ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನೆರವಿನಿಂದ ಮಾತ್ರ 8 ತಿಂಗಳ ಅನಿರುದ್ಧ ಚೇತರಿಸಿಕೊಳ್ಳಬಲ್ಲ

Google Oneindia Kannada News

ಪಿಳಿಪಿಳಿ ಕಣ್ಣು ಬಿಟ್ಟುಕೊಂಡು, ತನ್ನ ಪುಟ್ಟ ಬೆರಳುಗಳಿಂದ ನಮ್ಮ ಬೆರಳನ್ನು ಗಟ್ಟಿಯಾಗಿ ಆ ಪುಟಾಣಿ ಕಂದಮ್ಮ ಹಿಡಿದಾಗ ಸಂತೋಷ ಉಕ್ಕಿ ಬರುವುದಿಲ್ಲ, ಬದಲಾಗಿ ಕಣ್ಣಾಲಿಗಳಲ್ಲಿ ಛಳ್ಳನೆ ನೀರು ಉಕ್ಕುತ್ತದೆ. ದೇವರೇ, ಈ ಮುದ್ದಾದ ಮಗುವನ್ನು ಕಾಪಾಡಪ್ಪಾ ಎಂದು ಕಾಣದ ಆ ಶಕ್ತಿಯಲ್ಲಿ ಬೇಡಿಕೊಳ್ಳುವಂತಾಗುತ್ತದೆ. ಇನ್ನು ಆ ಮಗುವಿನ ತಾಯಿಗೆ ಹೇಗಾಗಿರಬಾರದು? ಅವರ ಮಾತಲ್ಲೇ ಕೇಳಿರಿ.

"ಅನಿರುದ್ಧ ನಮ್ಮ ಒಬ್ಬನೇ ಮಗ. ಪ್ರತಿ ರುಪಾಯಿಗೂ ಲೆಕ್ಕ ಹಾಕುವ ನನ್ನ ಗಂಡ, ಅವನು ನನ್ನ ಗರ್ಭದಲ್ಲಿರುವಾಗ, ಮನೆಯನ್ನೆಲ್ಲಾ ಆಟಿಕೆ ಹಾಗೂ ಮಗುವಿಗೆ ಅಗತ್ಯವಿರುವ ವಸ್ತುಗಳಿಂದ ತುಂಬಿದ್ದರು. ಜೊತೆಗೆ ಮಗುವಿನ ಆಗಮನಕ್ಕೆ ಬೇಕಾದ ಸಿದ್ಧತೆ ಎಲ್ಲವನ್ನೂ ಮಾಡಿಕೊಂಡಿದ್ದರು.

"ನಾನು ಸಹ ಮಗುವಿಗೆ ಏನು ಹೆಸರಿಡುವುದು ಎಂದು ಸಾಕಷ್ಟು ಹುಡುಕಾಟ ನಡೆಸಿದ್ದೆ. ಮಗುವಿನೊಂದಿಗೆ ಹೇಗೆಲ್ಲ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಇಂದು ನಮ್ಮ ಆ ಎಲ್ಲಾ ಸಂತೋಷವು ಮಾಯವಾಗಿದೆ. ಮಗುವನ್ನು ಉಳಿಸಿಕೊಳ್ಳುವುದೊಂದೇ ನಮ್ಮ ಜೀವನದ ಪ್ರಮುಖ ಗುರಿಯಾಗಿದೆ" ಎಂದು ಕಣ್ಣೀರಿಡುತ್ತಾರೆ ಅನಿರುದ್ಧನ ತಾಯಿ.

ಅನಿರುದ್ಧನ ತಾಯಿಗೆ ಅಕಾಲಿಕ ವಿತರಣಾ ಸಮಸ್ಯೆ ಇತ್ತು. ಅಕಾಲಿಕ ಜನನದಿಂದಾಗಿ ಅನಿರುದ್ಧನ ಕರುಳು ಸಂಪೂರ್ಣ ರೂಪುಗೊಂಡಿರಲಿಲ್ಲ. ಈ ಸಮಸ್ಯೆ ಇರುವ ಮಗುವಿಗೆ ರಕ್ತಸ್ರಾವ ಇಲ್ಲದೆಯೇ ಕೋಶಗಳನ್ನು ಹೊರಹಾಕಲು ಕಷ್ಟವಾಗುತ್ತದೆ. ಹಾಗಾಗಿ ಮೂರು ಹಂತದ ಕೊಲೊಸ್ಟೋಮಿ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದರು.

ಒಂದು ನವಜಾತ ಮಗುವಿನ ಪ್ರಾಣ ಉಳಿಸಿದ ಭಾಗ್ಯ ನಿಮ್ಮದಾಗಲಿಒಂದು ನವಜಾತ ಮಗುವಿನ ಪ್ರಾಣ ಉಳಿಸಿದ ಭಾಗ್ಯ ನಿಮ್ಮದಾಗಲಿ

ತಿಂಗಳಿಗೆ 15 ಸಾವಿರ ಆದಾಯ ಇರುವ ಅನಿರುದ್ಧನ ಪೋಷಕರಿಗೆ ಚಿಕಿತ್ಸೆ ಹಣ ಭರಿಸುವುದು ಬಹಳ ಕಷ್ಟಕರವಾದ ಸಂಗತಿಯಾಗಿತ್ತು. ಈಗಾಗಲೇ 250,000 ರುಪಾಯಿ ಸಾಲ ಪಡೆಯುವ ಮೂಲಕ ಮಗುವಿಗೆ ಮೊದಲ ಹಂತದ ಚಿಕಿತ್ಸೆಯನ್ನು ಮಾಡಿಸಿದ್ದಾರೆ. ಚಿಕಿತ್ಸೆಯೂ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ಮಗುವಿನ ಇನ್ನೆರಡು ಹಂತದ ಚಿಕಿತ್ಸೆ ಬಗ್ಗೆ ವೈದ್ಯರು ಭರವಸೆ ನೀಡಿದ್ದರು.

