ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ವರ್ಷದ ನಮ್ಮ ಮಗಳನ್ನು ಕಾಪಾಡುವುದಿದ್ದರೆ ನಿಮ್ಮ ನೆರವಿನಿಂದ ಮಾತ್ರ

Google Oneindia Kannada News

ಆಸ್ಪತ್ರೆಯ ಆ ಬೆಡ್ ನ ಸಂಖ್ಯೆ '23' ನೋಡಿದಾಗ ನನಗೆ ಶಶಿಯ ಆ ಭಂಗಿ ನೆನಪಾಗುತ್ತದೆ. ಒಂದು ಕೈಯಲ್ಲಿ ಕೇಕ್ ಮತ್ತೊಂದು ಕೈಯಲ್ಲಿ ಚಾಕು ಹಿಡಿದು ತಾನು ಕತ್ತರಿಸಿದ ಕೇಕ್ ನ ತೋರಿಸುತ್ತಿದ್ದದ್ದು ನೆನಪಾಗುತ್ತದೆ. ಅವಳು ತನ್ನ ಬೆಡ್ ಸಂಖ್ಯೆಯನ್ನು ತೋರಿಸಿ ತಾನು ಹುಟ್ಟಿದ ದಿನಕ್ಕೆ ಅದು ತಾಳೆಯಾಗುತ್ತದೆ ಎನ್ನುತ್ತಿದ್ದಳು, ಸೆಪ್ಟೆಂಬರ್ 23 ಅವಳ ಜನ್ಮದಿನ.

ಒಂಬತ್ತು ವರ್ಷದ ನನ್ನ ಮಗಳು ಏಕೆ ಹೀಗೆ ಸನ್ನೆ ಮಾಡ್ತಾಳೆ? ಕಳೆದ ಇಪ್ಪತ್ತು ಚಿಲ್ಲರೆ ದಿನದಿಂದ ನನ್ನ ಜಗತ್ತೇ ಮೌನವಾಗಿದೆ. ಏಕೆಂದರೆ ವಿಪರೀತವಾಗಿ ಮಾತನಾಡುತ್ತಿದ್ದ ನನ್ನ ಮಗಳಿಗೆ ಒಂದೇಒಂದು ಪದ ಮಾತನಾಡಲು ಆಗ್ತಿಲ್ಲ. ಪ್ರತಿ ಸಲ ಅವಳು ಮಾತನಾಡೋಕೆ ಪ್ರಯತ್ನ ಪಟ್ಟಾಗಲೂ ಸಾಧ್ಯವಾಗದೇ ನೋವಿನಿಂದ ಕಣ್ಣೀರು ಹಾಕ್ತಾಳೆ.

Please help this 9 year old girl to survive

ನನ್ನ ಹೆಸರು ಲಕ್ಷ್ಮಿ. ಅಸಹಾಯಕ ಸ್ಥಿತಿಯಲ್ಲಿರುವ ತಾಯಿ. ಮಗಳ ಚಿಕಿತ್ಸೆಗಾಗಿ ಇನ್ನು ಹದಿನೈದು ದಿನದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಹಣ ಹೊಂದಿಸಬೇಕಿದ್ದು, ನಿಮ್ಮ ಬೆಂಬಲ ಬೇಕಿದೆ. ಅದು ಸಾಧ್ಯವಾದರೆ ಆಕೆ ಆರೋಗ್ಯವಂತೆ ಆಗುತ್ತಾಳೆ. ತುಂಟಾಟದ ಅವಳನ್ನು ಮತ್ತೆ ಅದೇ ರೀತಿ ನೋಡಬಹುದು.

