Get Updates
Get notified of breaking news, exclusive insights, and must-see stories!

Train Cancelled in August: ಬೆಂಗಳೂರು ವಿಭಾಗದ ಕೆಲವು ರೈಲುಗಳ ಸಂಚಾರ ರದ್ದು, ಮಾರ್ಗಗಳ ವಿವರ

ಬೆಂಗಳೂರು, ಜುಲೈ 30: ನೈಋತ್ಯ ರೈಲ್ವೆ ವಲಯ (SWR) ಬೆಂಗಳೂರು ವಿಭಾಗದ ಪೆನುಕೊಂಡ-ಮಕ್ಕಾಜಿಪಲ್ಲಿ ನಿಲ್ದಾಣಗಳ ಮಧ್ಯೆ ಇಂಜಿನಿಯರಿಂಗ್ ಮತ್ತು ಸುರಕ್ಷತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಈ ತುರ್ತುನಿರ್ವಹಣಾ ಕೆಲಸ ಪ್ರಯುಕ್ತ ಕಾಚೆಗುಡ-ಯಶವಂತಪುರ, KSR ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಸೇರಿದಂತೆ ವಿವಿಧ ರೈಲುಗಳನ್ನು ಆಗಸ್ಟ್ ಈ ದಿನಾಂಕಗಳಂದು ಭಾಗಶಃ ರದ್ದುಗೊಳಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನೈಋತ್ಯ ರೈಲ್ವೆ ವಲಯ (SWR)ವು ಮುಂದಿನ ಆಗಸ್ಟ್ ಮೊದಲ ವಾರ ಈ ಕೆಳಗಿನ ನಿಲ್ದಾಣಗಳ ಮಧ್ಯೆ ಕೆಲವು ರೈಲುಗಳ ಸಂಚಾರ ಸ್ಥಗಿತವಾಗಿರುತ್ತದೆ. ಪ್ರಯಾಣಿಕರು ಗಮನಿಸಿ ಸಂಚರಿಸಬೇಕು ಎಂದು ಮನವಿ ಮಾಡಿಕೊಂಡಿದೆ.

Partial Cancellation of Trains Due to Engineering Works in Bengaluru Division on August

ರೈಲುಗಳ ಭಾಗಶಃ ರದ್ದತಿ ಪಟ್ಟಿ

* KSR ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು ವಿಶೇಷ ರೈಲು (ಸಂಖ್ಯೆ 06515) ಆಗಸ್ಟ್ 1 ರಿಂದ 6 ಮತ್ತು ಆಗಸ್ಟ್ 9 ರಿಂದ 11, 2024 ರವರೆಗೆ ಪ್ರಾರಂಭವಾಗುವ ಪ್ರಯಾಣವು ಹಿಂದೂಪುರ- ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ರೈಲು ಹಿಂದೂಪುರದಲ್ಲಿಯೇ ಕೊನೆಗೊಳ್ಳುತ್ತದೆ.

* ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷವು ರೈಲು (ಸಂಖ್ಯೆ 06516) ಹಿಂದೂಪುರದಿಂದ ಆಗಸ್ಟ್ 1 ರಿಂದ 6 ರವರೆಗೆ ಮತ್ತು ಆಗಸ್ಟ್ 9 ರಿಂದ 11, 2024 ರವರೆಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಬದಲಾಗಿ ತನ್ನ ನಿಗದಿತ ನಿರ್ಗಮನದ ಸಮಯದಲ್ಲಿ ಪ್ರಯಾಣ ಆರಂಭಿಸುತ್ತದೆ. ಹೀಗಾಗಿ ಈ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಹಿಂದೂಪುರ ನಿಲ್ದಾಣದ ನಡುವೆ ರದ್ದಾಗಿದೆ.

Partial Cancellation of Trains Due to Engineering Works in Bengaluru Division on August

* ಗುಂತಕಲ್-ಹಿಂದೂಪುರ ಮೆಮು ವಿಶೇಷ ರೈಲು (ಸಂಖ್ಯೆ 07693) ಆಗಸ್ಟ್ 8 ರಿಂದ 10 ರವರೆಗೆ ಪ್ರಯಾಣ ಆರಂಭವಾಗುತ್ತದೆ. ಈ ರೈಲಿನ ಪ್ರಮಾಣ ಧರ್ಮವರಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ರೈಲು ಧರ್ಮಾವರಂನಲ್ಲಿ ಚಿಕ್ಕದಾಗಿ ಕೊನೆಗೊಳ್ಳುತ್ತದೆ.

* ಹಿಂದೂಪುರ-ಗುಂತಕಲ್ ಮೆಮು ವಿಶೇಷವು ರೈಲು (ಸಂಖ್ಯೆ 07694) ಹಿಂದೂಪುರ ನಿಲ್ದಾಣದ ಬದಲಿಗೆ ಆಗಸ್ಟ್ 9 ರಿಂದ 11 ರವರೆಗೆ ನಿಗದಿತ ನಿರ್ಗಮನದ ಸಮಯದಲ್ಲಿ ಧರ್ಮವರಂನಿಂದ ತನ್ನ ಸಂಚಾರ ಆರಂಭಿಸುತ್ತದೆ. ಹಿಂದೂಪುರ-ಧರ್ಮಾವರಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.

ಈ ರೈಲುಗಳು ಮಾರ್ಗ ಬದಲು

* ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20703) ಆಗಸ್ಟ್ 3, 6 ಮತ್ತು 11ರಂದು ಪ್ರಾರಂಭವಾಗುವ ಪ್ರಯಾಣ ಧರ್ಮವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

* CSMT ಮುಂಬೈ-ತಿರುವನಂತಪುರಂ ಸೆಂಟ್ರಲ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16331) ಆಗಸ್ಟ್ 4ರಂದು ಸಂಚಾರ ಆರಂಭಿಸಿ ಧರ್ಮವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಹಿಂದೂಪುರ ನಿಲ್ದಾಣಗಳ ಮೂಲಕ ಚಲಿಸಲಿದೆ.

* ಟುಟಿಕೋರಿನ್-ಓಖಾ ವಿವೇಕ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 19567) ಆಗಸ್ಟ್ 4ರಂದು ಸಂಚಾರ ಆರಂಭಿಸುವ ರೈಲು ಹಿಂದೂಪುರ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಧರ್ಮಾವರಂ ನಿಲ್ದಾಣಗಳ ಮೂಲಕ ಚಲಿಸುವಂತೆ ತಿರುಗಿಸಲಾಗಿದೆ.

* ಕಲಬುರಗಿ-SMVT ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22231) ಆಗಸ್ಟ್ 6 ರಂದು ಪ್ರಾರಂಭವಾಗುವ ರೈಲಿನ ಪ್ರಯಾಣ ಅನಂತಪುರ ಮೂಲಕ ಕಾರ್ಯಾಚರಣೆಗೊಳ್ಳಲಿದೆ. ಈ ವೇಳೆ ಅದು ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+