ಹೆಣ್ಣುಮಗುವನ್ನು ಹೆತ್ತಿದ್ದಕ್ಕೆ ಮಹಿಳೆಗೆ ಮನಸೋ ಇಚ್ಛೆ ಹೊಡೆತ

ಪಟಿಯಾಲ, ಜುಲೈ 15: ಹೆಣ್ಣುಮಗುವನ್ನು ಹೆತ್ತ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಪಂಜಾಬ್ ನ ಪಟಿಯಾಲದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಮೀನಾ ಕಶ್ಯಪ್ ಹಲ್ಲೆಗೊಳಗಾದವರು.

ಮೀನಾ ಅವರು ದಲ್ಜಿತ್ ಸಿಂಗ್ ಎಂಬುವರ ಜತೆಗೆ ವಿವಾಹವಾಗಿದ್ದು, ಈಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಆಕ್ರೋಶಗೊಂಡ ದಲ್ಜಿತ್ ಸಿಂಗ್ ಕುಟುಂಬದವರು ಮನಸಿಗೆ ಬಂದಂತೆ ಥಳಿಸಿದ್ದಾರೆ.

Patiala woman beaten up by in-laws over girl child

ಮೀನಾ ಅವರ ಪತಿಯ ಸೋದರರು, ಸ್ನೇಹಿತರು ಆಕೆಯನ್ನು ಹೊಡೆದಿದ್ದಾರೆ. ಆ ದೃಶ್ಯಗಳನ್ನು ನೆರೆ ಮನೆಯವರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದು, ಆ ನಂತರ ಸಾಮಾಜಿಕ ಜಾಲ ತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ.

ಇನ್ನು ಹೆಣ್ಣುಮಗು ಜನಿಸಿದ ಕಾರಣಕ್ಕೆ ಮೀನಾ ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಲು ಸಹ ನಿರಾಕರಿಸಿದ್ದರಿಂದ ಪ್ರತ್ಯೇಕವಾಗಿ ವಾಸವಿದ್ದರು. ಆದರೂ ಆಕೆಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು.

ಶುಕ್ರವಾರ ಮೀನಾ ಮನೆಗೆ ಬಂದ ಆಕೆಯ ಭಾವಮೈದುನ ಮತ್ತು ಸ್ನೇಹಿತರು ದೊಣ್ಣೆ, ಬ್ಯಾಟ್ ಗಳಿಂದ ಮನಸಿಗೆ ಬಂದಂತೆ ಬಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿ, ಆಕ್ರೋಶ ವ್ಯಕ್ತವಾಗಿದೆ. ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಆದ ನಂತರ ಪೊಲೀಸರು ದೂರು ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+