ನನ್ನ ಕುಟುಂಬದ ಜತೆಗೆ ಮುಂಬೈನಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಿದ್ದೇನೆ. ಗಂಡ, ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗ ಇರುವ ಕುಟುಂಬ ನನ್ನದು. ಶಶಿಕಲಾ ನನ್ನ ಕಿರಿಯ ಮಗಳು ಹಾಗೂ ತುಂಟಾಟದ ಹುಡುಗಿ. ನನ್ನ ಗಂಡ ಕಸ ತೆಗೆಯುವ ಕೆಲಸ ಮಾಡುತ್ತಾರೆ. ತಿಂಗಳಿಗೆ ಐದು ಸಾವಿರ ರುಪಾಯಿ ದುಡಿಯುತ್ತಾರೆ.

ಆ ಹಣದಲ್ಲಿ ಆರು ಜನರಿರುವ ಕುಟುಂಬದ ಮೂರು ಹೊತ್ತಿನ ಊಟಕ್ಕೆ ಸರಿಹೋಗುತ್ತದೆ. ಆದರೆ ಈಗ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳ ಚಿಕಿತ್ಸೆಯನ್ನು ಆ ಸಂಪಾದನೆಯಲ್ಲೇ ಸಂಭಾಳಿಸುತ್ತಿದ್ದೇವೆ.

Please help this 9 year old girl to survive

ಆ ದುರದೃಷ್ಟ ರಾತ್ರಿಯಂದು ಶಶಿ ಇತಿಹಾಸ ಪರೀಕ್ಷೆಗೆ ಓದಿಕೊಳ್ಳುತ್ತಿದ್ದಳು. ಅವಳು ಬಹಳ ಚಿಂತೆಯಿಂದ ಇರುವಂತೆ ಕಂಡುಬಂದಳು. ಏನಾಯಿತು ಅಂತ ಕೇಳಿದೆ. ಅದಕ್ಕೆ ಅವಳು, ನನಗೆ ಯಾಕೋ ಮೈ ಸರಿಯಿಲ್ಲ. ವಿಪರೀತವಾಗಿ ಕಾಲು ನೋಯ್ತಿದೆ ಅಂದಳು. ಅವಳಿಗೆ ತುಂಬ ಜ್ವರ ಬಂದಿತ್ತು.

ನನ್ನ ಉಳಿದ ಮಕ್ಕಳ ಹಾಗೆ ಅಲ್ಲ ಶಶಿ. ಪರೀಕ್ಷೆಗೆ ತುಬ ಮುಂಚೆಯೇ ತಯಾರಾಗುತ್ತಿದ್ದಳು. ಇತಿಹಾಸದ ವಿಷಯ ಅವಳಿಗೆ ತುಂಬ ಇಷ್ಟ. ಆದ್ದರಿಂದ ಅವಳಿಗೆ ಪರೀಕ್ಷೆ ಒತ್ತಡ ಇಲ್ಲ ಅನ್ನೋದು ಗೊತ್ತಿತ್ತು. ಸ್ಥಳೀಯ ವೈದ್ಯರೊಬ್ಬರ ಹತ್ತಿರ ಕರೆದುಕೊಂಡು ಹೋದ್ವಿ. ಅದೊಂದು ಮಾಮೂಲಿ ವೈದ್ಯಕೀಯ ಪರೀಕ್ಷೆ ಆಗಿರುತ್ತದೆ ಅಂದುಕೊಂಡಿದ್ದಿವಿ.

ಆದರೆ, ಆಸ್ಪತ್ರೆಗೆ ಸೇರಿಸಿ ಅಂತ ನಮಗೆ ಹೇಳಿದರು. ತಕ್ಷಣವೇ ಹತ್ತಿರದ ಬಾಬಾ ಆಸ್ಪತ್ರೆಗೆ ಹೋದೆವು. ನರಕ ಅಂದರೆ ಏನು ಅಂತ ಅನುಭವಿಸುವಂತಾಯಿತು. ಆ ರಾತ್ರಿ ಅವಳಿಗೆ ವಿಪರೀತ ಜ್ವರ. ಕಣ್ಣು ತೆರೆಯುವುದಕ್ಕೆ ಕೂಡ ಶಶಿಗೆ ಆಗ್ತಿರಲಿಲ್ಲ. ಉಸಿರಾಡುವುದಕ್ಕೆ ಕಷ್ಟ ಪಡುತ್ತಿದ್ದಳು. ಆಕೆಯನ್ನು ಕೂಡಿಸಬೇಕು ಅಂತ ಪ್ರಯತ್ನ ಪಡುತ್ತಿದ್ದರೆ ಮಕಾಡೆ ಬಿದ್ದುಬಿಡುತ್ತಿದ್ದಳು.

