ಪಾಟ್ನಾ- ಇಂದೋರ್ ರೈಲು ದುರಂತ: ಸಹಾಯವಾಣಿ ಸಂಖ್ಯೆಗಳು

Posted By:
Subscribe to Oneindia Kannada

ಕಾನ್ಪುರ, ನವೆಂಬರ್ 20: ಪಾಟ್ನಾ - ಇಂದೋರ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಸಾವನ್ನಪ್ಪಿರುವ ಸಂಖ್ಯೆ ಏರುತ್ತಲೇ ಇದೆ. ಘಟನಾ ಸ್ಥಳಕ್ಕೆ ಮೃತರ ಕುಟುಂಬಸ್ಥರು ಆಗಮಿಸಿ ಕಣ್ಣೀರಿಡುತ್ತಿದ್ದಾರೆ.

ಎಸ್ 1, ಎಸ್ 2 ಬೋಗಿಗಳು ತೀವ್ರವಾಗಿ ಜಖಂ ಆಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಈ ನಡುವೆ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. [ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 91ಕ್ಕೇರಿಕೆ]

ಭಾನುವಾರ ಮುಂಜಾನೆ ಸಂಭವಿಸಿದ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೆ ಇಲಾಖೆಯ 24 ಮಂದಿ ವೈದ್ಯರ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತಿದೆ. [ರೈಲು ಅಪಘಾತ, ಯಾವ ಯಾವ ರೈಲು ಮಾರ್ಗ ಬದಲು?]

IndianRailways issues helpline numbers for assistance

ಉತ್ತರಪ್ರದೇಶದ ಕಾನ್ಪುರದ ಪುರ್ಖಾರಾಯಂ ಬಳಿ ಇಂದೋರ್ ನಿಂದ ಪಾಟ್ನಾ ಗೆ ತೆರಳುತ್ತಿದ್ದ ರೈಲಿನ 14 ಬೋಗಿಗಳು ಭಾನುವಾರ ಮುಂಜಾನೆ 3.10 ರ ಸುಮಾರಿಗೆ ಹಳಿತಪ್ಪಿ ದುರ್ಘಟನೆ ಸಂಭವಿಸಿದೆಪಾಟ್ನಾ- ಇಂದೋರ್ ರೈಲು ದುರಂತ: ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ. [ಕಾನ್ಪುರ ರೈಲು ದುರಂತಕ್ಕೆ ಕಂಬನಿ ಮಿಡಿದ ಗಣ್ಯರು]

Indian Railways issues helpline numbers for assistance

ಕಾನ್ಪುರ: 05121072
ಝಾನ್ಸಿ: 05101072
ಓರಾಯಿ : 051621072
ಪೋರ್ಖಾಯನ್: 05113-270239
ಇಂದೋರ್ : 07411072
ಉಜ್ಜಯಿನಿ: 07342560906

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Patna-Indore Express train derailed; Indian Railways issues helpline numbers for assistance.
Please Wait while comments are loading...