ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಮೈಸೂರಿನಲ್ಲಿ ಮನೋರಂಜನ್ ಸ್ನೇಹಿತೆಯ ವಿಚಾರಣೆ
ಬೆಂಗಳೂರು ಡಿಸೆಂಬರ್ 27: ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಬುಧವಾರ ಮೈಸೂರಿನಲ್ಲಿ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಮಹಿಳೆ ಇಬ್ಬರು ಲೋಕಸಭೆಯ ಅತಿಕ್ರಮಣದಾರರಲ್ಲಿ ಒಬ್ಬರಾದ ಡಿ ಮನೋರಂಜನ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.
ಕಳೆದ 10 ದಿನಗಳಿಂದ ಮೈಸೂರಿನಲ್ಲಿ ಬೀಡು ಬಿಟ್ಟಿರುವ ದೆಹಲಿ ಪೊಲೀಸರು ಮೈಸೂರಿನಲ್ಲಿರುವ ಮಹಿಳೆಯೊಬ್ಬರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮನೋರಂಜನ್ ಅವರ ಫೋನ್ ಕರೆ ದಾಖಲೆಗಳನ್ನು ಅಧ್ಯಯನ ಮಾಡಿದ ನಂತರ ಪೊಲೀಸರು ಮಹಿಳೆಯ ವಿವರಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಮನೋರಂಜನ್ ಆ ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇಬ್ಬರೂ ಸುದೀರ್ಘ ಸಂಭಾಷಣೆ ನಡೆಸಿದ್ದರು. ಇದು ಆಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದೆಹಲಿ ಪೊಲೀಸರಿಗೆ ಆಸಕ್ತಿಯನ್ನುಂಟು ಮಾಡಿದೆ. ಮನೋರಂಜನ್ ಜೊತೆಗಿನ ಸಂಬಂಧ ಮತ್ತು ಅವರ ಸುದೀರ್ಘ ಸಂಭಾಷಣೆಗೆ ಕಾರಣವೇನು ಎಂದು ಪೊಲೀಸರು ಮಹಿಳೆಯನ್ನು ಪ್ರಶ್ನಿಸುತ್ತಿದ್ದಾರೆ.
ಮನೋರಂಜನ್ ಪೋಷಕರ ವಿಚಾರಣೆ
ದೆಹಲಿ ಪೊಲೀಸರ ತಂಡ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ತನಿಖಾ ತಂಡ ಕಳುಹಿಸಿದ ಹೊಸ ಪ್ರಶ್ನಾವಳಿಗಳೊಂದಿಗೆ ಮನೋರಂಜನ್ ಅವರ ಪೋಷಕರನ್ನು ಪ್ರಶ್ನಿಸಿದೆ. ಮೈಸೂರಿನ ಭಾಷಾಂತರಕರ ಸಹಾಯದಿಂದ ತಂಡವು ಮನೋರಂಜನ್ ಅವರ ಪೋಷಕರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಮನೋರಂಜನ್ ಅವರ ಮೈಸೂರಿನ ನಿವಾಸದಿಂದ ಡೈರಿ ಮತ್ತು ವಿವಿಧ ಟಿಪ್ಪಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿ ಆಧರಿಸಿ ಪೊಲೀಸರು ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಡಿಸೆಂಬರ್ 22 ರಂದು, ಮನೋರಂಜನ್ ಅವರ ಸ್ನೇಹಿತ ಮತ್ತು ಬಹುರಾಷ್ಟ್ರೀಯ ಕಂಪನಿಯ ಟೆಕ್ಕಿಯನ್ನು ಬಾಗಲಕೋಟೆಯಿಂದ ಬಂಧಿಸಲಾಯಿತು. ಪ್ರಕರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಯಿತು. ಇವರು ಸಾಯಿಕೃಷ್ಣ ಜಗಲಿ ಮನೋರಂಜನ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದು, ಪ್ರಕರಣದಲ್ಲಿ ಆತನ ಪಾತ್ರವಿದೆಯೇ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಡಿಸೆಂಬರ್ 13 ರಂದು ಲೋಕಸಭೆಗೆ ಎಂಟ್ರಿ ಕೊಟ್ಟರು. ಸಂಸತ್ತಿನ ಕೆಳಮನೆಯಲ್ಲಿ ಸ್ಮೋಕ್ ಬಾಂಬ್ ಅನ್ನು ಒಳಗಡೆ ತಂದಿದ್ದರು. ಇದರಿಂದಾಗಿ ಪ್ರಕರಣದ ಪ್ರಮುಖ ಆರೋಪಿಗಳು ಮತ್ತು ಇತರ ಹಲವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಾಜಿ ಪೋಲೀಸ್ ಪುತ್ರನ ಬಂಧನ
ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಪೋಲೀಸ್ ಪುತ್ರನನ್ನು ಬಂಧಿಸಲಾಗಿದೆ. ಸಾಯಿಕೃಷ್ಣ ಜಗಲಿ ಬಂಧಿತ ಆರೋಪಿಯಾಗಿದ್ದಾರೆ. ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗನಾಗಿರುವ ಕರ್ನಾಟಕದ ಇಂಜಿನಿಯರ್ ನನ್ನು ದೆಹಲಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಾಗಲಕೋಟೆಯ ಅವರ ಮನೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆತರಲಾಗಿದ್ದು ಅವರ ವಿಚಾಋಣೆ ಕೂಡ ಮಾಡಲಾಗುತ್ತಿದೆ.












Click it and Unblock the Notifications