ಸಂಸದೀಯ ಮಂಡಳಿ: ಬಿಎಸ್‌ವೈ ಇನ್, ಗಡ್ಕರಿ ಔಟ್, ಯೋಗಿ ಆದಿತ್ಯನಾಥ್?
ನವದೆಹಲಿ ಆಗಸ್ಟ್ 18: ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರನ್ನು ಬುಧವಾರ ಬಿಜೆಪಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಿಂದ ಕೈಬಿಡಲಾಗಿದ್ದು, ಬಿಎಸ್ ಯಡಿಯೂರಪ್ಪ ಮತ್ತು ದೇವೇಂದ್ರ ಫಡ್ನವಿಸ್ ಈ ಸ್ಥಾನಗಳನ್ನು ಪಡೆದಿದ್ದಾರೆ.
ಆದರೆ ರಾಜ್ಯದಲ್ಲಿ ಬಿಜೆಪಿಯನ್ನು ಅಭೂತಪೂರ್ವವಾಗಿ ಎರಡನೇ ಅವಧಿಗೆ ಮುನ್ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಈ ಸ್ಥಾನದಿಂದ ಹೊರಗಿಡಲಾಗಿದೆ. ಹನ್ನೊಂದು ಸದಸ್ಯರಿರುವ ಪಕ್ಷದ ಸಂಸದೀಯ ಮಂಡಳಿಯಲ್ಲಿ ಬಿಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್. ಕೆ ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್‌ಪುರ, ಸುಧಾ ಯಾದವ್ ಮತ್ತು ಸತ್ಯನಾರಾಯಣ್ ಜತಿಯಾ ಸೇರಿದಂತೆ ಆರು ಹೊಸ ಮುಖಗಳಿಗೆ ಸ್ಥಾನ ನೀಡಲಾಗಿದೆ.
ಇದರಿಂದಾಗಿ ನರೇಂದ್ರ ಮೋದಿ, ಅಮಿತ್ ಶಾ ಯುಗದಲ್ಲಿ ಪಕ್ಷದ ರಾಜಕೀಯ ಬದಲಾವಣೆಯನ್ನು ಈ ಬೆಳವಣಿಗೆ ಸೂಚಿಸುತ್ತದೆ. ಸಂಸದೀಯ ಮಂಡಳಿಯು ಬಿಜೆಪಿಯ ಉನ್ನತ ಸ್ಥಾನ ಹೊಂದಿದೆ. ಇದು ಮುಖ್ಯಮಂತ್ರಿಗಳು, ರಾಜ್ಯಗಳ ಮುಖ್ಯಸ್ಥರು ಮತ್ತು ಇತರ ಪ್ರಮೂಖ ಪಾತ್ರಗಳನ್ನು ನಿರ್ಧರಿಸುತ್ತದೆ.
ಬಿಜೆಪಿಯ ಮಾಜಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೈಬಿಟ್ಟಿರುವುದು ಈ ನವೀಕರಣದಲ್ಲಿ ದೊಡ್ಡ ಆಘಾತವಾಗಿದೆ. ಇಲ್ಲಿಯವರೆಗೆ ಪಕ್ಷವು ಯಾವಾಗಲೂ ತನ್ನ ಮಾಜಿ ಅಧ್ಯಕ್ಷರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಇರಿಸಿತ್ತು. ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಗಡ್ಕರಿ, ತಮ್ಮದೇ ಸರ್ಕಾರವನ್ನು ಗುರಿಯಾಗಿಸಿಕೊಳ್ಳುತ್ತಿದ್ದರು.
ನಾಗ್ಪುರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಅವರು ಇಂದಿನ ರಾಜಕೀಯವು ಪವರ್‌ಪ್ಲೇಗೆ ಹೆಚ್ಚು ಮಹತ್ವದ್ದಾಗಿದೆ ಮತ್ತು ಕೆಲವೊಮ್ಮೆ ಅವರು ರಾಜಕೀಯವನ್ನು ತೊರೆಯಲು ಯೋಚಿಸುತ್ತಿದ್ದರು ಎಂದು ಉಲ್ಲೇಖಿಸಿದ್ದರು. ಇದರಿಂದ ಅವರನ್ನು ಕಡೆಗಣಿಸಲಾಗಿದೆ ಎನ್ನಲಾಗುತ್ತಿದೆ.

