ಕಾಮರಾಜರ್ ಬಂದರಿನಲ್ಲಿ ಎರಡು ಹಡಗಿನ ಮಧ್ಯೆ ಡಿಕ್ಕಿ

Posted By:
Subscribe to Oneindia Kannada

ಚೆನ್ನೈ, ಜನವರಿ 28: ಎರಡು ಹಡಗುಗಳ ಮಧ್ಯೆ ಡಿಕ್ಕಿಯಾದ ಘಟನೆ ಕಾಮರಾಜರ್ ಬಂದರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಒಂದು ಹಡಗಿನಲ್ಲಿ ಪೆಟ್ರೋಲ್ ಇದ್ದರೆ ಮತ್ತೊಂದರಲ್ಲಿ ಎಲ್ ಪಿಜಿ ಇತ್ತು. ಆರಂಭದಲ್ಲಿ ಸಮುದ್ರದೊಳಗೆ ತೈಲ ಸೋರಿಕೆ ಆಗುತ್ತಿದೆ ಎಂದುಕೊಳ್ಳಲಾಗಿತ್ತು. ಆ ನಂತರ ಬಂದರು ಅಧಿಕಾರಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ 4ರ ಸುಮಾರಿಗೆ ಘಟನೆ ಸಂಭವಿಸಿದೆ. ಎಂಟಿ ಮೇಪಲ್ ಎಲ್ ಪಿಜಿ ಹೊತ್ತು ಬಂದರಿನಿಂದ ಹೊರಡುತ್ತಿತ್ತು. ಮತ್ತು ಎಂಟಿ ಡಾನ್ ಕಾಂಚೀಪುರಂ ಹಡಗು ಬಂದರು ಪ್ರವೇಶಿಸುತ್ತಿತ್ತು. ಎರಡರ ಮಧ್ಯೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಮಾಲಿನ್ಯವಾಗಿಲ್ಲ ಎಂದು ಬಂದರು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.[ಆಸ್ಟ್ರೇಲಿಯಾದಲ್ಲಿ ಅಪಘಾತ: ನೇತ್ರಾ ಚಿಕಿತ್ಸೆಗೆ ಹರಿಯಿತು ಹಣದ ಹೊಳೆ]

Petrol tanker ship collides with LPG tanker

ಎಲ್ಲ ಪ್ರಮುಖ ಅಧಿಕಾರಿಗಳು ಬಂದರು ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹೇಳಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಇತರ ಹಡಗುಗಳು ಸಾಮಾನ್ಯವಾಗಿ ಸಂಚರಿಸುತ್ತಿವೆ ಎಂದು ಕಾಮರಾಜರ್ ಬಂದರಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two ships, one a tanker carrying petrol and lube oil, and the other carrying LPG, collided outside the Kamarajar Port early Saturday morning.
Please Wait while comments are loading...