Get Updates
Get notified of breaking news, exclusive insights, and must-see stories!

ಸಂಸತ್ತಿನ ಅಧಿವೇಶನ: ಕೇಂದ್ರದಿಂದ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ಸಾಧ್ಯತೆ

ನವದೆಹಲಿ ಸೆಪ್ಟೆಂಬರ್ 1: ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಈ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದ್ದು, ಮಹಿಳಾ ಸಮುದಾಯದಲ್ಲಿ ನಿರಾಸೆಗೆ ಕಾರಣವಾಗಿದೆ.

ಆದರೆ ಈ ಬಾರಿ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯುವ ಅಧಿವೇಶನದಲ್ಲಿ ಮೀಸಲಾತಿ ಮಸೂದೆಯನ್ನು ಮಂಡಿಸುವ ಲಕ್ಷಣಗಳು ದಟ್ಟವಾಗಿವೆ. 2024 ಮತ್ತು 2019ರ ಲೋಕಸಭೆ ಚುನಾವಣೆಗಳ ಪ್ರಚಾರದ ವೇಳೆ ಬಿಜೆಪಿಯು ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಭರವಸೆಗಳನ್ನು ನೀಡಿತ್ತು. ಆದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಅದು ತನ್ನ ಮಾತಿಗೆ ಬದ್ಧವಾಗಿ ನಡೆದುಕೊಂಡಿಲ್ಲ.

Parliament Session: Center likely to introduce Womens Reservation Bill

ಹೀಗಾಗಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಆಗ್ರಹಿಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪುತ್ರಿ ಮತ್ತು ಭಾರತ ರಾಷ್ಟ್ರೀಯ ಸಮಿತಿ (ಬಿಆರ್ಎಸ್) ಪಕ್ಷದ ನಾಯಕಿ ಕೆ ಕವಿತಾ ಅವರು ಉಪವಾಸ ಸತ್ಯಗ್ರಹದ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಈ ವಿಷಯ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಏನಿದು ಮಹಿಳಾ ಮೀಸಲಾತಿ ಮಸೂದೆ? ಇದರಿಂದಾಗುವ ಪ್ರಯೋಜನಗಳೇನು?

ಏನಿದು ಮಹಿಳಾ ಮೀಸಲಾತಿ ಮಸೂದೆ (WRB)?

ಮಹಿಳಾ ಮೀಸಲಾತಿ ಮಸೂದೆ ಅಥವಾ ಸಂವಿಧಾನ (108 ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಪ್ರಸ್ತಾಪಿಸುತ್ತದೆ.ಕಾಯ್ದಿರಿಸಿದ ಸ್ಥಾನಗಳನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ವಿವಿಧ ಕ್ಷೇತ್ರಗಳಿಗೆ ಸರದಿಯ ಮೂಲಕ ಹಂಚಬಹುದು.

Parliament Session: Center likely to introduce Womens Reservation Bill

WRBನ ಟೈಮ್‌ಲೈನ್ ಏನು?

1996 - ಮಹಿಳಾ ಮೀಸಲಾತಿ ಮಸೂದೆ (WRB) ಅನ್ನು 1996ರಲ್ಲಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರ ಪರಿಚಯಿಸಿತು. ಇದನ್ನು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಆದರೆ ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆಯು ಸದನದ ಅನುಮೋದನೆಯನ್ನು ಪಡೆಯುವಲ್ಲಿ ವಿಫಲವಾಯಿತು ಮತ್ತು ಅದನ್ನು ಮರುಪರಿಚಯಿಸಬೇಕಾಯಿತು.

1998 - ಮಸೂದೆಯನ್ನು ಪುನಃ ಪರಿಚಯಿಸಲಾಯಿತು. ಮತ್ತೆ ಅದು ಬೆಂಬಲವನ್ನು ಪಡೆಯುವಲ್ಲಿ ವಿಫಲವಾಯಿತು.

1999 - 13 ನೇ ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದಿಂದ ಮಸೂದೆಯನ್ನು ಪುನಃ ಪರಿಚಯಿಸಲಾಯಿತು ಮತ್ತು ನಂತರ 2003 ರಲ್ಲಿ ಎರಡು ಬಾರಿ ಪರಿಚಯಿಸಲಾಯಿತು.

1996 ರ ಗೀತಾ ಮುಖರ್ಜಿ ಸಮಿತಿಯು ಮಾಡಿದ ಕೆಲವು ಶಿಫಾರಸುಗಳನ್ನು ಮಸೂದೆಯ ಈ ಆವೃತ್ತಿಯಲ್ಲಿ ಸೇರಿಸಲಾಗಿದೆ.

