ಚಿತ್ರಗಳಲ್ಲಿ: 26/11 ಉಗ್ರ ದಾಳಿ ಕರಾಳ ನೆನಪು
ನವದೆಹಲಿ,
ನ. 26: ಮುಂಬೈ ಮೇಲೆ ಉಗ್ರಗಾಮಿಗಳು ದಾಳಿ ಮಾಡಿದ್ದಾಗ ವಿರೋಚಿತವಾಗಿ ಹೋರಾಡಿ ದೇಶಕ್ಕಾಗಿ ಮಣಿದ ವೀರ ಯೋಧರಿಗೆ ನಮನ. ಜೀವ ಕಳೆದುಕೊಂಡವರಿಗೆ ಕಂಬನಿ. ನೇಪಾಳದಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಸಂಸತ್ ಚಳಿಗಾಲದ ಅಧಿವೇಶನದ ಮೂರನೇ ದಿನದ ಕಾರ್ಯಕಲಾಪಗಳು ಬುಧವಾರದ ಹೈಲೈಟ್ಸ್. id="toptextpromo"> id='are-slot-1' class='oiad oi-axt oiadv'>ರಾಜೀವ್
ಗಾಂಧಿ ವಿಮಾನ ನಿಲ್ದಾಣ ಹೆಸರು ಬದಲಿಸದಂತೆ ದೆಹಲಿ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಧರಣಿ , ಪ್ರತ್ಯೇಕ ಹೈಕೋರ್ಟ್ ಪೀಠ ನೀಡಲು ಉತ್ತರ ಪ್ರದೇಶದ ವಕೀಲರಿಂದ ಸಂಸತ್ ಭವನದ ಮುಂದೆ ಪ್ರತಿಭಟನೆ ಎಲ್ಲಕ್ಕೂ ಬುಧವಾರ ಸಾಕ್ಷಿಯಾಯಿತು.(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಮುಂಬೈ ದಾಳಿ ಕರಾಳ ನೆನಪು
26/11 ರ ಉಗ್ರಗಾಮಿಗಳ ಗುಂಡಿನ ದಾಳಿಗೆ ಒಳಗಾದ ಗೋಡೆ.

ಪುಷ್ಪ ನಮನ
ಮುಂಬೈ ಉಗ್ರಗಾಮಿ ದಾಳಿ ವೇಳೆ ಜೀವ ಕಳೆದುಕೊಂಡವರಿಗೆ ಪುಷ್ಪ ನಮಮ ಸಲ್ಲಿಸಿದ ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಾಲಸ್ಕರ್ ಪತ್ನಿ ಸ್ಮಿತಾ ಸಾಲಸ್ಕರ್.

ಹೆಸರು ಬದಲಾವಣೆ ಬೇಡ
ಹೈದ್ರಾಬಾದ್ ರಾಜೀವ್ ಗಾಂಧಿ ವಿಮಾನ ನಿಲ್ದಾಣ ಹೆಸರು ಬದಲಿಸದಂತೆ ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ಕಾಂಗ್ರೆಸ್ ಮುಖಂಡರು.

ಪ್ರತ್ಯೇಕ ಪೀಠ ಬೇಕು
ಪ್ರತ್ಯೇಕ ಹೈಕೋರ್ಟ್ ಪೀಠ ನೀಡಲು ಒತ್ತಾಯಿಸಿ ಉತ್ತರ ಪ್ರದೇಶದ ವಕೀಲರಿಂದ ಸಂಸತ್ ಭವನದ ಮುಂದೆ ಪ್ರತಿಭಟನೆ.

ಚೋಪ್ರಾ ಚಮಕ್
ಮುಂಬೈನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ.

ಕಾರಟ್ ಮಾತು
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೆಹಲಿಯಲ್ಲಿ ಧರಣಿ ನಡೆಸುತ್ತಿರುವ ಉದ್ಯೋಗ ಖಾತ್ರಿ ಕಾರ್ಮಿರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮುಖಂಡ ಪ್ರಕಾಶ್ ಕಾರಟ್.

ಬಾಂಗ್ಲಾ ಬಾಂಧವ್ಯ ವೃದ್ಧಿ ಸಾಧ್ಯವೇ?
ನೇಪಾಳದ ಕಡ್ಮಂಡುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಪ್ರಧಾನಿ ಶೆಕ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದರು.

ರಾಜಪಕ್ಷೆ ಭೇಟಿ
ನೇಪಾಳದ ಕಡ್ಮಂಡುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಅವರನ್ನು ಭೇಟಿ ಮಾಡಿ ಮಾತನಾಡಿದರು

ಸಂಸತ್ ಅಧಿವೇಶನ
ಚಳಿಗಾಲದ ಸಂಸತ್ ಅಧಿವೇಶನದ ಮೂರನೇ ದಿನ ವಿರೊಧ ಪಕ್ಷದ ನಾಯಕರು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು.












Click it and Unblock the Notifications