Please help this 9 year old girl to survive

ನನಗೆ ಅವಳನ್ನು ಕಳೆದುಕೊಂಡು ಬಿಡ್ತಿನೇನೋ ಅನ್ನಿಸುತ್ತಿತ್ತು. ನಾವು ಅವಳನ್ನುತಕ್ಷಣವೇ ನಾನಾವತಿ ಆಸ್ಪತ್ರೆಗೆ ಸೇರಿಸಬೇಕು ಅಂತ ನಿರ್ಧಾರ ಮಾಡಿದೆವು. ಅಲ್ಲಿಗೆ ಹೋಗುತ್ತಿದ್ದ ಹಾಗೆ ನಮ್ಮ ಮಗಳ ದೇಹಕ್ಕೆ ಕೆಲವು ಯಂತ್ರಗಳನ್ನು ಅಳವಡಿಸಿದರು. ಮೂಗಿಗೆ ಟ್ಯೂಬ್ ಹಾಕಿದರು. ಆ ದೃಶ್ಯ ತೀರಾ ಯಾತನಾದಾಯಕವಾಗಿತ್ತು. ಆದರೆ ಅದರಿಂದ ಶಶಿಗೆ ಸಹಾಯ ಆಗುವಂತೆ ಕಾಣ್ತಿತ್ತು.

ವೈದ್ಯ ಅವಿನಾಶ್ ವಲವಾಲ್ಕರ್ ವಿವರಿಸಿ ಹೇಳಿದರು. ನಮ್ಮ ಮಗಳಿಗೆ ಗಿಲನ್ ಬಾರೆ ಸಿಂಡ್ರೋಮ್ ಅಂತ ತಿಳಿಸಿದರು. ಇದರಿಂದ ದೇಹದ ರೋಗನಿರೋಧಕ ಶಕ್ತಿಯೇ ಕುಂದು ಹೋಗುತ್ತದೆ. ನರಮಂಡಲ ವ್ಯವಸ್ಥೆ ಶಕ್ತಿ ಕುಂದುತ್ತದೆ. ಉಸಿರಾಟದ ಸಮಸ್ಯೆಯಾಗೊ ಒಂದೇ ಸಲಕ್ಕೆ ಲಕ್ವ ಹೊಡೆಯುತ್ತದೆ.

ಇದನ್ನು ಪೂರ್ತಿ ಗುಣಮುಖ ಮಾಡಬೇಕು ಅಂದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಅದಕ್ಕೆ 9,65,000 ಬೇಕಾಗುತ್ತದೆ ಅಂದಾಗ, ನನಗೆ ಮಾತೇ ಹೊರಡಲಿಲ್ಲ. ನನ್ನ ಮಗಳನ್ನು ಉಳಿಸಿಕೊಳ್ಳಲು ಇಷ್ಟೊಂದು ಹಣವನ್ನು ಎಲ್ಲಿಂದ ತರಲಿ?

ಪ್ರಾಥಮಿಕ ಪರೀಕ್ಷೆ ಮತ್ತು ಔಷಧಕ್ಕೆ ಈಗಾಗಲೇ 1,50,000 ಖರ್ಚಾಗಿದೆ. ಮುಖ್ಯ ಚಿಕಿತ್ಸೆ ಶುರು ಆಗುವ ಮೊದಲೇ ನಮ್ಮ ಎಲ್ಲ ಆದಾಯ ಮೂಲ- ಆದಾಯ ಮತ್ತು ಹಿತೈಷಿಗಳ ಸಾಲ ಎಲ್ಲ ಮುಗಿದುಹೋಯಿತು. ಇನ್ನು ಆಸತ್ರೆಗೆ ಹೇಗೆ ಹಣ ಕೊಡ್ತೀವಿ ಮತ್ತು ಆಕೆಯನ್ನು ಜೀವಂತ ಇಟ್ಟಿರುವ ಮಷೀನ್ ಗಳ ಹಣ ಹೇಗೆ ಕಟ್ಟೋದು?