2010 - ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು ಮತ್ತು ಲೋಕಸಭೆಯಲ್ಲಿ ವಿಫಲವಾಯಿತು. ಅಂದಿನಿಂದ ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯ ಬೇಡಿಕೆ ಹೊಸದಲ್ಲ.

WRB ಅನ್ನು ಅಂಗೀಕರಿಸಲು ಸಂಸತ್ತು ಏಕೆ ವಿಫಲವಾಯಿತು?

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಬಗ್ಗೆ ಹಲವಾರು ವಿಷಗಳು ಮುನ್ನಲೆಗೆ ಬಂದಿವೆ. ಅವೇಂದರೆ 1996ರ ಸಮಿತಿಯು ಮಹಿಳೆಯರಿಗೆ 1/3ರ ಮೀಸಲಾತಿಯೊಳಗೆ OBC ಮಹಿಳೆಯರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಇದು WRB ತಮ್ಮ ಮಹಿಳೆಯರಿಗೆ ಪ್ರಯೋಜನವಾಗುವುದಿಲ್ಲ ಎಂದು ವಿರೋಧಿಗಳು ಹೇಳಲು ಕಾರಣವಾಗಿದೆ.

ಹೀಗಾಗಿ ಮಸೂದೆ ಅಂಗೀಕಾರಕ್ಕೂ ಮುನ್ನ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ರಾಜಕೀಯ ಸಾಮರ್ಥ್ಯದ ಕೊರತೆಯೂ ಮಸೂದೆ ಅಂಗೀಕಾರಕ್ಕೆ ವಿಫಲವಾಗಿದೆ ಎಂದು ಹೇಳಲಾಗುತ್ತದೆ. ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ ಚುನಾವಣಾ ಅಭ್ಯರ್ಥಿಗಳಿಗೆ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಟ್ಟಿವೆ.

ಜೊತೆಗೆ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲ ಮಹಿಳಾ ಸಬಲೀಕರಣ ಬಯಸದ ಕಾಣದ ಕೈಗಳು ಮಹಿಳಾ ಮೀಸಲಾತಿ ಅಂಗೀಕಾರಗೊಳ್ಳದೇ ಇರಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಒಂದು ವೇಳೆ ಮಹಿಳೆಯರಿಗೆ ಮೀಸಲಾಯಿ ನೀಡಿದರೆ ಆ ಸ್ಥಾನಗಳು ಕೈತಪ್ಪುವ ಕಾರಣದಿಂದಾಗಿ ತೆರೆಮರೆಯಲ್ಲಿ ಅದನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿವೆ.

ರಾಜಕೀಯದ ಅಪರಾಧೀಕರಣ ಮತ್ತು ಪಕ್ಷದ ಒಳಗಿನ ಪ್ರಜಾಪ್ರಭುತ್ವದಂತಹ ಚುನಾವಣಾ ಸುಧಾರಣೆಯ ದೊಡ್ಡ ಸಮಸ್ಯೆಗಳಿಂದ WRB ಗಮನವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ ಎಂದು ವಿರೋಧಿಗಳು ವಾದಿಸುತ್ತಾರೆ. ಲೈಂಗಿಕ ಕಿರುಕುಳ, ದೌರ್ಜನ್ಯ ಇನ್ನಿತರ ಕಾರಣಗಳು WRB ಅನ್ನು ಅಂಗೀಕರಿಸದೇ ಇರಲು ಕಾರಣವಾಗಿವೆ ಎಂದು ವಿರೋಧಿಗಳು ಹೇಳುತ್ತಾರೆ.

ಭಾರತದಲ್ಲಿ ಮಹಿಳಾ ಮೀಸಲಾತಿಯ ಸ್ಥಿತಿ ಏನು?

ಗುಜರಾತ್ - ಇದು ತನ್ನ 182 ಸದಸ್ಯರ ವಿಧಾನಸಭೆಯಲ್ಲಿ ಕೇವಲ 8% ಮಹಿಳಾ ಶಾಸಕರನ್ನು ಆಯ್ಕೆ ಮಾಡಿದೆ.

ಹಿಮಾಚಲ ಪ್ರದೇಶ - ಪ್ರತಿ ಎರಡನೇ ಮತದಾರರು ಮಹಿಳೆಯಾಗಿದ್ದು, 67 ಪುರುಷರು ಮತ್ತು 1 ಮಹಿಳೆಯನ್ನು ಮಾತ್ರ ಆಯ್ಕೆ ಮಾಡಿದ್ದಾರೆ.

ರಾಷ್ಟ್ರೀಯ ಸರಾಸರಿ - ಎಲ್ಲಾ ರಾಜ್ಯ ಅಸೆಂಬ್ಲಿಗಳಲ್ಲಿ ಮಹಿಳೆಯರ ರಾಷ್ಟ್ರೀಯ ಸರಾಸರಿಯು ಸುಮಾರು 8% ರಷ್ಟಿದೆ.

