ಭಯೋತ್ಪಾದಕರು ಹುತಾತ್ಮರಂತೆ, ಅವರ ಸಾವನ್ನು ಸಂಭ್ರಮಿಸಬಾರದಂತೆ!

Posted By:
Subscribe to Oneindia Kannada

ಜಮ್ಮು, ಜನವರಿ 11: 'ಕಾಶ್ಮೀರದ ಭಯೋತ್ಪಾದಕರು ಸತ್ತರೆ ಅಂಥವರನ್ನು ಹುತಾತ್ಮರು ಎಂದು ಕರೆಯಬೇಕು, ಅವರ ಸಾವನ್ನು ಎಂದಿಗೂ ಸಂಭ್ರಮಿಸಬಾರದು' ಎನ್ನುವ ಮೂಲಕ ಪಿಡಿಪಿ (ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಮುಖ್ಯಸ್ಥ ಐಜೀಜ್ ಅಹ್ಮದ್ ಮಿರ್ ಎಂಬುವವರು ವಿವಾದಕ್ಕೆ ನಾಂದಿಹಾಡಿದ್ದಾರೆ.

'ಕಾಶ್ಮೀರದಲ್ಲಿರುವ ಭಯೋತ್ಪಾದಕರೆಲ್ಲ ನಮ್ಮ ಸಹೋದರರು. ಅವರಲ್ಲಿ ಹಲವರು ಇನ್ನೂ ಅಪ್ರಾಪ್ತರು. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಅಂಥವರ ಬಗ್ಗೆ ನಮ್ಮಲ್ಲಿ ಅನುಕಂಪವಿರಬೇಕೇ ಹೊರತು ಅಂಥವರ ಸಾವನ್ನು ನಾವು ಸಂಭ್ರಮಿಸಬಾರದು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 2 ಭಯೋತ್ಪಾದಕರನ್ನು ಸದೆಬಡಿದ ಭಾರತ

ಜಮ್ಮು-ಕಾಶ್ಮೀರದ ವಾಚಿ ಕ್ಷೇತ್ರವನ್ನು ಪ್ರತಿನಿಧಿಸುವ ಇವರು, 'ಕಾಶ್ಮೀರದ ಸಮಸ್ಯೆ ಒಂದು ರಾಜಕೀಯ ವಿಚಾರ. ಅದನ್ನು ರಾಜಕೀಯವಾಗಿಯೇ ಬಗೆಹರಿಸಬೇಕು' ಎಂದಿದ್ದಾರೆ.

PDP MLA hails militants from Kashmir as martyrs

ಆದರೆ ಭಯೋತ್ಪಾದಕ ದಾಳಿಗಳ ಮೂಲಕ ಹಲವು ಅಮಾಯಕರ ಸಾವಿಗೆ ಕಾರಣರಾದ, ದೇಶದಲ್ಲಿ ಅಶಾಂತಿ ಬಿತ್ತುತ್ತಿರುವ ಭಯೋತ್ಪಾದಕರನ್ನು ಹುತಾತ್ಮರು ಎಂದು ಕರೆಯುವುದು ಸೈನಿಕರಿಗೆ ಮಾಡಿದ ಅವಮಾನವಲ್ಲವೇ? ಎಂಬುದು ಹಲವರ ಪ್ರಶ್ನೆ.

ಸಂಕ್ರಾಂತಿ ವಿಶೇಷ ಪುಟ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Peoples' Democratic Party (PDP) legislator Aijaz Ahmad Mir on Thursday described Kashmiri militants killed by Indian security forces as martyrs and added that their deaths should not be celebrated.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