ಎಸ್ಪಿ ಸಲ್ವಿಂದ್ ಸಿಂಗ್ ಅಡುಗೆ ಸಹಾಯಕನಿಗೆ ಎನ್‌ಐಎ ಸಮನ್ಸ್
ಬೆಂಗಳೂರು, ಜನವರಿ 11 : ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಎಸ್ಪಿ ಸಲ್ಪಿಂದರ್ ಸಿಂಗ್ ಅಡುಗೆ ಸಹಾಯಕರಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿಗೊಳಿಸಿದೆ. ಸೋಮವಾರ ಎನ್‌ಐಎ ಎರಡನೇ ಬಾರಿಗೆ ಸಿಂಗ್ ವಿಚಾರಣೆ ನಡೆಸಿದೆ.
ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಉಗ್ರರು ಅಪಹರಣ ಮಾಡಿ ಅವರ ಕಾರನ್ನು ತೆಗೆದುಕೊಂಡು ಹೋಗುವಾಗ ಸಿಂಗ್ ಅಡುಗೆ ಸಹಾಯಕ ಮೋಹನ್ ಕುಮಾರ್ ಅವರು ಸಹ ಜೊತೆಗಿದ್ದರು. ಆದ್ದರಿಂದ, ವಿಚಾರಣೆಗೆ ದೆಹಲಿಗೆ ಬರುವಂತೆ ಎನ್‌ಐಎ ಸಮನ್ಸ್ ಜಾರಿಗೊಳಿಸಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

2015ರ ಡಿಸೆಂಬರ್ 31ರಂದು ಉಗ್ರರು ಕಾರನ್ನು ಅಪಹರಣ ಮಾಡುವಾಗ ಸಿಂಗ್ ಮತ್ತು ಮೋಹನ್ ಕುಮಾರ್ ಅವರ ಜೊತೆ ಸಿಂಗ್ ಅವರ ಸ್ನೇಹಿತ ರಾಜೇಶ್ ಅವರು ಜೊತೆಗಿದ್ದರು. ಎಸ್‌ಪಿ ಅವರ ಕಾರಿನಲ್ಲಿಯೇ ಉಗ್ರರು ಪಠಾಣ್ ಕೋಟ್ ವಾಯುನೆಲೆಗೆ ಆಗಮಿಸಿದ್ದರು. [ಪಠಾಣ್ ಕೋಟ್ ದಾಳಿ : ಪಾಕ್ ಜೊತೆ ಶಾಂತಿ ಮಾತುಕತೆ ಇಲ್ಲ]
ಸಿಂಗ್ ಪ್ರಶ್ನಿಸಿದ ಎನ್‌ಐಎ : ಸೋಮವಾರ ಎನ್‌ಐಎ ಅಧಿಕಾರಿಗಳು ಸಲ್ವಿಂದರ್ ಸಿಂಗ್ ಅವರನ್ನು 2ನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಸಿಂಗ್ ಮಧ್ಯರಾತ್ರಿಯ ಹೊತ್ತಿನಲ್ಲಿ ಏನು ಮಾಡುತ್ತಿದ್ದರು? ಎಂದು ಎನ್‌ಐಎ ಮಾಹಿತಿ ಸಂಗ್ರಹಣೆ ಮಾಡಿದೆ. [ವಾಕಿಟಾಕಿ ಮರೆತು ದಾರಿ ತಪ್ಪಿದ ಉಗ್ರರು!]
ವಿಚಾರಣೆ ವೇಳೆ ಉಗ್ರರು ಸಲ್ವಿಂದರ್ ಸಿಂಗ್ ಅವರನ್ನು ಸುಮ್ಮನೆ ಬಿಟ್ಟಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ತಾನು ದೇವಾಲಯಕ್ಕೆ ಹೋಗಿ ಬರುವಾಗ ಉಗ್ರರು ತನ್ನನ್ನು ಅಪಹರಣ ಮಾಡಿದರು ಎಂದು ಸಿಂಗ್ ವಿಚಾರಣೆ ವೇಳೆ ತಿಳಿಸಿದ್ದಾರೆ.












Click it and Unblock the Notifications