ಬಿಕಿನಿ ಬ್ಯೂಟಿ ಕೊಟ್ಟು, ಸಾಲದಿಂದ ಮುಕ್ತರಾಗಿ ಮಲ್ಯಗೆ ವರ್ಮಾ ಸಲಹೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14: ಉದ್ಯಮಿ ವಿಜಯ್ ಮಲ್ಯ ಅವರು ಸಾಲದ ಸಮಸ್ಯೆಯಿಂದ ಪಾರಾಗಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪುಕ್ಕಟೆ ಸಲಹೆ ನೀಡಿದ್ದಾರೆ. ಬ್ಯಾಂಕ್ ಗಳಿಗಿಂತ ಬ್ಯಾಂಕರ್ ಗಳತ್ತ ನಿಮ್ಮ ಕಿಂಗ್ ಫಿಷರ್ ಕ್ಯಾಲೆಂಡರ್ ಗರ್ಲ್ ಗಳನ್ನು ಕಳಿಸಿಕೊಡಿ, ಸಾಲದಿಂದ ಮುಕ್ತರಾಗಿ ಎಂದಿದ್ದಾರೆ.

ನನ್ನ ಕೇಳಿದರೆ ವಿಜಯ್ ಮಲ್ಯ ಅವರು ಬ್ಯಾಂಕುಗಳಿಗೆ ತೆರಳಿ ಡೀಲ್ ಮಾತನಾಡಿಕೊಳ್ಳಬೇಕು. ಪ್ರತಿಯೊಂದು ಬ್ಯಾಂಕಿಗೆ ಒಬ್ಬ ಬಿಕಿನಿ ಬ್ಯೂಟಿಯನ್ನು ನೀಡಿದರೆ ಸಾಲದ ಹೊರೆ ತಾನಾಗೇ ಇಳಿಯಲಿದೆ. [ಮಲ್ಯ ಪಲಾಯನ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಪಂಚ ಪ್ರಶ್ನೆ]

ಈ ಬಗ್ಗೆ ಕ್ಯಾಲೆಂಡರ್ ಗರ್ಲ್ಸ್ ಕೂಡಾ ಗಮನ ಹರಿಸಿ ಸಹಕರಿಸಬೇಕು. ಇಷ್ಟಕ್ಕೂ ಮಲ್ಯ ಅವರ ನೆರವಿನಿಂದ ವೃತ್ತಿ ಮೇಲಕ್ಕೆ ಬಂದಿರುತ್ತಿರಿ. ಈಗ ಮಲ್ಯ ಕಷ್ಟದಲ್ಲಿದ್ದಾರೆ. ಸ್ವಲ್ಪ ನೆರವಾಗಿ ಎಂದು ಸರಣಿ ಟ್ವೀಟ್ ಮೂಲಕ ವರ್ಮಾ ಅಣಕಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರಾಮ್ ಗೋಪಾಲ್ ವರ್ಮಾ ಅವರು ಮಲ್ಯ ಬಗ್ಗೆ ಟ್ವೀಟ್ ಮಾಡುತ್ತಿದ್ದು, ಸರಣಿ ಟ್ವೀಟ್ ಗಳು ಇಲ್ಲಿವೆ:

ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಯಾರು?

ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಯಾರು?

ಸಾಲ ಸರಿಹೊಂದಿಸಲು ಯಾರನ್ನು ಬದಲಿಗೆ ನೀಡಬೇಕು ಎಂಬುದನ್ನು ವರ್ಮಾ ಅವರೇ ತಮ್ಮ ಟ್ವೀಟ್ ಗಳಲ್ಲಿ ಹೇಳಿದ್ದಾರೆ. ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಆಗಿ ಸೂಪರ್ ಮಾಡೆಲ್ ಗಳಾದವರು ಈಗ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯರಾಗಿದ್ದಾರೆ. ಇವರಲ್ಲಿ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಪ್ರಮುಖರು. ಮಿಕ್ಕಂತೆ ಯಾವ ಮಾಡೆಲ್ ಗಳಿದ್ದಾರೆ [ಇಲ್ಲಿ ಓದಿ]

ಮಲ್ಯ ಬೆಳೆಸಿದ ಕ್ಯಾಲೆಂಡರ್ಸ್ ಗರ್ಲ್ಸ್ ಪಟ್ಟಿ

ಮಲ್ಯ ಬೆಳೆಸಿದ ಕ್ಯಾಲೆಂಡರ್ಸ್ ಗರ್ಲ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋನೆ, ನರ್ಗೀಸ್ ಫಕ್ರಿ, ಈಶಾ ಗುಪ್ತಾ, ಕತ್ರೀನಾ ಕೈಫ್ ಪ್ರಮುಖರು. ಇವರೆಲ್ಲ ಮಲ್ಯರನ್ನು ಕಷ್ಟದಿಂದ ಕಾಪಾಡಬೇಕು.

ಬ್ಯಾಂಕ್ ಜತೆ ಬಿಕಿನಿ ಬ್ಯೂಟಿಗಳನ್ನು ಬದಲಾಯಿಸಿಕೊಳ್ಳಿ

ಬ್ಯಾಂಕ್ ಜತೆ ಬಿಕಿನಿ ಬ್ಯೂಟಿಗಳನ್ನು ಬದಲಾಯಿಸಿಕೊಳ್ಳಿ ಎಂದು ಸಾಲಗಾರ ವಿಜಯ್ ಮಲ್ಯರಿಗೆ ಬಿಟ್ಟಿ ಸಲಹೆ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

ಬಿಕಿನಿ ತೊಟ್ಟ ಲಲನೆಯರಿಂದ ಕಳಿಸಿದ ಮೊತ್ತ

ಬಿಕಿನಿ ತೊಟ್ಟ ಲಲನೆಯರಿಂದ ಕಳಿಸಿದ ಮೊತ್ತವನ್ನು ಬ್ಯಾಂಕರ್ಸ್ ಗಳಿಗೆ ಹಿಂತಿರುಗಿಸುವಲ್ಲಿ ಯಾವುದೇ ತಪ್ಪಿಲ್ಲ.

ಸಾಲಕ್ಕೆ ಸೆಕ್ಯುರಿಟಿಯಾಗಿ ನೀಡಲು ಬಿಕಿನಿ ಬೇಬ್ಸ್

ಸಾಲದ ಮೊತ್ತಕ್ಕೆ ಸೆಕ್ಯುರಿಟಿಯಾಗಿ ನೀಡಲು ಬಿಕಿನಿ ಬೇಬ್ಸ್ ಬಳಕೆಯಾಗಿರಬಹುದು. ಈಗ ಸಾಲ ತೀರಿಸಲು ಬಿಕಿನಿ ಬೆಡಗಿಯರ ಬಳಕೆ ತಪ್ಪಲ್ಲ ಎನಿಸುತ್ತದೆ.

ನನ್ನ ಡ್ರೈವರ್ ಕೇಳಿದ ಪ್ರಶ್ನೆಗೆ ಉತ್ತರವಿಲ್ಲ

ನನ್ನ ಡ್ರೈವರ್ ಕೇಳಿದ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. 9,500 ರು ಹೊಂದಿರುವ ಮಲ್ಯ ಹೇಗೆ ಸಾಹುಕಾರ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Film director Ram Gopal Varma who is known for his rant on the Social Media has done it yet again. Varma has slammed Kingfisher chairman Vijay Mallya who is facing flak from every quarter for leaving India in the middle of a massive loan default probe.
Please Wait while comments are loading...