ಗುಲಾಂ ಮೊಹಮ್ಮದ್ ಮೀರ್ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ

ಶ್ರೀನಗರ, ಮೇ 05: ಅನಂತ್‌ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮೊಹಮ್ಮದ್ ಮಿರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ಮೀರ್ ಅವರ ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಮೀರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೋದಿ ಅವರು ಭಾನುವಾರದಂದು ಟ್ವೀಟ್ ಮಾಡಿ, ಇಂಥ ಕುಕೃತ್ಯಗಳು ದೇಶದಲ್ಲಿ ನಡೆಯಬಾರದು ಎಂದಿದ್ದಾರೆ.

PM condemns killing of J&K BJP leader Ghulam Mohammed Mir

ಶನಿವಾರದಂದು ಆನಂತ್ ನಾಗ್ ಜಿಲ್ಲೆಯ ನೌಗಾಮ್ ವೆರಿನಾಗ್ ಪ್ರದೇಶದಲ್ಲಿದ್ದ ಮೀರ್ ಅವರ ಮೇಲೆ ಗುಂಡಿನ ಮಳೆಗೈದು ಹತ್ಯೆ ಮಾಡಲಾಗಿದೆ. ಮೂರು ಮಂದಿ ಉಗ್ರರು ವಾಹನದಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಎನ್ ಸಿಪಿ ಮುಖಂಡ ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ಗಣ್ಯರು, ಮೀರ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+