ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಬಂಧಿತ ಪಿಎಫ್‌ಐ ಮುಖಂಡ ಅಮೀರ್ ಹಮ್ಜಾ ಗುವಾಹಟಿಗೆ

|
Google Oneindia Kannada News

ಗುವಾಹಟಿ, ನ. 14: ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ವಿದ್ಯಾರ್ಥಿ ಘಟಕದ ನಾಯಕ ಅಮೀರ್ ಹಮ್ಜಾ ಅವರನ್ನು ಗುವಾಹಟಿಗೆ ಕರೆತರಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಅಮೀರ್ ಹಮ್ಜಾನನ್ನು ಶುಕ್ರವಾರ ರಾತ್ರಿ ಡಿಎಸ್ಪಿ ದರ್ಜೆಯ ಅಧಿಕಾರಿ ನೇತೃತ್ವದ ಅಸ್ಸಾಂ ಪೊಲೀಸರ ತಂಡ ಬಂಧಿಸಿದೆ. ವಿದ್ಯಾರ್ಥಿ ಮುಖಂಡ ಹಮ್ಜಾ ಬೆಂಗಳೂರಿನಲ್ಲಿ ವಾಸವಿರುವ ಕೆಲವು ತ್ರಿಪುರಾ ಮೂಲಕ ಕುಟುಂಬಗಳೊಂದಿಗೆ ತಲೆಮರೆಸಿಕೊಂಡಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎಯಿಂದ 15ನೇ ಆರೋಪಿ ಬಂಧನಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎಯಿಂದ 15ನೇ ಆರೋಪಿ ಬಂಧನ

"ಬಂಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ನಾಯಕ ಅಮೀರ್ ಹಮ್ಜಾ ಜೊತೆಗೆ ಅಸ್ಸಾಂ ಪೊಲೀಸ್ ತಂಡವು ಬೆಂಗಳೂರಿನಿಂದ ಗುವಾಹಟಿ ತಲುಪಿದೆ" ಎಂದು ಅಸ್ಸಾಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

PFI Student Wing Leader Brought To Guwahati Who Arrested In Bengaluru

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರೋಪಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಸೋಮವಾರ ಗುವಾಹಟಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ.

ಬಕ್ಸಾ ಜಿಲ್ಲೆಯ ಅಮೀರ್ ಹಮ್ಜಾ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

PFI Student Wing Leader Brought To Guwahati Who Arrested In Bengaluru

ಆರೋಪಿ ಮನೆಯಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಎಬಿವಿಪಿ ವಿರುದ್ಧದ ಪೋಸ್ಟರ್‌ಗಳು ಮತ್ತು ಹಿಜಾಬ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳು ಸೇರಿವೆ. ಪಿಎಫ್‌ಐ ಮತ್ತು ಸಿಎಫ್‌ಐ ಲೆಟರ್‌ಹೆಡ್‌ಗಳು ಮತ್ತು ಹಲವಾರು ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಇದುವರೆಗೆ ಕನಿಷ್ಠ 40 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಗುವಾಹಟಿಯ ಹಟಿಗಾಂವ್ ಪ್ರದೇಶದಲ್ಲಿನ ಪಿಎಫ್‌ಐ ಅಸ್ಸಾಂನ ಮುಖ್ಯ ಕಚೇರಿ ಮತ್ತು ಕರೀಮ್‌ಗಂಜ್ ಮತ್ತು ಬಕ್ಸಾದಲ್ಲಿರುವ ಸಂಘಟನೆಯ ಸ್ಥಳೀಯ ಕಚೇರಿಗಳಿಗೆ ಈಗಾಗಲೇ ಬೀಗ ಜಡಿಯಲಾಗಿದೆ.

English summary
Banned PFI student wing leader Amir Hamza who was arrested in Bengaluru, brought to Guwahati said Assam Police. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X