ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ
ನವದೆಹಲಿ, ಏಪ್ರಿಲ್ 1: ಶತ್ರು ದೇಶದ ನೆಲೆಗಳಲ್ಲಿರುವ ರೇಡಾರ್‌ಗಳನ್ನು ಪತ್ತೆಹಚ್ಚಬಲ್ಲ ಎಮಿಸ್ಯಾಟ್ ಉಪಗ್ರಹವನ್ನು ಇಸ್ರೋ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.
ದೇಶದ ರಕ್ಷಣೆಯ ವಿಚಾರ ಹೆಚ್ಚು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಯನ್ನು ವಿಜ್ಞಾನಿಗಳ ಪರಿಶ್ರಮದ ಮೂಲಕ ಪಡೆದುಕೊಳ್ಳುವುದು ಭಾರತಕ್ಕೆ ಅಗತ್ಯವಾಗಿದೆ.
ಈ ಉಪಗ್ರಹದ ಜತೆಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳ 28 ಪುಟಾಣಿ ಉಪಗ್ರಹಗಳನ್ನು ಕೂಡ ಇಸ್ರೋ ಅಂತರಿಕ್ಷಕ್ಕೆ ರವಾನಿಸಿದೆ. ಅಮೆರಿಕದಂತಹ ಮುಂದುವರಿದ ದೇಶ ತನ್ನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋದ ರಾಕೆಟ್ ಬಳಸಿಕೊಳ್ಳುತ್ತಿರುವುದು ಗರಿಮೆಯೇ ಸರಿ. ಇದರಿಂದ ಇಸ್ರೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವರ್ಚಸ್ಸು ವೃದ್ಧಿಸಿಕೊಂಡಿದೆ.
ಇತರೆ 28 ಅಂತಾರಾಷ್ಟ್ರೀಯ ಉಪಗ್ರಹಗಳಲ್ಲಿ 25 ಉಪಗ್ರಹಗಳು 3ಯು ಮಾದರಿ, ಎರಡು 6ಯು ಮಾದರಿ ಮತ್ತು ಒಂದು 2ಯು ಮಾದರಿಯದ್ದಾಗಿವೆ. ಈ ನ್ಯಾನೋ ಸ್ಯಾಟಲೈಟ್‌ಗಳಲ್ಲಿ ಅಮೆರಿಕದ 24, ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್‌ನ ತಲಾ 1 ಮತ್ತು ಲಿಥುವೇನಿಯಾದ 2 ಉಪಗ್ರಹಗಳಿವೆ. ವಾಣಿಜ್ಯಾತ್ಮಕ ವ್ಯವಸ್ಥೆಯಡಿಯಲ್ಲಿ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋದ ಮತ್ತೊಂದು ಮಹತ್ತರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗಣ್ಯರು, ಜನಸಾಮಾನ್ಯರು, ವಿಜ್ಞಾನಿಗಳು ಇಸ್ರೋದ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
|
ತಂಡದ ಸದಸ್ಯರಿಗೆ ಧನ್ಯವಾದ
ಪಿಎಸ್‌ಎಲ್‌ವಿ ಸಿ45 485 ಕಿ.ಮೀ. ದೂರದ ಕಕ್ಷೆಗೆ ಪ್ರಯಾಣಿಸಿದೆ. ಅದು ಅಲ್ಲಿ ಪ್ರಯೋಗಕ್ಕೆ ಕಕ್ಷಾ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಯೋಜನೆ ಯಶಸ್ವಿಯಾಗಲು ಕಾರಣರಾದ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
| Array |
ಮಹತ್ವದ ಮೈಲುಗಲ್ಲು: ನಾಯರ್
ಪಿಎಸ್‌ಎಲ್‌ವಿ ಸಿ45 ಇಸ್ರೋಗೆ ಬಹಳ ಮಹತ್ವದ ಮೈಲುಗಲ್ಲು. ನಮ್ಮದೇ ಉಪಗ್ರಹವನ್ನು ಮಾತ್ರವಲ್ಲದೆ ಇತರೆ ದೇಶಗಳ ಉಪಗ್ರಹಗಳನ್ನೂ ಇದು ಉಡಾವಣೆ ಮಾಡಿದೆ. ಮೂರು ವಿಭಿನ್ನ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಸೇರಿಸುವುದು ಈ ಯೋಜನೆಯ ವೈಶಿಷ್ಟ್ಯ. ಇದು ಮಾಮೂಲಿಯಂತೆ ಶೇ 100ರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹೇಳಿದ್ದಾರೆ.
