ಡಿ.31ರ ರಾತ್ರಿ ದೇಶ ಉದ್ದೇಶಿಸಿ ಮೋದಿ ಏನು ಮಾತಾಡ್ತಾರೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 29: ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಅಂದರೆ ಡಿಸೆಂಬರ್ 31ರಂದು ರಾತ್ರಿ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ನವೆಂಬರ್ 8ರಂದು ರಾತ್ರಿ ದಿಢೀರ್ ಆಗಿ ನೋಟು ನಿಷೇಧದ ನಿರ್ಧಾರ ಘೋಷಿಸಿದ್ದ ಮೋದಿ, ಹಳೇ ನೋಟನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡುವುದಕ್ಕೆ ಡಿಸೆಂಬರ್ 30ರವರೆಗೆ ಅವಕಾಶ ನೀಡಿದ್ದರು.

ಅಪನಗದೀಕರಣ ಘೋಷಣೆ ಮಾಡಿದ ನಂತರ ನಗದು ಪೂರೈಕೆ ಪ್ರಮಾಣ ಹೆಚ್ಚಿಸಲು ತೆಗೆದುಕೊಂಡು ಕ್ರಮಗಳ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ನೋಟು ನಿಷೇಧ ನಿರ್ಧಾರದಿಂದ ಚಲಾವಣೆಯಲ್ಲಿದ್ದ ಶೇ 86ರಷ್ಟು 500, 1000 ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. ಹಣವನ್ನು ಬ್ಯಾಂಕ್ ನಲ್ಲಿ ಜಮೆ ಮಾಡುವುದಕ್ಕೆ, ತೆಗೆದುಕೊಳ್ಳುವುದಕ್ಕೆ ಕೆಲವು ಮಿತಿ ಹೇರಿದ್ದರಿಂದ ಜನಜೀವನದ ಮೇಲೆ ಪ್ರಭಾವ ಬೀರಿತ್ತು.[ನೋಟು ನಿಷೇಧ 50 ದಿನ, ಸಮಸ್ಯೆ ಸರಿಹೋಗಿಲ್ಲ, ಸ್ಥಿತಿ ಸಹಜವಾಗಿಲ್ಲ]

Narendra Modi

ಇನ್ನು ಹೊಸ ಆದೇಶವೊಂದು ಬಂದಿದ್ದು, ಡಿಸೆಂಬರ್ 30ರ ನಂತರ ಹಳೇ ಐನೂರು ಹಾಗೂ ಸಾವಿರ ರುಪಾಯಿ ನೋಟು ಹತ್ತಕ್ಕಿಂತ ಹೆಚ್ಚು ಇರಿಸಿಕೊಂಡಿದ್ದರೆ ಐವತ್ತು ಸಾವಿರ ದಂಡ ಹಾಗೂ ಶಿಕ್ಷೆ ವಿಧಿಸುವ ಘೋಷಣೆ ಮಾಡಲಾಗಿದೆ. ಪ್ರಧಾನಿ ಮೋದಿ ಆರಂಭದಲ್ಲಿ ಮಾತು ಕೊಟ್ಟಿದ್ದಂತೆ ಐವತ್ತು ದಿನದೊಳಗೆ ಸಮಸ್ಯೆ ನಿವಾರಿಸಬೇಕಿತ್ತು. ಅದೀಗ ಕೊನೆಯಾಗಲಿದೆ. ಆದರೆ ಇನ್ನು ಪರಿಸ್ಥಿತಿ ಸುಧಾರಿಸಿಲ್ಲ.[ರಾಹುಲ್ ಗಾಂಧಿ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]

ನೋಟು ನಿಷೇಧದ ನಂತರ ಅದರ ಜಾರಿ ಸರಿಯಾಗಿ ಆಗಿಲ್ಲ ಎಂಬ ಬಗ್ಗೆ ವಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸತ್ ನಲ್ಲಿ ಈ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದರೆ ವಿಪಕ್ಷದವರೇ ಪ್ರಧಾನಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಬಿಜೆಪಿಯವರು ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime Minister Narendra Modi is likely to make another address to the nation on the notes ban on Saturday, December 31, at 7.30 pm, sources have said.
Please Wait while comments are loading...