Please help this 9 year old girl to survive

ನನಗೆ ಕೊನೆ ಭರವಸೆಯಾಗಿ ವಿಶಾಲ ಹೃದಯಿಗಳಿಂದ ದೇಣಿಗೆ ಸಂಗ್ರಹಿಸುವುದಾಗಿತ್ತು. ಯಾರು ನನ್ನ ಕಥೆಯನ್ನು ಓದುತ್ತಾರೋ ಅಂಥವರು ಶಶಿಯನ್ನು ಉಳಿಸಿಕೊಳ್ಳಲು ನೆರವು ನೀಡಿದರೆ ಬದುಕಿಸಿಕೊಳ್ಳಬಹುದು.

ಆಕೆ ಕಣ್ಣು ಬಿಟ್ಟಾಗ ತನ್ನ ಪರಿಚಯದವರು ಇದ್ದಾರಾ ಅಂತ ಸುತ್ತ ನೋಡ್ತಾಳೆ. ಮಾತನಾಡಲು ಹಲವು ಸಲ ಪ್ರಯತ್ನ ಪಡ್ತಾಳೆ. ಆಕೆಗೆ ಮಾತನಾಡಲು ಆಗದಿದ್ದಾಗ ಸನ್ನೆ ಮಾಡ್ತಾಳೆ, ಗಾಳಿಯಲ್ಲಿ ಬರೆದು ತೋರಿಸುತ್ತಾಳೆ. ಅವಳು ಪರೀಕ್ಷೆ ಬಗ್ಗೆ ಕೇಳ್ತಿದ್ದಾಳೆ ಅಂತ ನನಗೆ ಗೊತ್ತಾಗುತ್ತದೆ.

ಅವಳ ಉಳಿದ ಗೆಳತಿಯರು ಮುಂದಿನ ಸೆಮಿಸ್ಟರ್ ಗೆ ಹೋಗಿ, ತಾನೆಲ್ಲಿ ಹಿಂದೆ ಉಳಿಯುತ್ತೀನೋ ಎಂಬ ಆತಂಕ ಅವಳದು. ಆಕೆಯ ಶಿಕ್ಷಕಿಯರ ಜತೆಗೆ ಮಾತನಾಡಿದ್ದೀನಿ ಯೋಚನೆ ಮಾಡಬೇಡಿ ಅಂತ ಹೇಳಿದ್ದೀನಿ. ಸತ್ಯ ಏನೆಂದರೆ, ನಮ್ಮ ಪರಿಸ್ಥಿತಿ ಬಗ್ಗೆ ಆಕೆ ಶಾಲೆಗೆ ಏನೂ ತಿಳಿಸಿಲ್ಲ. ಆದರೆ ಅವಳಿಗೆ ಅದನ್ನು ಹೇಳಕ್ಕಾಗಲ್ಲ. ಅವಳು ಹತ್ತು ಮಾತನಾಡಿದರೆ ಎಂಟು ಪರೀಕ್ಷೆ ಬಗ್ಗೆಯೇ ಇರುತ್ತದೆ.

