ಪಾಕಿಸ್ತಾನ ಸುಳ್ಳು ಹೇಳಿಕೆಗೆ ಪ್ರತ್ಯುತ್ತರ ಭಾರತೀಯ ಜಲಸೇನೆ
ನವದೆಹಲಿ, ಮಾರ್ಚ್ 05: ಭಾರತದ ಜಲಾಂತರ್ಗಾಮಿ ನೌಕೆ ಪಾಕಿಸ್ತಾನದ ಜಲಗಡಿ ದಾಟಲು ಯತ್ನಿಸಿತು ಎಂದು ಪಾಕಿಸ್ತಾನ ಹೇಳಿದ್ದು, ಇದು ಸುಳ್ಳು ಎಂದು ಭಾರತೀಯ ಜಲಸೇನೆ ಸ್ಪಷ್ಟಪಡಿಸಿದೆ.
ಭಾರತದ ಸಬ್‌ಮರೀನ್ ಒಂದು ಪಾಕಿಸ್ತಾನದ ಜಲಗಡಿಯನ್ನು ದಾಟಲು ಯತ್ನಿಸಿತ್ತು, ನಾವು ಅದನ್ನು ತಡೆದಿದ್ದೇವೆ ಎಂದು ಪಾಕಿಸ್ತಾನ ಜಲಸೇನೆಯು ಹೇಳಿಕೊಂಡಿತ್ತು.

ಆದರೆ ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಭಾರತ ಜಲಸೇನೆ, ನಮ್ಮ ಯಾವುದೇ ಜಲಾಂತರ್ಗಾಮಿ ನೌಕೆ ಆ ರೀತಿಯ ಯತ್ನವನ್ನು ಮಾಡಿಲ್ಲ. ಪಾಕಿಸ್ತಾನವು ಸುಳ್ಳು ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
As was stated during the Jt Press Statement on 28 Feb 19, the #IndianNavy remains deployed as necessary to protect National Maritime Interests. Over the past several days we have witnessed Pakistan indulging in false propoganda and spread of misinformation. 1/2
— SpokespersonNavy (@indiannavy) March 5, 2019
ಭಾರತೀಯ ಜಲಸೇನೆಯು ಭಾರತೀಯರ ಹಿತರಕ್ಷಣೆಗೆ ಬದ್ಧವಾಗಿದ್ದು, ಯಾವುದೇ ಇತರ ದೇಶಗಳನ್ನು ಹೆದರಿಸುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications