ಆರೋಗ್ಯಕರ ಮಗುವಿಗಾಗಿ ಅನಾರೋಗ್ಯಕರ ಮಗುವಿನ ಬರ್ಬರ ಹತ್ಯೆ!
ಮೊರಾದಾಬಾದ್, ಆಗಸ್ಟ್ 07 : ಆರೋಗ್ಯಕರ ಮಗು ಬೇಕೆಂಬ ಕಾರಣಕ್ಕಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಮಗಳನ್ನು ಹತ್ಯೆ ಮಾಡಿ ಮನೆಯಲ್ಲೇ ಹೂತುಹಾಕಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಮೋರಾದಾಬಾದ್ ಜಿಲ್ಲೆಯ ಚೌಧರ್ ಪುರ ಗ್ರಾಮದಲ್ಲಿ ನಡೆದಿದೆ.
ಈ ಮಗುವನ್ನು ಕೊಂದು ಮನೆಯಲ್ಲಿಯೂ ಹೂಳಿದರೆ ಮುಂದೆ ನಿಮಗೆ ಆರೋಗ್ಯಕರ ಮಗು ಹುಟ್ಟುತ್ತದೆ ಎಂದು ಜ್ಯೋತಿಷಿಯೊಬ್ಬ ಹೇಳಿದ ಮಾತನ್ನು ಕೇಳಿಕೊಂಡು ತಾರಾ ಎಂಬ ಹೆಸರಿನ ಆ ಬಾಲಕಿಯ ಪೋಷಕರು ಈ ಹೀನ ಕೃತ್ಯ ಎಸಗಿದ್ದಾರೆ.
ತಾರಾಳ ಮಗುವಿಗೆ ಮಗಳನ್ನು ಹತ್ಯೆಗೈಯುವುದು ಅಷ್ಟು ಇಷ್ಟವಿರಲಿಲ್ಲ. ಆದರೂ, ಮಗಳು ತನ್ನ ಬಳಿಯೇ ಇರಬೇಕೆಂದು ತಾರಾಳನ್ನು ಮನೆಯಲ್ಲಿಯೇ ಹೂತಿದ್ದಾಗಿ ತಾರಾಳ ಅಜ್ಜಿ ಹೇಳಿಕೆ ನೀಡಿದ್ದಾರೆ. ನೆರೆಹೊರೆಯವರು ಈ ಬಗ್ಗೆ ದೂರು ನೀಡಿದ್ದರ ಮೇರೆಗೆ ಪೊಲೀಸರು ಭೂಮಿಯನ್ನು ಬಗೆದು ತಾರಾಳ ದೇಹವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಪೌಷ್ಟಿಕತೆಯಿಂದ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿ ಆಕೆ ಮೂಳೆ ರೋಗದಿಂದ ಬಳಲುತ್ತಿದ್ದಳು. ಎಷ್ಟೋ ವೈದ್ಯರ ಬಳಿ ತೋರಿಸಿ, ಹಲವಾರು ಬಗೆಯ ಚಿಕಿತ್ಸೆ ನೀಡಿದ್ದರೂ ತಾರಾ ಗುಣಮುಖಳಾಗಿರಲಿಲ್ಲ. ಆಕೆ ದಿನದಿಂದ ದಿನಕ್ಕೆ ಅಶಕ್ತವಾಗುತ್ತಾ ಸಾಗುತ್ತಿದ್ದಳು ಎಂದು ಅಜ್ಜಿ ಹೇಳಿದ್ದಾರೆ. ಅವರ ಮೊಮ್ಮಗನಿಗೂ ಇದೇ ಬಗೆಯ ರೋಗವಿದೆ.
ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದ್ದೇನೆಂದರೆ, ತಾರಾಳ ದೇಹದಲ್ಲಿ ಸಾಸಿವೆ ಕಾಳಿನಷ್ಟು ಕೂಡ ಆಹಾರವಿರಲಿಲ್ಲ. ಅಲ್ಲದೆ, ಆಕೆ ಉಸಿರುಗಟ್ಟುವಿಕೆಯಿಂದ ಸತ್ತಿದ್ದಾಳೆ. ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ತಾರಾಳ ಪೋಷಕರನ್ನು ಇನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿಲ್ಲ.












Click it and Unblock the Notifications