ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಿಂದಾಗಿ 37-78 ಸಾವಿರ ಜನರ ಮರಣ ನಿಯಂತ್ರಣ: ಆರೋಗ್ಯ ಸಚಿವ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹಾಗೂ ಅದರ ಸಂಬಂಧಿ ಮರಣ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಲೋಕಸಭೆಗೆ ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಗರಿಷ್ಠ ಪ್ರಕರಣಗಳು ಮತ್ತು ಸಾವುಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ, ಒಡಿಶಾ, ಅಸ್ಸಾಂ, ಕೇರಳ ಮತ್ತು ಗುಜರಾತ್‌ಗಳಲ್ಲಿ ವರದಿಯಾಗಿವೆ. ಈ ಎಲ್ಲ ರಾಜ್ಯಗಳಲ್ಲಿಯೂ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ಇಂದಿನಿಂದ ಸಂಸತ್ ಅಧಿವೇಶನ: ಮಂಡನೆಯಾಗಲಿರುವ ಮಸೂದೆಗಳು ಯಾವುವು?ಇಂದಿನಿಂದ ಸಂಸತ್ ಅಧಿವೇಶನ: ಮಂಡನೆಯಾಗಲಿರುವ ಮಸೂದೆಗಳು ಯಾವುವು?

ಕೋವಿಡ್ 19 ನಿರ್ವಹಣೆಯ ಪ್ರಯತ್ನದಲ್ಲಿ ಭಾರತವು ಪ್ರತಿ ಮಿಲಿಯನ್ ಕೊರೊನಾ ವೈರಸ್‌ ಪ್ರಕರಣಗಳಿಗೆ 3,328 ಮರಣಗಳು ಹಾಗೂ ಪ್ರತಿ ಒಂದು ಮಿಲಿಯನ್ ಜನಸಂಖ್ಯೆಗೆ 55 ಸಾವುಗಳಿಗೆ ನಿಯಂತ್ರಿಸುವಲ್ಲಿ ಸಫಲವಾಗಿದೆ. ಇದೇ ರೀತಿ ಕೊರೊನಾ ವೈರಸ್‌ಗೆ ತುತ್ತಾದ ಜಗತ್ತಿನ ದೇಶಗಳಿಗೆ ಹೋಲಿಸಿದರೆ ನಮ್ಮದು ಕಡಿಮೆ ಮರಣ ಪ್ರಮಾಣ ಇರುವ ದೇಶಗಳಲ್ಲಿ ಒಂದು ಎಂದು ತಿಳಿಸಿದ್ದಾರೆ. ಮುಂದೆ ಓದಿ.

ಲಾಕ್‌ಡೌನ್ ಗಟ್ಟಿಯಾದ ನಿರ್ಧಾರ

ಲಾಕ್‌ಡೌನ್ ಗಟ್ಟಿಯಾದ ನಿರ್ಧಾರ

ರಾಷ್ಟ್ರವ್ಯಾಪಿ ಲಾಕ್‌ಡೌನ್ ಬಹಳ ಗಟ್ಟಿತನ ನಿರ್ಧಾರ ಎಂದು ಬಣ್ಣಿಸಿದ ಹರ್ಷವರ್ಧನ್, ಕೋವಿಡ್ ಸಂಬಂಧಿತ ತುರ್ತು ಸಂದರ್ಭಗಳಿಗಾಗಿ ಮಾಹಿತಿ ನಿರ್ಧಾರಗಳನ್ನು ತೆಗೆದುಕೊಳ್ಳಲು 11 ಸ್ವಶಕ್ತ ಗುಂಪುಗಳನ್ನು ರಚಿಸಲಾಗಿದೆ.ಕೋವಿಡ್ 19 ನಿಯಂತ್ರಣಕ್ಕೆ ಜಾರಿ ಮಾಡಿದ ನಾಲ್ಕು ತಿಂಗಳ ಲಾಕ್‌ಡೌನ್‌ನಿಂದ 14-29 ಲಕ್ಷ ಪ್ರಕರಣಗಳು ಮತ್ತು 37-78,000 ಮರಣಗಳನ್ನು ತಡೆದಿವೆ. ಈ ನಾಲ್ಕು ತಿಂಗಳನ್ನು ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲ ವೃದ್ಧಿ ಮತ್ತು ದೇಶದೊಳಗೆ ಪಿಪಿಇ, ಎನ್ 95 ಮಾಸ್ಕ್ ಮತ್ತು ವೆಂಟಿಲೇಟರ್‌ಗಳಂತಹ ಪ್ರಮುಖ ವಸ್ತುಗಳ ಉತ್ಪಾದನೆ ಮಾಡಲು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಗೆ ಕೊಕ್

