರಲ್ಲಿ ಪಿಎಂ ಮೆಮೋರಿಯಲ್‌ಗೆ ಒದಗಿಸಲಾಯಿತು. ಸುಮಾರು 51 ಪೆಟ್ಟಿಗೆಗಳಲ್ಲಿ ನೆಹರು ಅವರ ಪತ್ರಗಳಿವೆ. 2008 ರಲ್ಲಿ ಈ ಎಲ್ಲ ಪತ್ರಗಳನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಲಾಗಿದೆ ಎಂದು ಖಾದ್ರಿ ತಿಳಿಸಿದ್ದಾರೆ.

ಈ ಎಲ್ಲ ಪತ್ರಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಕಾರಣ, ನೆಹರು ಹಾಗೂ ಆ ಕಾಲಘಟ್ಟದ ನಾಯಕರ ನಡುವೆ ಈ ಪತ್ರ ವ್ಯವಹಾರ ನಡೆದಿತ್ತು. ಆ ಕಾಲಘಟ್ಟದ ಪ್ರಮುಖ ಜಾಗತಿಕ ನಾಯಕರಾದ ಜಯಪ್ರಕಾಶ ನಾರಾಯಣ, ಆಲ್ಬರ್ಟ್ ಐನ್‌ಸ್ಟೈನ್, ಎಡ್ವಿನಾ ಮೌಂಟ್‌ ಬ್ಯಾಟನ್, ಪದ್ಮಜಾ ನಾಯ್ಡು, ಅರುಣಾ ಆಶಿಫ್‌ ಅಲಿ, ವಿಜಯ ಲಕ್ಷ್ಮಿ ಪಂಡಿತ್, ಬಾಬು ಜಗಜೀವನ್ ರಾಮ್ ಮತ್ತು ಗೋವಿಂದ ವಲ್ಲಬರಂತಹ ಮಹಾನಾಯಕರ ನಡುವೆ ಈ ಪತ್ರ ವ್ಯವಹಾರ ನಡೆದಿತ್ತು ಎಂದು ತಿಳಿದುಬಂದಿದೆ.

'ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೂ ನಾನು ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದೆ. ನೆಹರು ಸಂಗ್ರಹಗಳ ಭಾಗವಾಗಿದ್ದ ಸರಿಸುಮಾರು 51 ವ್ಯಂಗ್ಯ ಚಿತ್ರಗಳನ್ನು ( ಎಂಟು ವಿಭಿನ್ನ ವಿಭಾಗಗಳಿಗೆ ಸಂಬಂಧಿಸಿದ ) ಹಿಂತಿರುಗಿಸಬೇಕೆಂದು ವಿನಂತಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದೇನೆ' ಎಂದು ಖಾದ್ರಿ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬರೆದ ಪತ್ರಕ್ಕೆ ಸೋನಿಯಾ ಗಾಂಧಿ ಅವರು ಪ್ರತಿಕ್ರಿಯಿಸಿಲ್ಲ. ಹೀಗಾಗಿ ನಾನು ರಾಹುಲ್‌ ಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಪಿಎಂ ಮೆಮೋರಿಯಲ್‌ ಅನ್ನು ಈ ಹಿಂದೆ ನೆಹರು ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರ ರಾಜಧಾನಿಯಲ್ಲಿರುವ ವಸ್ತುಸಂಗ್ರಹಾಲಯವು ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ದಾಸ್ತಾವೇಜುಗಳನ್ನು ಹೊಂದಿದೆ. ಇದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಬರುವ ಸ್ವಾಯತ್ತ ಸಂಸ್ಥೆಯಾಗಿದೆ. ಜವಾಹರಲಾಲ್ ನೆಹರು ಅವರ ಮರಣದ ನಂತರ 1964 ರಲ್ಲಿ ಇದನ್ನು ಸ್ಥಾಪಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+