ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ : ಇಂದೂ ಮುಂದುವರೆದ ಪ್ರತಿಭಟನೆ
ನವದೆಹಲಿ, ಜುಲೈ 23 : ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ, ಮತದಾನದ ಬಳಿಕ ರಾಜ್ಯಸಭೆ ಮತ್ತು ಲೋಕಸಭೆ ಕಲಾಪ ಸೋಮವಾರ ಪುನಃ ಆರಂಭವಾಗಿದೆ. ಟಿಡಿಪಿ ಸಂಸದರು ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.
ಲೋಕಸಭೆಯಲ್ಲಿ ಶುಕ್ರವಾರ ಅವಿಶ್ವಾಸ ನಿರ್ಣಯದ ಮೇಲೆ 12 ಗಂಟೆಗಳ ಕಾಲ ಚರ್ಚೆ ನಡೆಯಿತು. ಮತದಾನ ನಡೆದಾಗ ನಿರ್ಣಯದ ಪರ 126, ವಿರುದ್ಧ 325 ಮತಗಳು ಚಲಾವಣೆಗೊಂಡವು. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ ವಿಪಕ್ಷಗಳಿಗೆ ಭಾರೀ ಮುಖಭಂಗ ಉಂಟಾಗಿತ್ತು.
ಇಂದು ಲೋಕಸಭೆ, ರಾಜ್ಯಸಭೆಯಲ್ಲಿ ನಡೆದಿದ್ದೇನು?
* ಸೋಮವಾರ ಕಲಾಪ ಆರಂಭಗೊಂಡಾಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡನೆ ಮಾಡಿದ್ದ ಅವಿಶ್ವಾಸ ನಿರ್ಣಯವನ್ನು ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿರ್ಣಯ ಮಂಡಿಸಿ, ಪರವಿರುವವರು ಎಸ್ ಎಂದು, ವಿರುದ್ಧ ಇರುವವರು ನೋ ಎಂದು ಹೇಳುವಂತೆ ಸೂಚಿಸಿದರು.

* ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಇಂದು ಸಹ ಟಿಡಿಪಿ ಸಂಸದರು ಒತ್ತಾಯಿಸಿದರು. ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಸಂಸದರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
* ರಾಜ್ಯಸಭೆ ಕಲಾಪಕ್ಕೆ ಹಲವು ಸದಸ್ಯರು ತಡವಾಗಿ ಆಗಮಿಸಿದರು. ತಡವಾಗಿ ಆಗಮಿಸಿದ ಸದಸ್ಯರಿಗೆ ವೆಂಕಯ್ಯ ನಾಯ್ಡು ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಸೂಚನೆ ನೀಡಿದರು.
Delhi: TDP MP Naramalli Sivaprasad dresses up a Annamayya, a devotee of Lord Balaji to protest over demand of special status for Andhra Pradesh. Sivaprasad had dressed up as a women, washer-man & a school boy among others during the Budget session of the Parliament. pic.twitter.com/rhKGxXq2R5
— ANI (@ANI) July 23, 2018
* ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, 'ವಿಪಕ್ಷಗಳಲ್ಲಿ ಎಷ್ಟು ಒಗ್ಗಟ್ಟು ಇದೆ ಎಂಬುದು ಈಗ ಸಾಬೀತಾಗಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಅವರ ಪ್ರಯತ್ನ ವಿಫಲವಾಗಿದೆ. ಇದು ಮೊದಲ ಭೂಕಂಪ' ಎಂದು ಟೀಕಿಸಿದರು.












Click it and Unblock the Notifications