ಪ್ರಶ್ನೋತ್ತರ ಅವಧಿಗೆ ಕೊಕ್

ಅಧಿವೇಶನದ ಆರಂಭದಲ್ಲಿ ಸಚಿವ ಪ್ರಹ್ಲಾದ್ ಜೋಷಿ ಪ್ರಶ್ನೋತ್ತರ ಕಲಾಪವನ್ನು ತೆಗೆದುಹಾಕುವ ನಿರ್ಣಯವನ್ನು ಮಂಡಿಸಿದರು. ಜತೆಗೆ ಖಾಸಗಿ ಸದಸ್ಯರ ವ್ಯವಹಾರವನ್ನು ಮಂಡಿಸಿದರು. ಇದಕ್ಕೆ ವಿರೋಧಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ವೇಳೆ ಸುವರ್ಣ ಸಮಯ. ಅದನ್ನು ತೆಗೆದುಹಾಕುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ ಎಂದು ಟೀಕಿಸಿದರು.

ಸಂಸತ್ತು ಸೈನಿಕರೊಂದಿಗೆ ದೇಶವಿದೆ ಎಂಬ ಸಂದೇಶ ನೀಡಲಿದೆ: ಪ್ರಧಾನಿ ಭರವಸೆಸಂಸತ್ತು ಸೈನಿಕರೊಂದಿಗೆ ದೇಶವಿದೆ ಎಂಬ ಸಂದೇಶ ನೀಡಲಿದೆ: ಪ್ರಧಾನಿ ಭರವಸೆ

ಭಾರತ-ಚೀನಾ ವಿವಾದ ಚರ್ಚೆ ಇಲ್ಲ

ಭಾರತ-ಚೀನಾ ವಿವಾದ ಚರ್ಚೆ ಇಲ್ಲ

ಪ್ರಶ್ನೋತ್ತರ ಕಲಾಪವು ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ಶೂನ್ಯ ಅವಧಿಯಲ್ಲಿ ಡಿಎಂಕೆ ಸಂಸದ ಟಿಆರ್ ಬಾಲು, ನೀಟ್ ಪರೀಕ್ಷೆ ಬರೆಯಬೇಕಿದ್ದ ಗ್ರಾಮೀಣ ಭಾಗದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳನ್ನು ಪ್ರಸ್ತಾಪಿಸಿದರು. ಭಾರತ ಮತ್ತು ಚೀನಾ ಗಡಿ ಉದ್ವಿಗ್ನತೆಯ ಬಗ್ಗೆ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧುರಿ ಪ್ರಸ್ತಾಪಿಸಲು ಮುಂದಾದಾಗ ಅದು ಬಹಳ ಸಂವೇನಾಕಾರಿ ಸಂಗತಿ ಎಂದು ಸ್ಪೀಕರ್ ಓಂ ಬಿರ್ಲಾ ಅಡ್ಡಿಪಡಿಸಿದರು.

Recommended Video

Sanjjanaa & Ragini to jail,ಕೊನೆಗೂ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲಿದ್ದಾರೆ ಸಂಜನಾ, ರಾಗಿಣಿ
ಹಣಕಾಸು ಗೊತ್ತುವಳಿ ಮಂಡನೆ

ಹಣಕಾಸು ಗೊತ್ತುವಳಿ ಮಂಡನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2020-21ರ ಮೊದಲ ಭಾಗದ ಅನುದಾನಗಳಿಗೆ ಪೂರಕ ಬೇಡಿಕೆ ಹಾಗೂ 2016-17ನೇ ಸಾಲಿನ ಹೆಚ್ಚುವರಿ ಅನುದಾನದ ಬೇಡಿಕೆಯ ನಿಲುವಳಿಗಳನ್ನು ಮಂಡಿಸಿದರು. ಜತೆಗೆ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020ಯನ್ನು ಹಿಂದಕ್ಕೆ ಪಡೆಯುವ ನಡೆ ಮಂಡಿಸಿದರು. ಅದಕ್ಕೆ ವಿರೋಧ ವ್ಯಕ್ತವಾದರೂ ಮಸೂದೆಯನ್ನು ಹಿಂಪಡೆಯಲಾಯಿತು.

English summary
Parliament Monsoon Session 2020: Union health minister Harsh Vardhan said in Lok Sabha, the rate of covid infection is low in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X