ಶ್ರೇಯಾಂಕಗಳು - ಇಂಟರ್-ಪಾರ್ಲಿಮೆಂಟರಿ ಯೂನಿಯನ್ ವರದಿಯ ಪ್ರಕಾರ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ ಭಾರತವು 193 ದೇಶಗಳಲ್ಲಿ 144 ನೇ ಸ್ಥಾನದಲ್ಲಿದೆ.

ನಮ್ಮ ನೆರೆಹೊರೆಯವರಲ್ಲಿ ಭಾರತವು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಹಿಂದೆ ಉಳಿದಿದೆ.

WRB ಏಕೆ ಮುಖ್ಯವಾಗಿದೆ?

*ವ್ಯವಸ್ಥಿತ ಅಸಮಾನತೆ ಮತ್ತು ಅಡೆತಡೆಗಳಿಂದಾಗಿ ಮಹಿಳೆಯರು ಐತಿಹಾಸಿಕವಾಗಿ ಬಳಲುತ್ತಿದ್ದಾರೆ.

*ಮಹಿಳಾ ಪ್ರಾತಿನಿಧ್ಯವು ನಮ್ಮ ಪ್ರಜಾಪ್ರಭುತ್ವದಲ್ಲಿ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ

*ಪಂಚಾಯತ್‌ಗಳ ಮೇಲಿನ ಕೆಲವು ಇತ್ತೀಚಿನ ಅಧ್ಯಯನಗಳು ಮಹಿಳಾ ಸಬಲೀಕರಣ ಮತ್ತು ಸಂಪನ್ಮೂಲಗಳ ಹಂಚಿಕೆಯ ಮೇಲೆ ಮೀಸಲಾತಿಯ ಧನಾತ್ಮಕ ಪರಿಣಾಮವನ್ನು ತೋರಿಸಿವೆ.

*ಮಹಿಳೆಯರ ಮತ ಪಾಲು ಹೆಚ್ಚಿದ್ದರೂ ಅಧಿಕಾರದ ಸ್ಥಾನದಲ್ಲಿರುವ ಮಹಿಳೆಯರ ಸಂಖ್ಯೆ ಹೆಚ್ಚಿಲ್ಲ.

*ಮಹಿಳಾ ಮೀಸಲಾತಿಯ ಯಾವುದೇ ಯೋಜನೆಯು ಸಾಂವಿಧಾನಿಕ ತತ್ವಗಳೊಳಗೆ ಇರಬೇಕು ಮತ್ತು ಜಾತಿ ಗುಂಪುಗಳಾದ್ಯಂತ ಅದರ ಪ್ರಾತಿನಿಧ್ಯವನ್ನು ಸಹ ಪರಿಗಣಿಸಬೇಕು.

ರಾಜಕೀಯ ಪಕ್ಷಗಳಿಂದ WRB ಕಡೆಗಣನೆ

ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಏಕೆ ಅಂಗೀಕರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿಗೆ ಎರಡು ಬಾರಿ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ವಾಸ್ತವವಾಗಿ ಯುಪಿಎ-2 ಸರ್ಕಾರದ ಅಂತ್ಯದ ಮೊದಲು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಕಾಂಗ್ರೆಸ್ ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಈ ಮಸೂದೆಯನ್ನು ವಿರೋಧಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಆದರೆ ಇದು ವಿರೋಧ ಪಕ್ಷದ ಮೈತ್ರಿಗೆ ದೊಡ್ಡ ಆಘಾತವನ್ನು ನೀಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ನಂಬುತ್ತವೆ. ಏಕೆಂದರೆ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಜೆಡಿಯು, ಎನ್‌ಸಿಪಿ ಮತ್ತು ಹಲವು ಇತರರು ಈ ಮಸೂದೆಯನ್ನು ವಿರೋಧಿಸುತ್ತಾರೆ.

ಈ ಮಸೂದೆಯು ವಿರೋಧ ಪಕ್ಷದ ಮೈತ್ರಿಯ ಹಿತಾಸಕ್ತಿಗಳನ್ನು ಕೆಡಿಸುತ್ತದೆ ಎಂದು ಮೂಲಗಳು ನಂಬಿದ್ದರೂ, ಸರಿಸುಮಾರು ಅರ್ಧದಷ್ಟು ಮತದಾರರು ಮತ್ತು ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮಹಿಳಾ ಮತದಾರರನ್ನು ಓಲೈಸಲು ಇದು ಮಾಸ್ಟರ್ ಸ್ಟ್ರೋಕ್ ಆಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+