ಶಶಿಯ ಮೂಗಿಗೆ ಹಾಕಿರುವ ಟ್ಯೂಬ್ ಬಗ್ಗೆ ಆಕೆಗೆ ಸಿಟ್ಟಿದೆ. ನನ್ನ ಹೃದಯ ಕಿತ್ತುಬರುವ ಹಾಗೆ ಆಗೋದು ಅವಳ ಮೌನ. ಶಶಿ ಮಾತನಾಡಲು ಪ್ರಯತ್ನಿಸುವಾಗ ಆಗುವ ನೋವಿನ ಕಾರಣಕ್ಕೆ ಕೋಪವೋ ಪ್ರತಿಭಟನೆಯೂ ಅವಳಿಂದ ಸಾಧ್ಯವಾಗುತ್ತಿಲ್ಲ. ಸುಮ್ಮನೆ ಅಳುತ್ತಾಳೆ. ಅವಳ ಮೂಗಿಗೆ ಹಾಕಿದ ಟ್ಯೂಬ್ ತೋರಿಸಿ, ತೆಗೆಯಲು ಸನ್ನೆ ಮಾಡುತ್ತಾಳೆ.

ಒಂಬತ್ತು ವರ್ಷದ ಹುಡುಗಿ ಇಪ್ಪತ್ತು ದಿನಗಳ ಕಾಲ ಒಂದೂ ಮಾತನಾಡದೆ ಇರೋದಕ್ಕೆ ಸಾಧ್ಯವಾ? ಅವಳು ಏನು ಹೇಳೋದಿಕ್ಕೆ ಪ್ರಯತ್ನಿಸ್ತಿದಾಳೆ ಅಂತ ಊಹಿಸಿ ಮಾತನಾಡುತ್ತಾ ಇದ್ದೀವಿ. ಆಕೆಯ ಬೆಡ್ ಪಕ್ಕದಲ್ಲಿ ಒಂದು ಸಣ್ಣ ನೋಟ್ ಬುಕ್, ಪೆನ್ ಇಟ್ಟಿದ್ದೀವಿ. ನಮಗೆ ಆಕೆ ಹೇಳುವುದು ಅರ್ಥ ಆಗದಿದ್ದಾಗ ಬರೆದು ತೋರಿಸ್ತಾಳೆ.

ಅವಳ ಧ್ವನಿ, ಮನೆ ಸುತ್ತ ಅವಳ ಓಡಾಟ ಎಲ್ಲ ನೆನಪಾಗುತ್ತದೆ. ಅವಳ ದೊಡ್ಡ ಅಕ್ಕಂದಿರು-ಅಣ್ಣನಿಗೆ ಪುಟ್ಟ ತಂಗಿಯನ್ನು ನೋಡುವ ಆಸೆ. ಅವಳನ್ನು ಈ ಸ್ಥಿತಿಯಲ್ಲಿ ತಂದೆ-ತಾಯಿಗಳಾದ ನಮಗೆ ನೋಡುವುದಕ್ಕೆ ಆಗ್ತಿಲ್ಲ. ಅವರನ್ನು ಹೇಗೆ ಕರೆದುಕೊಂಡು ಹೋಗೋದು?

ಇನ್ನೂ ಹದಿನೈದು ದಿನ ಅವಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ. ಆಗಷ್ಟೇ ಅವಳಲ್ಲಿ ಸುಧಾರಣೆ ಸಾಧ್ಯ. ಅದರರ್ಥ, ವೆಂಟಿಲೇಟರ್, ಐಸಿಯು, ಆಸ್ಪತ್ರೆ ಹಾಗೂ ಔಷಧದ ಖರ್ಚು ಅಂತ ಭಾರೀ ಹಣ ಬೇಕಾಗುತ್ತದೆ. ನೆರವು ಸಿಗದೆ ಇವ್ಯಾವುದನ್ನೂ ನಾವು ಒದಗಿಸುವುದಕ್ಕೆ ಸಾಧ್ಯವಿಲ್ಲ. ಕೆಟ್ಟೋದಲ್ಲಿ ದೇಣಿಗೆ ನೀಡುವ ಮೂಲಕ ನಮ್ಮ ಮಗಳನ್ನು ಉಳಿಸಿಕೊಳ್ಳುವುದಕ್ಕೆ ದಯವಿಟ್ಟು ಸಹಾಯ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X