ಭರವಸೆಯ ನಾಯಕಿಯರಿಗೆ ಸ್ಫೂರ್ತಿ ತುಂಬಲು ಕನ್ನಡಿತಿ ಪವಿತ್ರಾ ಚಂದ್ರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೊಬರ್ 21: ಆ ಕಾರ್ಯಕ್ರಮ ನಡೆಯುವುದು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ. ಅದರ ಹೆಸರು ಗ್ಲೋಬಲ್ ಸ್ಪೋರ್ಟ್ಸ್ ಮೆಂಟರಿಂಗ್ ಪ್ರೋಗ್ರಾಂ. ಅಲ್ಲಿ ಬೆಂಗಳೂರಿನ ಪವಿತ್ರಾಚಂದ್ರ ಭಾಗವಹಿಸಿದ್ದಾರೆ. ಕ್ರೀಡೆಯಲ್ಲಿ ಭವಿಷ್ಯದ ಹದಿನಾರು ನಾಯಕಿಯರನ್ನು ಅಮೆರಿಕಾ ರಾಯಭಾರ ಕಚೇರಿ ಇಡೀ ವಿಶ್ವದಾದ್ಯಂತ ಆಯ್ಕೆ ಮಾಡುತ್ತದೆ.

ಹೀಗೆ 2015ರಲ್ಲಿ ಆಯ್ಕೆಯಾದ ಬೆಂಗಳೂರಿನ-ದಕ್ಷಿಣ ಭಾರತದ ಮೊದಲಿಗರು ಪವಿತ್ರಾಚಂದ್ರ. ಬೆಂಗಳೂರಿನಲ್ಲಿರುವ B7 ಸ್ಪೋರ್ಟ್ಸ್ ನ ಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು. ಈ ರೀತಿ ಜಗತ್ತಿನಾದ್ಯಂತ ಇರುವ ಭರವಸೆ ನಾಯಕಿಯರಿಗೆ ಕ್ರೀಡೆ ಮೂಲಕ ಇನ್ನೂ ಹೆಚ್ಚಿನ ಬಲ ತುಂಬುವ ಆಲೋಚನೆ ಹಿಲರಿ ಕ್ಲಿಂಟನ್ ಅವರದು.[ಬೆಂಗಳೂರು ತಂಡದಿಂದ ಹೊಸ ಇತಿಹಾಸ, ಎಎಫ್ ಸಿ ಫೈನಲಿಗೆ ಲಗ್ಗೆ]

Pavitra chandra in Global Sports Mentoring Program

ಈ ರೀತಿ ಸತತ ಎರಡನೇ ವರ್ಷ ಆ ಸಮಾವೇಶಕ್ಕೆ ಆಯ್ಕೆ ಆಗುತ್ತಿರುವ ಪವಿತ್ರಾ ಚಂದ್ರ ಅವರಿಗೆ ಗೂಗಲ್ ಹಾಗೂ ಪ್ರ್ಯಾಕ್ಟರ್ ಹಾಗೂ ಗ್ಯಾಂಬಲ್ ನಿಂದ ಐದು ವಾರಗಳ ತರಬೇತಿ ಕೂಡ ಸಿಕ್ಕಿದೆ. ಜತೆಗೆ ಲಾಸ್ ಏಂಜಲೀಸ್ ನಲ್ಲಿ ನಡೆದ ಇಎಸ್ ಪಿಎನ್ ಡಬ್ಲ್ಯು ಸಮಾವೇಶದಲ್ಲೂ ಪವಿತ್ರಾ ಪಾಲ್ಗೊಂಡಿದ್ದಾರೆ.

Pavitra chandra in Global Sports Mentoring Program

ಕಳೆದ ಬಾರಿ ಅಮೆರಿಕಾದಿಂದ ಹಿಂತಿರುಗಿದ ನಂತರ B7 ಸ್ಪೋರ್ಟ್ಸ್ ಮೂಲಕ ಪವಿತ್ರಾ ಚಂದ್ರ ಅವರು ಕೈಗೊಂಡ ಕಾರ್ಯಗಳನ್ನು ಗುರುತಿಸಿ, ಅವರಿಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿದ್ದು, ಭರವಸೆ ನಾಯಕಿಯರು ತಮ್ಮ ದೇಶಕ್ಕೆ ಹಿಂತಿರುಗಿದ ನಂತರ ಹೇಗೆ ಕೆಲಸ ಮಾಡಬಹುದು ಎಂದು ವಿವರಿಸಲು ತೆರಳಿದ್ದಾರೆ.[ಕರ್ನಾಟಕ ಕ್ರೀಡಾರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ]

Pavitra chandra in Global Sports Mentoring Program

ಸದ್ಯಕ್ಕೆ B7 ಸ್ಪೋರ್ಟ್ಸ್ ಬ್ಯಾಸ್ಕೆಟ್ ಬಾಲ್ ಅಕಾಡೆಮಿ ನಡೆಸುತ್ತಿದ್ದು, ಸ್ಥಳೀಯವಾಗಿ ಹುಡುಗ-ಹುಡುಗಿಯರಿಗಾಗಿ ವಾರ್ಷಿಕ ಲೀಗ್ ಪಂದ್ಯಾವಳಿಗಳನ್ನು ನಡೆಸುವ ಆಲೋಚನೆ ಇದೆ. 30 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಬ್ಯಾಸ್ಕೆಟ್ ಬಾಲ್ ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.

Pavitra chandra in Global Sports Mentoring Program

2017-18ರಲ್ಲಿ ಮಹಿಳೆಯರಿಗಾಗಿ ಮೊದಲ ಕ್ರೀಡಾ ಸಮಾವೇಶ ನಡೆಸಲು ತಯಾರಿ ನಡೆದಿದೆ. ಬರುವ ವರ್ಷದಲ್ಲಿ ಮಕ್ಕಳು, ಯುವಜನರಿಗೆ ಹಾಗೂ ಮಹಿಳೆಯರಿಗಾಗಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ನಡೆಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ತಳಮಟ್ಟದವರಿಗಾಗಿ ಮೊದಲ ಬಾರಿಗೆ ಕ್ರೀಡಾ ಸಮಾವೇಶ ಈ ವರ್ಷ ಹಮ್ಮಿಕೊಂಡಿದ್ದಿವಿ ಎನ್ನುತ್ತಾರೆ ಪವಿತ್ರಾ ಚಂದ್ರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pavitra chandra, CEO of B7 sports, Bengaluru is participating in Global Sports Mentoring Program, Washington DC. She is attending the evnt as Exemplar alum of GSMP.
Please Wait while comments are loading...