Pension Increase: ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಮಾಸಿಕ ಪಿಂಚಣಿ ಹೆಚ್ಚಳ; ಮಾಹಿತಿ ಇಲ್ಲಿದೆ
Pension Increase: ಭದ್ರತಾ ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಹಾಗಾದ್ರೆ ಎಷ್ಟು ಹೆಚ್ಚಳ ಆಗಿದೆ? ಯಾವಾಗಿನಿಂದ ಜಾರಿಯಾಗಲಿದೆ? ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ರಾಜ್ಯದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನ 400 ರಿಂದ 1,100 ರೂಪಾಯಿಗಳಿಗೆ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

ಪಿಂಚಣಿ ಹೆಚ್ಚಳವು ಜುಲೈ 2025ರಿಂದ ಜಾರಿಗೆ ಬರಲಿದೆ. ರಾಜ್ಯದ 1.09 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನ ಸಿಗಲಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ, ಎಲ್ಲಾ ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಪ್ರತಿ ತಿಂಗಳು 400 ರೂಪಾಯಿಗಳ ಬದಲಿಗೆ 1,100 ರೂಪಾಯಿಗಳ ಪಿಂಚಣಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಂಬರಲಿರುವ 2025ರ ಜುಲೈನಿಂದಲೇ ಎಲ್ಲಾ ಫಲಾನುಭವಿಗಳಿಗೆ ಇದನ್ನು ಜಾರಿಗೆ ತರಲಾಗುವುದು. ಪ್ರತಿ ತಿಂಗಳ ದಿನಾಂಕ 10ರೊಳಗೆ ಫಲಾನುಭವಿಗಳ ಖಾತೆಗೆ ವರ್ಗಾಯಿಸುವಂತೆ ಸೂಚನೆ ನೀಡಲಾಗುದು. ಈ ಯೋಜನೆಯಿಂದ ಸುಮಾರು 1,09,69,255 ಫಲಾನುಭವಿಗಳಿಗೆ ಆರ್ಥಿಕ ನೆರವು ದೊರೆಯಲಿದೆ. ಈ ನಿರ್ಧಾರವು ರಾಜ್ಯದ ವೃದ್ಧರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಗೌರವಯುತ ಜೀವನವನ್ನು ಒದಗಿಸುವ ಗುರಿಯನ್ನ ಹೊಂದಿದೆ ಎಂದು ಹೇಳಿದರು.
ಈ ಯೋಜನೆಯು ಬಿಹಾರದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಮಯದಲ್ಲೇ ಬಂದಿದೆ. ಚುನಾವಣೆಯ ದಿನಾಂಕಗಳನ್ನ ಇನ್ನೂ ಚುನಾವಣಾ ಆಯೋಗ ಘೋಷಣೆ ಮಾಡಿಲ್ಲ. ಮಾರ್ಚ್ 2025ರಲ್ಲಿ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಅವರು ಈ ಯೋಜನೆಯನ್ನು ಘೋಷಿಸಿದ್ದರು. ಅಲ್ಲದೆ, 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು 200 ಯೂನಿಟ್‌ಗಳ ಉಚಿತ ವಿದ್ಯುತ್ ಒದಗಿಸುವ ಭರವಸೆಯನ್ನೂ ಸಹ ನೀಡಿದ್ದರು.
ಈ ನಿರ್ಧಾರವು ಎನ್‌ಡಿಎ ನಾಯಕರಿಂದ ಬಲವಾದ ಬೆಂಬಲವನ್ನು ಪಡೆದಿದೆ. ಸಚಿವ ಸಮ್ರಾಟ್ ಚೌಧರಿ ಅವರು, ಪಿಂಚಣಿಯನ್ನು 1,100 ರೂಪಾಯಿಗಳಿಗೆ ಏರಿಕೆ ಮಾಡಿರುವುದು ಐತಿಹಾಸಿಕ ತೀರ್ಮಾನ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತಿಳಿಸಿದ್ದಾರೆ.












Click it and Unblock the Notifications