ಟ್ರೆಂಡಿಂಗ್ : ರಾಜಸ್ಥಾನದ ಬಿಜೆಪಿ ಶಾಸಕನ ಮೂತ್ರ ವಿಸರ್ಜನೆ

ಜೈಪುರ, ಅಕ್ಟೋಬರ್ 08: ಒಂದು ಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ ಭಾರತ್ ಗಾಗಿ ಅಭಿಯಾನ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕರೊಬ್ಬರೂ ಬಯಲಿನಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂಬ ಒಕ್ಕಣೆಯೊಂದಿಗೆ ರಾಜಸ್ಥಾನದ ಶಾಸಕರೊಬ್ಬರ ಮೂತ್ರ ವಿಸರ್ಜನೆ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ವಿಷಯವಾಗಿದೆ.

ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಚುನಾವಣಾ ಪ್ರಚಾರದ ಪೋಸ್ಟರ್ ಪಕ್ಕದಲ್ಲೇ ಕುಳಿತ ಶಾಸಕರು ಮೂತ್ರ ವಿಸರ್ಜನೆ ಮಾಡುತ್ತಿರುವ ಚಿತ್ರ ಟ್ವಿಟ್ಟರ್ ನಲ್ಲಿ ಮೊದಲಿಗೆ ಕಾಣಿಸಿಕೊಂಡಿದೆ.

ರಾಜಸ್ಥಾನದ ಬೀಜ ನಿಗಮದ ನಿರ್ದೇಶಕರಾಗಿರುವ ಶಂಭು ಸಿಂಗ್ ಖೇತಾಸರ್ ಅವರು ಮೂತ್ರ ವಿಸರ್ಜನೆ ಮಾಡಿ ಸಿಕ್ಕಿಬಿದ್ದ ರಾಜಕಾರಣಿಯಾಗಿದ್ದಾರೆ.

Photo Of Rajasthan Politician Urinating In Public Is Viral. He Defends It

' ನಾನು ಮೂತ್ರ ವಿಸರ್ಜನೆ ಮಾಡುವ ಚಿತ್ರ ಎಲ್ಲೆಡೆ ಹರಡುತ್ತಿದೆ ಎಂಬ ಸುದ್ದಿ ತಿಳಿಯಿತು. ನಾನು ಮೂತ್ರ ವಿಸರ್ಜನೆ ಮಾಡಿದ ಗೋಡೆ ಬಳಿ ಯಾವುದೇ ಪ್ರಚಾರ ಪೋಸ್ಟರ್ ಇರಲಿಲ್ಲ ' ಎಂದಿದ್ದಾರೆ.

ನಾನು ಹೋಗಿದ್ದ ಬಿಜೆಪಿ ಚುನಾವಣೆ ಸಮಾವೇಶದ ಸ್ಥಳದ ಬಳಿ ಯಾವುದೇ ಶೌಚಾಲಯ ಸೌಲಭ್ಯ ಇರಲುಲ್ಲ. ಸುಮಾರು 2.5 ಲಕ್ಷ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಾನು ತುಂಬಾ ಕೆಲಸದಲ್ಲಿ ನಿರತನಾಗಿದ್ದು, ಆ ಸಮಯಕ್ಕೆ ನನಗೆ ಕಂಡ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ಲೀನ್ ಇಂಡಿಯಾ ಅಭಿಯಾನಕ್ಕೆ ಇದರಿಂದ ಧಕ್ಕೆ ಉಂಟಾಗಿಲ್ಲ. ತೆರೆದ ಸ್ಥಳಗಳಲ್ಲಿ ಮಲ ಮತ್ತು ಮೂತ್ರ ವಿಸರ್ಜನೆ ವಿಭಿನ್ನವಾಗಿದೆ. ತೆರೆದ ಮಲವಿಸರ್ಜನೆಗೆ ಒಡ್ಡುವಿಕೆಯು ರೋಗಗಳಿಗೆ ಕಾರಣವಾಗಬಹುದು, ಆದರೆ, ಮೂತ್ರ ವಿಸರ್ಜನೆಯು ಯಾವುದೇ ಸಮಸ್ಯೆಯಾಗಿಲ್ಲ ಎಂದು ತಮ್ಮ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+