ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೊಂಚ ಇಳಿಕೆ
ನವದೆಹಲಿ, ಏ.1: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವ ಕಾರಣ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬುಧವಾರ ಕೊಂಚ ಇಳಿಮುಖ ಕಂಡಿದೆ. ನೂತನ ದರಗಳು ಏಪ್ರಿಲ್ 1 ಹಾಗೂ 2 ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
ಪೆಟ್ರೋಲ್ ಪ್ರತಿ ಲೀಟರ್ ಗೆ 49 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 1.21 ರು ಕಡಿಮೆಯಾಗಲಿದೆ. ಫೆ.28ರಂದು ಇಂಧನ ಬೆಲೆ ಪರಿಷ್ಕರಣೆಗೊಂಡಿತ್ತು. ಪೆಟ್ರೋಲ್ ದರವನ್ನು 3.18/ಲೀಟರ್ ಹಾಗೂ ಡೀಸೆಲ್ ಬೆಲೆ 3.096/ ಲೀಟರ್ ಏರಿಕೆ ಮಾಡಲಾಗಿತ್ತು.

ಹೊಸ ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 60 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 48.50 ಪ್ರತಿ ಲೀಟರ್ ಆಗಲಿದೆ. ಇಂಧನ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಗೊಳಪಟ್ಟಿರುತ್ತದೆ. ಮಂಗಳವಾರ ಡಾಲರ್ ಹಾಗೂ ರುಪಾಯಿ ವಿನಿಮಯ ದರ 62.49ನಷ್ಟಿತ್ತು.












Click it and Unblock the Notifications