ಎರಡನೇ ಹಂತದ ಚಿಕಿತ್ಸೆಗಾಗಿ ತಮ್ಮ ಸ್ನೇಹಿತರು, ಹತ್ತಿರದ ಹಾಗೂ ದೂರದ ಸಂಬಂಧಿಗಳಿಂದ ಪೋಷಕರು ಹಣವನ್ನು ಪಡೆದರು. ಔಷಧಿ ಹಾಗೂ ಚಿಕಿತ್ಸೆಯು ಫಲಕಾರಿ ಪರಿಣಾಮ ನೀಡಿದ ಪರಿಣಾಮ ಇದೀಗ ಮಗು ಮೂರನೇ ಹಂತದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಬಾಕಿಯಿದೆ.

ಗಾರೆ ಕೆಲಸದವನ 1 ವರ್ಷದ ಮಗು ಉಳಿಸಲು ಸಹಾಯ ಮಾಡಿಗಾರೆ ಕೆಲಸದವನ 1 ವರ್ಷದ ಮಗು ಉಳಿಸಲು ಸಹಾಯ ಮಾಡಿ

"ಐಸಿಯುನಲ್ಲಿ ಮಗು ನೋವಿನಿಂದ ಮಲಗಿರುವುದು, ತಾಯಿಯ ಸಂಪರ್ಕವಿಲ್ಲದೆ ಇರುವುದನ್ನು ನೋಡಲಾಗುತ್ತಿಲ್ಲ. ನಮ್ಮ ಜೀವನದ ಆಶಾ ದೀಪವಾದ ಮಗುವನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದೇವೆ. ಅವನ ಈ ಕಷ್ಟಗಳನ್ನು ದೇವರು ಬಹು ಬೇಗ ದೂರ ಮಾಡಲಿ, ನನ್ನ ಮಡಿಲಲ್ಲಿ ಮಗು ಆರೋಗ್ಯವಾಗಿ ನಲಿದಾಡಲಿ ಎಂದು ಬಯಸುತ್ತಿದ್ದೇನೆ" ಎಂದು ಕಣ್ಣೀರು ಹಾಕುತ್ತಾರೆ ಅನಿರುದ್ಧನ ತಾಯಿ.

ಮಗುವಿನ ಎರಡು ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಇದೀಗ ಮೂರನೇ ಹಂತದ ಚಿಕಿತ್ಸೆಯನ್ನು ನೀಡಿದರೆ ಮಗು ತೊಂದರೆಯಿಂದ ಪಾರಾಗುವುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ ಆ ಮೂರನೇ ಹಂತದ ಚಿಕಿತ್ಸೆಗೆ ಹಣವನ್ನು ಒದಗಿಸಲು ದಂಪತಿಯ ಬಳಿ ಹಣವಿಲ್ಲ. ಹಾಗಾಗಿ ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಅನಿರುದ್ಧನ ಅಂತಿಮ ಹಂತದ ಚಿಕಿತ್ಸೆಗಾಗಿ ನಿಮ್ಮಿಂದ ಹಣ ಸಹಾಯ ಆಗಬೇಕಿದೆ. ಈ ಸಹಾಯವನ್ನು ನಮ್ಮ ಜನ್ಮದಲ್ಲಿ ಮರೆಯುವುದಿಲ್ಲ. ಪ್ರಪಂಚವನ್ನು ಸರಿಯಾಗಿ ಕಣ್ಣು ಬಿಟ್ಟು ನೋಡದ ನನ್ನ ಕಂದಮ್ಮನನ್ನು ಉಳಿಸಿಕೊಳ್ಳಲು ಸಹಾಯ ಮಾಡಿ. ನಿಮ್ಮ ಅಲ್ಪ ಸಹಾಯವು ನಮಗೊಂದು ಮಹತ್ತರವಾದ ವರದಾನ ಆಗುವುದು. ಆ ಮುಗ್ಧ ಜೀವವು ನೋವಿನಿಂದ ನರಳುವುದು ತಪ್ಪುವುದು. ನಿಮ್ಮ ಸಹಾಯದಿಂದ ನಮ್ಮ ಕುಟುಂಬದ ಸಂತೋಷ ಮರಳುವುದು ಎಂದು ಕಣ್ಣೀರಿಡುವ ಮೂಲಕ ಕೇಳಿಕೊಳ್ಳುತ್ತಿದ್ದಾರೆ ಅನಿರುದ್ಧನ ಪೋಷಕರು.

ನೋವಿನಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ ಲಕ್ಷಣ. ಇಂದು ಮಾಡುವ ಸಹಾಯವು ಮುಂದಿನ ದಿನದಲ್ಲಿ ಯಾವುದಾದರೂ ಒಂದು ರೂಪದಲ್ಲಿ ನಮಗೆ ವಾಪಸಾಗುತ್ತದೆ. ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ, ಕಷ್ಟದಲ್ಲಿರುವ ನಮ್ಮ ಕುಟುಂಬಕ್ಕೆ ನೆರವಾಗಲು ಸಹಾಯ ನಿಧಿಗೆ ಹಣ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X