ಕಾನ್ಪುರ ಬಳಿ ರೈಲು ಅಪಘಾತ, ಯಾವ ಯಾವ ರೈಲು ಮಾರ್ಗ ಬದಲು?

Posted By:
Subscribe to Oneindia Kannada

ಪಾಟ್ನ, ನವೆಂಬರ್ 20: ಇಂದೋರ್-ಪಾಟ್ನ ಏಕ್ಸ್ ಪ್ರೆಸ್ ರೈಲು ಭಾನುವಾರ ಮುಂಜಾನೆ ಕಾನ್ಪುರ ಬಳಿ ಹಳಿ ತಪ್ಪಿದ್ದರಿಂದ ಸುಮಾರು 63ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 150 ಮಂದಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆಯಿದೆ.

ಈ ನಡುವೆ ಈ ಮಾರ್ಗದ ಮೂರು ರೈಲುಗಳ ಸಂಚಾರ ನಿಲ್ಲಿಸಲಾಗಿದ್ದು, 11 ಅಧಿಕ ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

Patna-Indore Express derails: Several trains cancelled, eleven diverted

ಉತ್ತರಪ್ರದೇಶದ ಕಾನ್ಪುರದ ಪುರ್ಖಾರಾಯಂ ಬಳಿ ಇಂದೋರ್ ನಿಂದ ಪಾಟ್ನಾ ಗೆ ತೆರಳುತ್ತಿದ್ದ ರೈಲಿನ 14 ಬೋಗಿಗಳು ಭಾನುವಾರ ಮುಂಜಾನೆ 3.10 ರ ಸುಮಾರಿಗೆ ಹಳಿತಪ್ಪಿ ದುರ್ಘಟನೆ ಸಂಭವಿಸಿದೆ . ಸ್ಥಳದಲ್ಲಿ ರೈಲ್ವೆ ಪೊಲೀಸರುಮ್ ಎನ್ ಡಿಆರ್ ಎಫ್ ಹಾಗೂ ವೈದ್ಯರ ತಂಡ ಅಗತ್ಯ ನೆರವು ನೀಡುತ್ತಿದ್ದಾರೆ. [ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 63ಕ್ಕೇರಿಕೆ]

ರೈಲು ಸಂಚಾರ ಸ್ಥಗಿತ:
* ಝಾನ್ಸಿ-ಕಾನ್ಪುರ್ ಪ್ಯಾಸೆಂಜರ್
* ಝಾನ್ಸಿ- ಲಕ್ನೋ ಇಂಟರ್ ಸಿಟಿ
* ಬರಯುನಿ ಗ್ವಾಲಿಯಾರ್ ಮೇಲ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

11ಕ್ಕೂ ಅಧಿಕ ರೈಲುಗಳ ಮಾರ್ಗ ಬದಲಾವಣೆ
* ಲೋಕಮಾನ್ಯ ತಿಲಕ್ (12542, 12541),
* ರಪ್ತಿ ಸಾಗರ್ ಎಸ್ ಎಫ್ ಎಕ್ಸ್ ಪ್ರೆಸ್(12522, 12511),
* ಪುಷ್ಪಕ್ ಎಕ್ಸ್ ಪ್ರೆಸ್ (12534),
* ಲಕ್ನೋ ಸೂಪರ್ ಫಾಸ್ಟ್ (12107),
* ಗ್ವಾಲಿಯಾರ್ ಬರಯುನಿ ಮೇಲ್ (11124),
* ಸಬರಮತಿ ಎಕ್ಸ್ ಪ್ರೆಸ್ (19167),
* ಖುಷಿನಗರ್ ಎಕ್ಸ್ ಪ್ರೆಸ್ (11015, 11016),
* ಲಕ್ನೋ ಪುಣೆ ಎಕ್ಸ್ ಪ್ರೆಸ್ (12104)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Railways cancelled Jhansi-Lucknow Intercity, Jhansi-Kanpur passenger and Barauni Gwalior Mail following the derailment of Patna-Indore Express.
Please Wait while comments are loading...