ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್‌ಐ ಸಂಘಟನೆಗೆ ವಿದೇಶದಿಂದ 100 ಕೋಟಿ ರೂ ರವಾನೆ

|
Google Oneindia Kannada News

ನವದೆಹಲಿ, ಫೆಬ್ರವರಿ 11: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ವಿದ್ಯಾರ್ಥಿ ಘಟಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್‌ಐ) ಐವರು ಸದಸ್ಯರ ವಿರುದ್ಧ ಲಕ್ನೋದ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

'ಗಲ್ಫ್ ದೇಶಗಳಲ್ಲಿ ಇರುವ ಪಿಎಫ್‌ಐ ಸದಸ್ಯರೊಂದಿಗೆ ಸೇರಿಕೊಂಡಿದ್ದ ಸಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಎ ರಾವುಫ್ ಶೆರೀಫ್, ಉದ್ಯಮ ವಹಿವಾಟಿನ ಪಾವತಿಯ ನೆಪದಲ್ಲಿ ಪಿಎಫ್‌ಐ ಸಂಗ್ರಹಿಸಿದ ಹಣವನ್ನು ವರ್ಗಾಯಿಸುವಂತೆ ಮಾಡುತ್ತಿದ್ದ. ವಿಭಿನ್ನ ಹಂತಗಳಲ್ಲಿ ಈ ಹಣವನ್ನು ರವಾನಿಸಲಾಗುತ್ತಿತ್ತು. ಬಳಿಕ ಅದು ಶೆರೀಫ್ ಮತ್ತು ಪಿಎಫ್‌ಐ ಹಾಗೂ ಸಿಎಫ್‌ಐನ ಆತನ ಸಹವರ್ತಿಗಳಿಗೆ ತಲುಪುತ್ತಿತ್ತು' ಎಂದು ಇ.ಡಿ ಹೇಳಿದೆ.

ಪಿಎಫ್ಐ ಚೇರ್ಮನ್ ಮನೆ ಸೇರಿದಂತೆ ವಿವಿಧೆಡೆ ED ದಾಳಿಪಿಎಫ್ಐ ಚೇರ್ಮನ್ ಮನೆ ಸೇರಿದಂತೆ ವಿವಿಧೆಡೆ ED ದಾಳಿ

ಹಲವು ವರ್ಷಗಳಿಂದ ಪಿಎಫ್‌ಐನ ಖಾತೆಗಳಲ್ಲಿ 100 ಕೋಟಿಗೂ ಅಧಿಕ ರೂಪಾಯಿ ಹಣ ಜಮೆಯಾಗಿದೆ. ಹೆಚ್ಚಿನ ಪ್ರಮಾಣದ ಹಣ ನಗದು ರೂಪದಲ್ಲಿ ಜಮೆಯಾಗಿದೆ. ಈ ನಿಧಿಗಳ ಮೂಲ ಹಾಗೂ ಇತರೆ ವಿವರಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಮದು ಅದು ವಿವರಿಸಿದೆ.

PFI, CFI Received Over Rs 100 Crore Fund Over The Years To Disturb Communal Harmony

ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ಭಾರತದ ವಿವಿಧ ಭಾಗಗಳಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸಲು, ಸಿಎಎ ವಿರೋಧಿ ಪ್ರತಿಭಟನೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಿಂಸಾಚಾರ ಸೃಷ್ಟಿಸಲು ಈ ಹಣವನ್ನು ಬಳಸಿವೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧದ ಪ್ರತಿಭಟನೆ ವೇಳೆ ಕೋಮು ಸಾಮರಸ್ಯ ಕದಡಲು ಪಿಎಫ್‌ಐ ಮತ್ತು ಸಿಎಫ್‌ಐ ಸದಸ್ಯರು ಹತ್ರಾಸ್‌ಗೆ ಭೇಟಿ ನೀಡಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

English summary
ED said PFI and CFI have received over Rs 100 crore money from various parts of India and foreign to disturb communal harmony, incite violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X