ಹನೀಪ್ರೀತ್ ನ್ಯಾಯಾಂಗ ಬಂಧನ ವಿಸ್ತರಿಸಿದ ಪಂಚಕುಳ ನ್ಯಾಯಾಲಯ

Posted By:
Subscribe to Oneindia Kannada

ಪಂಚಕುಳ (ಹರ್ಯಾಣ), ಅಕ್ಟೋಬರ್ 24: ಅತ್ಯಾಚಾರದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರ್ಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ದತ್ತುಪುತ್ರಿ ಹನೀಪ್ರೀತ್ ನ್ಯಾಯಾಂಗ ಬಂಧನವನ್ನು ಪಂಚಕುಳ ಜಿಲ್ಲಾ ನ್ಯಾಯಾಲಯ ವಿಸ್ತರಿಸಿದೆ.

ಹನಿಪ್ರೀತ್ ಗೆ 6 ದಿನ ಪೊಲೀಸ್ ಕಸ್ಟಡಿ: ಪಂಚಕುಲ ನ್ಯಾಯಾಲಯ ಆದೇಶ

ರಾಮ್ ರಹೀಮ್ ಬಂಧನದ ನಂತರ ಹರ್ಯಾಣದಲ್ಲುಂಟಾದ ಗಲಭೆಯಿಂದ ನಲವತ್ತಕ್ಕೂ ಹೆಚ್ಚು ಜನ ಅಸುನೀಗಿದ್ದರು. ಕೋಟ್ಯಂತರ ಆಸ್ತಿ ಪಾಸ್ತಿ ನಾಶವಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಂಘಟನೆಯ ಕೆಲ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

Panchkula Court extends Honeypreet, Sukhdeep Kaur's judicial custody till Nov. 6

ರಾಮ್ ರಹೀಮ್ ದತ್ತುಪುತ್ರಿ ಹನೀಪ್ರೀತ್ ಕೈವಾಡ ಸಹ ಈ ಗಲಭೆಯ ಹಿಂದಿದೆ ಎಂಬ ಕಾರಣಕ್ಕೆ ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದರಾದರೂ, ಹಲವು ದಿನಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರೆಚಿದ್ದ ಹನೀಪ್ರೀತ್ ಅಕ್ಟೋಬರ್ 3 ರಂದು ತಾವೇ ಪೊಲೀಸರಿಗೆ ಶರಣಾಗಿದ್ದರು.

ಇದೀಗ ಹನೀಪ್ರೀತ್ ಅವರ ನ್ಯಾಯಾಂಗ ಬಂಧನವನ್ನು ನವೆಂಬರ್ 6 ವಿಸ್ತರಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Panchkula district court on Monday extended the judicial custody of the adopted daughter of Dera chief Gurmeet Ram Rahim Singh, Honeypreet Insan, and her accomplice Sukhdeep Kaur till November 6.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