ರಫೆಲ್ ಬದಲಿಗೆ ಸುಖೋಯ್ ಖರೀದಿಗೆ ಆಸಕ್ತಿ, ಪಾರಿಕ್ಕರ್ ಬಾಯ್ಬಿಡಲಿ
ಪಣಜಿ, ಡಿಸೆಂಬರ್ 19: ಈ ಹಿಂದಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ರಫೆಲ್ ಜೆಟ್ ಗಳ ಬದಲಿಗೆ ಸುಖೋಯ್ ಎಸ್ ಯು 30 ಎಂಕೆ1 ಯುದ್ಧ ವಿಮಾನ ಖರೀದಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ಕಾಂಗ್ರೆಸ್ ವಕ್ತಾರ ರಮಾಕಾಂತ್ ಖಲಪ್ ಹೇಳಿದ್ದಾರೆ.
ಪ್ಯಾರೀಸ್, ದೆಹಲಿ ಹಾಗೂ ಗೋವಾ ಈ ಮೂರು ಭೌಗೊಳಿಕ ತ್ರಿಕೋನ ಸ್ಥಳಗಳಲ್ಲಿ ರಫೆಲ್ ಡೀಲ್ ಬಗ್ಗೆ ಚರ್ಚೆ ನಡೆದಿದ್ದು, ಈ ಬಗ್ಗೆ ಪಾರಿಕ್ಕರ್ ಅವರು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಖಲಪ್ ಆಗ್ರಹಿಸಿದ್ದಾರೆ.
ಜುಲೈ 2015ರಲ್ಲಿ ಪಾರಿಕ್ಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, 126 ಏರ್ ಕ್ರಾಫ್ಟ್ ಖರೀದಿಯ ಒಪ್ಪಂದ ಹಿಂಪಡೆಯಲಾಗಿದ್ದು ಕೇವಲ 36 ಏರ್ ಕ್ರಾಫ್ಟ್ ಬಗ್ಗೆ ಚರ್ಚಿಸಲಾಗುತ್ತಿದೆ ಎಂದಿದ್ದರು.

ಆದರೆ, ಈ ಸಂದರ್ಭದಲ್ಲಿ ರಫೆಲ್ ಬದಲಿಗೆ ಸುಖೋಯ್ ಎಸ್ ಯು 30ಎಂಕೆ1 ಖರೀದಿಸುವ ಬಗ್ಗೆ ಸರ್ಕಾರ ಉತ್ಸುಕವಾಗಿದೆ ಎಂದಿದ್ದರು. ರಫೆಲ್ ಗಿಂತ ಇದು ಅಗ್ಗವಾಗಿದೆ ಎಂದು ರಕ್ಷಣಾ ಸಚಿವರಾಗಿದ್ದಾಗ ಪಾರಿಕ್ಕರ್ ಹೇಳಿದ್ದರು.
ರಫೆಲ್ ಏರ್ ಕ್ರಾಫ್ಟ್ ಗೊಂದಲ ಬಗೆಹರಿಸಲು ಪ್ಯಾರೀಸ್, ಗೋವಾ ,ದೆಹಲಿ ತ್ರಿಕೋನ ಸ್ಥಳಗಳು ಪ್ರಮುಖ ಪಾತ್ರವಹಿಸಿವೆ. ಈ ಬಗ್ಗೆ ಮನೋಹರ್ ಪಾರಿಕ್ಕರ್ ಬಾಯ್ಬಿಟ್ಟರೆ ಹೆಚ್ಚಿನ ಅಂಶಗಳು ಬೆಳಕಿಗೆ ಬರಲಿವೆ ಎಂದರು.












Click it and Unblock the Notifications