|
ಮತ್ತೊಂದು ಯಶಸ್ವಿ ಹೆಜ್ಜೆ
ಇಸ್ರೋದ ಈ ಸಾಧನೆಯ ಕೀರ್ತಿಯನ್ನು ವಿಜ್ಞಾನಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಚಿವ ಡಾ. ಹರ್ಷವರ್ಧನ್ ಸಲ್ಲಿಸಿದ್ದಾರೆ.
ಮತ್ತೊಂದು ಯಶಸ್ವಿ ಹೆಜ್ಜೆ ಇರಿಸಿದ್ದಕ್ಕೆ ಇಸ್ರೋಗೆ ಅಭಿನಂದನೆ ಎಮದಿರುವ ಅವರು, ನಮ್ಮ ವಿಜ್ಞಾನಿಗಳ ಬಗ್ಗೆ ಇಡೀ ದೇಶ ಹೆಮ್ಮೆ ಪಟ್ಟುಕೊಳ್ಳುತ್ತಿದೆ ಮತ್ತು ನರೇಂದ್ರ ಮೋದಿ ಅವರ ಬದ್ಧತೆಯುಳ್ಳ ನಾಯಕತ್ವದ ಅಡಿ ಮತ್ತೆ ಸಾಧನೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
| Array |
ಗೆಹ್ಲೋಟ್ ಅಭಿನಂದನೆ
ಪ್ರಧಾನ ಉಪಗ್ರಹ ಎಮಿಸ್ಯಾಟ್ ಮತ್ತು 28 ಅಂತಾರಾಷ್ಟ್ರೀಯ ಗ್ರಾಹಕರ ಉಪಗ್ರಹಗಳನ್ನು ಕೊಂಡೊಯ್ಯುವ ಪಿಎಸ್‌ಎಲ್‌ವಿ ಸಿ45ಯ ಯಶಸ್ವಿ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ಯೋಜನೆಯಲ್ಲಿ ಇದು ಮತ್ತೊಂದು ಮಹತ್ವದ ಮೈಲುಗಲ್ಲು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹೇಳಿದ್ದಾರೆ.
|
ಹೆಮ್ಮೆಯ ಗಳಿಗೆ
ವಿದ್ಯುತ್‌ಕಾಂತೀಯ ಮಾಪನ ಉಪಗ್ರಹ ಎಮಿಸ್ಯಾಟ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕೆ ಇಸ್ರೋಗೆ ಅಭಿನಂದನೆಗಳು. ಇದು ಭಾರತದ ಬೇಹುಗಾರಿಕಾ ಸಾಮರ್ಥ್ಯವನ್ನು ವೃದ್ಧಿಸಲಿದೆ. ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳೀಧರ ರಾವ್ ಟ್ವೀಟ್ ಮಾಡಿದ್ದಾರೆ.
|
ಮತ್ತೊಂದು ಸಾಧನೆ
ಇಸ್ರೋದಿಂದ ಮತ್ತೊಂದು ಸಾಧನೆ! ಎಮಿಸ್ಯಾಟ್ ಮತ್ತು 28 ಇತರೆ ನ್ಯಾನೋ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ45ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡಕ್ಕೆ ಅಭಿನಂದನೆಗಳು. ನೀವು ದೇಶಕ್ಕೆ ಹೆಮ್ಮೆ ಉಂಟುಮಾಡುವುದನ್ನು ಮುಂದುವರಿಸಿದ್ದೀರಿ ಎಂದು ಶಾಸಕ ಡಾ. ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications