ಬಿಜೆಪಿ ವಿರುದ್ಧ 1 ಕೋಟಿ ರು ಆಮಿಷದ ಆರೋಪ

By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್ 23: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪ, ಪಕ್ಷಾಂತರಗಳ ಪರ್ವ ಆರಂಭವಾಗಿದೆ. ಪಾಟೀದಾರ್ ಸಮುದಾಯದ ಪ್ರಮುಖ ನಾಯಕರೊಬ್ಬರು ಬಿಜೆಪಿ ವಿರುದ್ಧ ಆಮಿಷವೊಡ್ಡಿದ ಆರೋಪ ಮಾಡಿದ್ದಾರೆ.

ಹಾರ್ದಿಕ್ ಪಟೇಲ್ ಯಾರು?

ಪಟೇಲ್ ಸಮುದಾಯದ ಮುಖಂಡ ನರೇಂದ್ರ ಪಟೇಲ್ ಅವರಿಗೆ ಬಿ.ಜೆ.ಪಗೆ ಸೇರಲು 1 ಕೋಟಿ ರೂ. ಆಫರ್ ಮಾಡಲಾಗಿದ್ದು, ಟೋಕನ್ ಅಡ್ವಾನ್ಸ್ ಆಗಿ 10 ಲಕ್ಷ ರೂ. ಕೊಡಲಾಗಿದೆ ಎಂಬ ಸುದ್ದಿ ಬಂದಿದೆ. ಈ ರೀತಿ ಆಫರ್ ಬಂದಿದ್ದು ನಿಜ ಎಂದು ನರೇಂದ್ರ ಪಟೇಲ್ ಅವರು ಸ್ಪಷ್ಟಪಡಿಸಿದ್ದಾರೆ.

ಮೇಲ್ವರ್ಗದ ಬಡವರಿಗೂ ಮೀಸಲಾತಿ ಘೋಷಿಸಿದ ಗುಜರಾತ್ ಸರ್ಕಾರ

ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರ ಆಪ್ತ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಒಬ್ಬೊಬ್ಬರನ್ನೇ ಸೆಳೆಯುವ ಯತ್ನದಲ್ಲಿದೆ. ಉತ್ತರ ಗುಜರಾತ್ ನಲ್ಲಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ನರೇಂದ್ರ ಪಟೇಲ್ ಅವರಿಗೆ 10 ಲಕ್ಷ ರೂ. ಮುಂಗಡ ನೀಡಲಾಗಿದ್ದು, ಈ ಹಣವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ.

Patidar leader Narendra Patel says he was offered Rs 1 crore to join party

ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಆಪ್ತರಾದ ರೇಷ್ಮಾ ಪಟೇಲ್ ಮತ್ತು ವರುಣ್ ಪಟೇಲ್ ಅವರು ಬಿ.ಜೆ.ಪಿ. ಸೇರಿದ್ದು, ಅವರ ಮೂಲಕ ನರೇಂದ್ರ ಅವರಿಗೆ ಆಮಿಷವೊಡ್ಡಲಾಗಿದೆ ಎನ್ನಲಾಗಿದೆ.

ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಕ್ಕಿರಲಿಲ್ಲ ಏಕೆ?

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿ.ಜೆ.ಪಿ. ವಕ್ತಾರ ಭರತ್ ಪಾಂಡ್ಯ, 'ನರೇಂದ್ರ ಪಟೇಲ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಬಿ.ಜೆ.ಪಿ. ಸೇರಿ ಕೆಲ ಹೊತ್ತಿನಲ್ಲೇ ಈ ರೀತಿ ಆರೋಪಿಸುತ್ತಿದ್ದಾರೆ. ಅವರು ಈ ರೀತಿ ಯೂ ಟರ್ನ್ ಹೊಡೆಯಲು ಕಾಂಗ್ರೆಸ್ ಕಾರಣ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a a major twist in the tale, Narendra Patel, a local convenor of the Hardik Patel's Patidar Anamat Andolan Samiti, has alleged that he was offered Rs 1 crore to join the Bharatiya Janata Party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