ಸಂಸತ್ನಲ್ಲಿ ಭದ್ರತಾ ಲೋಪ: ಕರ್ನಾಟಕದ ಈ ಸಂಸದ ಹೇಳಿದ್ದೇನು ಗೊತ್ತಾ?-ಮಾಹಿತಿ
ನವದೆಹಲಿ, ಡಿಸೆಂಬರ್, 13: ಸಂಸತ್ ಭವನದಲ್ಲಿ ಭಾರೀ ಭದ್ರತಾ ಲೋಪವಾಗಿದ್ದು, ಈ ವೇಳೆ ಸಂಸದರೆಲ್ಲ ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಪಲಾಯನ ಮಾಡಿದ್ದಾರೆ. ಅಲ್ಲದೆ ಬಿಜೆಪಿ, ಕಾಂಗ್ರೆಸ್ ನಾಯಕರು ಜಿದ್ದಾಜಿದ್ದಿಗೆ ಬಿದ್ದಂತೆ ಘಟನೆ ಬಗ್ಗೆ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಘಟನೆ ಕುರಿತು ನಮ್ಮ ಹಲವರು ಪ್ರತಿಕ್ರಿಯೆಗಳನ್ನು ನೀಡುತ್ತಲೇ ಇದ್ದಾರೆ. ಹಾಗೆಯೇ ಇದೀಗ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಮಾತನಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಮುನಿಸ್ವಾಮಿ ಅವರು, ಈ ಘಟನೆಯಲ್ಲಿ ಒಟ್ಟು 3 ಜನರು ಭಾಗಿ ಆಗಿದ್ದಾರೆ. ಇದ್ದಕ್ಕಿದ್ದಂತೆ ಗ್ಯಾಲರಿಯಿಂದ ಒಬ್ಬ ಹಾರಿದ್ದಾನೆ. ಈ ವೇಳೆ ನಳೀನ್ ಕುಮಾರ್ ಕಟೀಲ್ ಸೇರಿ ಇನ್ನಿತರ ಸಂಸದರು ಹಿಡಿದಯಕೊಂಡರು. ಅದೇ ರೀತಿ ಒಬ್ಬ ಓಡಿಹೋಗಿದ್ದ. ನಂತರ ಆತ ಶೂನಿಂದ ತಂದಿದ್ದ ಟಿಯರ್ ಗ್ಯಾಸ್ ಓಪನ್ ಮಾಡಲು ಯತ್ನಿಸುವಾಗ ಹಿಡಿದಿಟ್ಟು ಆತನನ್ನು ಸಹ ವಿಚಾರಿಸಿದ್ದಾರೆ ಎಂದು ಹೇಳಿದ್ದಾರೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.

ಈ ವೇಳೆ ವಿಚಾರಣೆ ಮಾಡಿದಾಗ ಒಬ್ಬ ಲಕ್ನೌ ಮತ್ತು ಇನ್ನೊಬ್ಬ ಮಹಾರಾಷ್ಟ್ರ ಮೂಲದವನು ಎಂದು ಹೇಳಿಕೊಂಡಿದ್ದಾರೆ ಎಂದು ಮುನಿಸ್ವಾಮಿ ಹೇಳಿದ್ದಾರೆ. ಇನ್ನು ಸಂಸತ್ ಒಳಗಡೆ ಇಬ್ಬರು ಗಂಡಸರು ಮತ್ತು ಹೊರಗಡೆ ಮಹಿಳೆಯೊಬ್ಬಳು ಇದ್ದರು ಅಂತಾ ತಿಳಿಸಿದರು.
ಇನ್ನು ಚುನಾವಣೆ ವೇಳೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದನ್ನು ಸಹ ಬೇಕು ಅಂತಲೇ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಇದರಲ್ಲಿ ಯಾರದ್ದು ಬೇಕಾದರೂ ಕೈವಾಡ ಇರಬಹುದು, ಇದು ಬಿಜೆಪಿ ಮೇಲೆ ಕಪ್ಪು ಚುಕ್ಕೆ ತಂದಿಡುವುದೇ ಉದ್ದೇಶವಾಗಿರಬಹುದು. ಆದರೆ ಈ ರೀತಿ ಮಾಡುವುದಕ್ಕಿಂತ ನೇರವಾಗಿ ಮಾತನಾಡಿದರೆ ಒಳ್ಳೆಯದು ಅಂತಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಲೋಕಸಭೆಯಲ್ಲಿ ನೀಲಿ ಬಣ್ಣದ ಜಾಕೆಟ್ ಧರಿಸಿದ ಯುವಕನೊಬ್ಬ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸಿದ್ದಾನೆ. ಬಳಿಕ ಆತನ ಜೊತೆ ಮತ್ತೊಬ್ಬ ಸೇರಿಕೊಂಡಿದ್ದು, ಇಬ್ಬರೂ ಟಿಯರ್ ಗ್ಯಾಸ್ ಎಸೆದು ಅಲ್ಲಿದ್ದವರಿಗೆ ಆತಂಕ ಸೃಷ್ಟಿಸಿದ್ದಾರೆ. ಹೀಗೆಯೇ ಹಿಂದೊಮ್ಮೆ 22 ವರ್ಷಗಳ ಹಿಂದೆ ಇದೇ ರೀತಿ ಘಟನೆ ನಡೆದಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications