ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಕಿಟಾಕಿ ಮರೆತು ದಾರಿ ತಪ್ಪಿದ ಉಗ್ರರು!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 11 : ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ ಉಗ್ರರು ಒಂದು ದಿನ ಕಾದು ಕುಳಿತಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಕಾರನ್ನು ಅಪಹರಣ ಮಾಡಿದ್ದ ನಾಲ್ವರು ಉಗ್ರರು, ವಾಕಿಟಾಕಿಯನ್ನು ಅದರಲ್ಲಿ ಬಿಟ್ಟು ದಾರಿ ತಪ್ಪಿದ್ದರು. ಇದರಿಂದಾಗಿ ದಾಳಿ ನಡೆಯುವುದು ಒಂದು ದಿನ ತಡವಾಯಿತು.

ಪಠಾಣ್‌ ಕೋಟ್ ವಾಯುನೆಲೆ ಮೇಲೆ 6 ಉಗ್ರರು ದಾಳಿ ನಡೆಸಿದ್ದರು. ಇವರಲ್ಲಿ ಇಬ್ಬರು ಉಗ್ರರು ಜನವರಿ 1ರಂದು ವಾಯುನೆಲೆಗೆ ನುಗ್ಗಿದ್ದರೂ ಜನವರಿ 2ರ ಮುಂಜಾನೆ 3.30ರ ತನಕ ಯಾವುದೇ ದಾಳಿ ನಡೆಸದೇ ಕಾದು ಕುಳಿತಿದ್ದರು, ಎಂಬುದು ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ಬಹಿರಂಗವಾಗಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

pathankot

ಎರಡು ತಂಡಗಳಲ್ಲಿ 6 ಜನರು ಉಗ್ರರು ಗಡಿ ನುಸುಳಿಕೊಂಡು ಬಂದಿದ್ದರು. ಎಲ್ಲಾ ಉಗ್ರರು ವಾಕಿಟಾಕಿ ಹೊಂದಿದ್ದು, ಅದರ ಮೂಲಕವೇ ಸಂಭಾಷಣೆ ನಡೆಸುತ್ತಿದ್ದರು. ಎರಡನೇ ಗುಂಪಿನಲ್ಲಿ ಬಂದ ಉಗ್ರರು ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸಿ, ಅವರ ಕಾರಿನ ಮೂಲಕವೇ ವಾಯುನೆಲೆ ಸಮೀಪ ಬಂದಿದ್ದರು. [ಪಠಾಣ್ ಕೋಟ್ ದಾಳಿ : ಭಾರತವನ್ನು ಲೇವಡಿ ಮಾಡಿದ ಮಸೂದ್]

ವಾಯುನೆಲೆಯಲ್ಲಿ ಅಡಗಿದ್ದ ಇಬ್ಬರು ಉಗ್ರರು ಉಳಿದ ನಾಲ್ವರ ಜೊತೆ ಮಾತನಾಡುವಾಗ ಅವರು ಸಿಂಗ್ ಕಾರಿನಲ್ಲಿದ್ದರು. ಆದರೆ, ಕಾರನ್ನು ವಾಯುನೆಲೆಗೆ ಸುಮಾರು 1 ಕಿ.ಮೀ.ದೂರದಲ್ಲಿ ಬಿಟ್ಟು ಹೋಗುವಾಗ ಉಗ್ರರು ವಾಕಿಟಾಕಿ ಮರೆತಿದ್ದರು. ಇದರಿಂದಾಗಿ ಅವರ ಮತ್ತು ಅಡಗಿದ್ದ ಉಗ್ರರ ನಡುವಿನ ಸಂಪರ್ಕ ತಪ್ಪಿಹೋಯಿತು. [ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್]

ನಾಲ್ವರು ಉಗ್ರರು ವಾಯುನೆಲೆ ದಾರಿ ಹುಡುಕಿಕೊಂಡು ಬಂದು ಜನವರಿ 2ರ ಮುಂಜಾನೆ 3.30ರ ಸುಮಾರಿಗೆ ದಾಳಿ ಆರಂಭಿಸಿದರು. ವಾಕಿಟಾಕಿ ಮರೆತ ಉಗ್ರರಿಂದಾಗಿ ದಾಳಿಗೆ ಮಾಡಿದ ಯೋಜನೆಯೂ ಬದಲಾಯಿತು. ವಾಯುನೆಲೆಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ವಾಯುನೆಲೆ ಕಚೇರಿಗೆ ನುಗ್ಗುವ ಉಗ್ರರ ಯೋಜನೆಯನ್ನು ಯೋಧರು ವಿಫಲಗೊಳಿಸಿದರು. [ಪಿಟಿಐ ಚಿತ್ರ]

English summary
The National Investigating Agency appears to have solved the mystery relating to the Pathankot attack. Investigators were curious as to why the terrorists despite infiltrating the Pathankot air force station on January 1 2016 itself took 24 hours to launch the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X