ಇದೋ ಬಂತು ನೋಡಿ ರಾಹುಲ್ ಗಾಂಧಿ ಬ್ಲ್ಯಾಕ್ ಬೆಲ್ಟ್ ಫೋಟೋ

Subscribe to Oneindia Kannada

ಬೆಂಗಳೂರು, ನವೆಂಬರ್ 1: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮಾರ್ಷಲ್ ಆರ್ಟ್ ನ ಚಿತ್ರಗಳು ಕೊನೆಗೂ ಹೊರ ಬಿದ್ದಿವೆ.

ವಿವಿಧ ಭಂಗಿಗಳಲ್ಲಿ ರಾಹುಲ್ ಗಾಂಧಿ ಐಕಿಡೋ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಭರದ್ ಎಂಬವರು ಟ್ವೀಟ್ ಮಾಡಿದ್ದು ಈ ಚಿತ್ರಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ರೀ ಟ್ವೀಟ್ ಮಾಡಲಾಗಿದೆ.

ಯುವತಿಯ ಜೊತೆ ಸೆಲ್ಫಿ, ರಂಗುರಂಗೇರಿದ ರಾಹುಲ್

ಇತ್ತೀಚೆಗಷ್ಟೇ ರಾಹುಲ್ ಗಾಂಧಿ ತಾವು ಐಕಿಡೋದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಪುರಾವೆಯಾಗಿ ಈ ಚಿತ್ರಗಳೀಗ ಹೊರ ಬಿದ್ದಿವೆ.

 ಐಕಿಡೋದಲ್ಲಿ ಬ್ಲ್ಯಾಕ್ ಬೆಲ್ಟ್

ಐಕಿಡೋದಲ್ಲಿ ಬ್ಲ್ಯಾಕ್ ಬೆಲ್ಟ್

ಅಕ್ಟೋಬರ್ 26ರಂದು ಕಾರ್ಯಕ್ರಮವೊಂದರಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ ತಮ್ಮ ವಿಶಿಷ್ಟ ಹವ್ಯಾಸಗಳನ್ನು ಬಹಿರಂಗಪಡಿಸಿದ್ದರು.

ನಾನು ಓಟ, ಈಜು ಎಲ್ಲವನ್ನೂ ಮಾಡುತ್ತೇನೆ. ಇದರ ಜತೆಗೆ ಐಕಿಡೋ ದಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ಪಡೆದಿದ್ದೇನೆ ಎಂದು ಹೇಳಿ ತಮ್ಮ ಸಾಮರ್ಥ್ಯಗಳನ್ನು ತೆರೆದಿಟ್ಟಿದ್ದರು.

 ನಾನು ಹೇಳಿಕೊಂಡು ಓಡಾಡಿಲ್ಲ

ನಾನು ಹೇಳಿಕೊಂಡು ಓಡಾಡಿಲ್ಲ

ಬಾಕ್ಸರ್ ವಿಜೇಂದರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್, "ತಾವು ಯಾವತ್ತೂ ಇದನ್ನು ಬಹಿರಂಗವಾಗಿ ಹೇಳಿಕೊಂಡು ಓಡಾಡಿಲ್ಲ," ಎಂದು ಹೇಳಿ ಮೋದಿಗೆ ತೀಕ್ಷ್ಣವಾಗಿ ಟಾಂಗ್ ನೀಡಿದ್ದರು. 'ಕ್ರೀಡೆಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಿದೆ' ಎಂದೂ ರಾಹುಲ್ ಇದೇ ಸಂದರ್ಭದಲ್ಲಿ ಹೇಳಿದ್ದರು.

ಹೊರ ಬಿತ್ತು ಫೋಟೋ

ಸೆನ್ಸೈ ಪಾರಿಟೋಸ್ ಕಾರ್ ಎಂಬವರ ಜತೆ ರಾಹುಲ್ ಗಾಂಧಿ ಐಕಿಡೋ ಅಭ್ಯಾಸ ಮಾಡುವ ಚಿತ್ರಗಳು ಇದಾಗಿವೆ ಎಂದು ಭರದ್ ಎಂಬವರು ಟ್ವೀಟ್ ನಲ್ಲಿ ಹೇಳಿದ್ದಾರೆ.

 ಏನಿದು ಐಕಿಡೋ

ಏನಿದು ಐಕಿಡೋ

ಜಪಾನಿನ ಆಧುನಿಕ ಮಾರ್ಷಲ್ ಆರ್ಟ್ ನ್ನು ಐಕಿಡೋ ಎನ್ನುತ್ತಾರೆ. ಇದರಲ್ಲೇ ರಾಹುಲ್ ಗಾಂಧಿ ತಾವು ಬ್ಲ್ಯಾಕ್ ಬೆಲ್ಟ್ ಪಡೆದಿರುವುದಾಗಿ ಹೇಳಿದ್ದರು. ಆದರೆ ರಾಹುಲ್ ಗಾಂಧಿಯನ್ನು ಹಲವರು ಅನುಮಾನಿಸಿದ್ದರು. ಇದೀಗ ಪುರಾವೆಯಾಗಿ ಚಿತ್ರಗಳು ಹೊರ ಬಿದ್ದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice president Rahul Gandhi shows off his martial art moves in his Aikido training photos. Recently Gandhi had said that he holds a black belt in Japanese martial art Aikido.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