ಉಪಮುಖ್ಯಮಂತ್ರಿ ಹುದ್ದೆಗೆ ಇಳಿದ ಫಡ್ನವೀಸ್
ಮಹಾರಾಷ್ಟ್ರದ ಬಿಜೆಪಿಯ ಮತ್ತೊಬ್ಬ ದೊಡ್ಡ ನಾಯಕ ದೇವೇಂದ್ರ ಫಡ್ನವೀಸ್ ಅವರು ಚುನಾವಣಾ ಸಮಿತಿಗೆ ಸ್ಥಾನ ಪಡೆದಿದ್ದಾರೆ. ಶಿವಸೇನೆಯ ಬಂಡಾಯಗಾರ ಏಕನಾಥ್ ಶಿಂಧೆ ಜೊತೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉಪಮುಖ್ಯಮಂತ್ರಿ ಹುದ್ದೆಗೆ ಇಳಿಯಲು ಫಡ್ನವೀಸ್ ಅವರಿಗೆ ಒತ್ತಾಯಿಸಲಾಗಿತ್ತು. ಹೈಕಮಾಂಡ್ ಒತ್ತಾಯಕ್ಕೆ ಮಣಿದ ಫಡ್ನವೀಸ್ ಅವರಿಗೆ ಚುನಾವಣಾ ಸಮಿತಿಗೆ ಸ್ಥಾನ ನೀಡಲಾಗಿದೆ.

ಯಡಿಯೂರಪ್ಪನವರಿಗೆ ಮಣೆ ಹಾಕಿದ ಪಕ್ಷ
20 ವರ್ಷಗಳಿಂದ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೂ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಅವರು ಹೋದ ನಂತರ ಮಂಡಳಿಯಲ್ಲಿ ಮುಖ್ಯಮಂತ್ರಿ ಇಲ್ಲ. ಹೀಗಾಗಿ ಈ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪನವರನ್ನು ಸೇರ್ಪಡೆಗೊಳಿಸಲಾಗಿದೆ. ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ನವರನ್ನು ಒತ್ತಾಯಿಸಲಾಗಿತ್ತು. ಬಳಿಕ ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಈ ನೈತಿಕತೆಯಿಂದ ಪ್ರಬಲ ಲಿಂಗಾಯತ ನಾಯಕನ ಮನ ಗೆಲ್ಲಲು ಪಕ್ಷದ ಪ್ರಯತ್ನಗಳು ಪ್ರಯತ್ನಿಸಿ ಈ ಆಧಿಕಾರ ನೀಡಲಾಗಿದೆ.

ಬಿಜೆಪಿಗೆ ಯಡಿಯೂರಪ್ಪ ಸಹಕಾರದ ಅಗತ್ಯತೆ
ಮಾತ್ರವಲ್ಲದೆ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಡಿಯೂರಪ್ಪನವರ ಸಹಕಾರದ ಅಗತ್ಯವಿದೆ. ಕರ್ನಾಟಕದಲ್ಲಿ ಲಿಂಗಾಯತರು ಶೇಕಡಾ 18 ರಷ್ಟು ಮತಗಳನ್ನು ಹೊಂದಿದ್ದಾರೆ. ಹೀಗಾಗಿ ಇವರನ್ನು ಮುನ್ನಲೆಗೆ ತರಲು ಪಕ್ಷ ನಿರ್ಧರಿಸಿದೆ.
ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಬಿಜೆಪಿ ಪುನರಾಯ್ಕೆಯಾದ ನಂತರ ಹಿಮಂತ ಬಿಸ್ವಾ ಶರ್ಮಾಗೆ ದಾರಿ ಮಾಡಿಕೊಡಲು ಒಪ್ಪಿದ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಸಂಸದೀಯ ಮಂಡಳಿಯಲ್ಲಿಯೂ ಇದ್ದಾರೆ.

ರಾಜನಾಥ್ ಸಿಂಗ್ ರೀಎಂಟ್ರಿ
ಪಿಎಂ ಮೋದಿ, ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಪಕ್ಷದ ಬಿಎಲ್ ಸಂತೋಷ್ ಮಾತ್ರ ಈ ಷಫಲ್‌ನಲ್ಲಿ ಸ್ಥಿರರಾಗಿದ್ದಾರೆ. ಬಿಜೆಪಿಯ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸದೀಯ ಮಂಡಳಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಸಂಸದೀಯ ಮಂಡಳಿಯ ಸದಸ್ಯರು ಸ್ವಯಂಚಾಲಿತವಾಗಿ ಚುನಾವಣಾ ಸಮಿತಿಯ ಭಾಗವಾಗುತ್ತಾರೆ.
ಚುನಾವಣಾ ಸಮಿತಿಯಲ್ಲಿರುವ ಏಕೈಕ ಮುಸ್ಲಿಂ ಮುಖ ಶಾನವಾಜ್ ಹುಸೇನ್ ಅವರನ್ನು ಕೈಬಿಡಲಾಗಿದೆ. ಇದರೊಂದಿಗೆ, ಬಿಜೆಪಿಯಲ್ಲಿ ಯಾವುದೇ ಮುಸ್ಲಿಂ ಮಂತ್ರಿ, ಸಂಸದ ಅಥವಾ ಯಾವುದೇ ಪ್ರಮುಖ ಪಕ್ಷದ ಹುದ್ದೆಯಲ್ಲಿ ಇಲ್ಲ. ಟೋಕನ್ ಪ್ರಾತಿನಿಧ್ಯವೂ ಇಲ್ಲ. ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಈ ಹಿಂದೆ ತಮ್ಮ ರಾಜ್ಯಸಭೆಯ ಅವಧಿ ಮುಗಿದ ನಂತರ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications