ಪಾಕಿಸ್ತಾನದಲ್ಲಿ ಹುಟ್ಟಿದ್ದ ‘ಹಿಂದೂಸ್ತಾನದ ಮಗ’ ಇನ್ನಿಲ್ಲ

ನವದೆಹಲಿ: ಉಗ್ರರ ವಿಚಾರದಲ್ಲಿ ನೇರವಾಗಿ ಮಾತನಾಡುತ್ತಾ, ಪಾಕಿಸ್ತಾನದ ತಪ್ಪನ್ನು ಮುಲಾಜಿಲ್ಲದೆ ಖಂಡಿಸುತ್ತಾ ತಮ್ಮ ಬರಹಗಳ ಮೂಲಕವೇ ಖ್ಯಾತಿ ಪಡೆದಿದ್ದ ಪಾಕ್ ಮೂಲದ ತಾರಿಕ್ ಫತಾಹ್ ಅಸುನೀಗಿದ್ದಾರೆ. 1949ರಲ್ಲಿ ತಾರಿಕ್ (Tarek Fatah) ಪಾಕಿಸ್ತಾನದಲ್ಲೇ ಹುಟ್ಟಿದ್ದರು, 1980ರಿಂದ ಕೆನಡಾದಲ್ಲೇ ನೆಲೆಸಿದ್ದರು. ಭಾರತದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಬೆಂಬಲಿಸಿದ್ದರು.

ಉಗ್ರರ ವಿಚಾರದಲ್ಲಿ ತಾರಿಕ್ ಫತಾಹ್ ತೆಗೆದುಕೊಂಡಿದ್ದ ನಿಲುವು ಸಾಕಷ್ಟು ಸದ್ದು ಮಾಡಿತ್ತು. ಉಗ್ರರ ಕೃತ್ಯದ ವಿರುದ್ಧ ತಾರಿಕ್ ಫತಾಹ್ ಮುಲಾಜಿಲ್ಲದೆ ಮಾತನಾಡುತ್ತಿದ್ದರು. ಇದೀಗ ಅವರ ಅಗಲಿಕೆ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಖುದ್ದು ತಾರಿಕ್ ಫತಾಹ್ ಅವರ ಪುತ್ರಿ ತಮ್ಮ ತಂದೆಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನತಾಶಾ ಫತಾಹ್ ತಮ್ಮ ತಂದೆಯ ಸಾವಿನ ಕುರಿತು ಹಾಕಿರುವ ಟ್ವೀಟ್ ಈಗ ವೈರಲ್ ಆಗುತ್ತಿದೆ. ಹಾಗಾದ್ರೆ ತಾರಿಕ್ ಫತಾಹ್ ಅವರು ಭಾರತಕ್ಕೆ ಮತ್ತು ಭಾರತೀಯರಿಗೆ ಇಷ್ಟವಾಗಿದ್ದು ಹೇಗೆ? ಎಂಬುದನ್ನ ಮುಂದೆ ತಿಳಿಯೋಣ.

Pakistani origin Canada based author Tarek Fatah passed away

ಭಾರತಕ್ಕೆ ತಾರಿಕ್ ಫತಾಹ್ ಬೆಂಬಲ

ಪಾಕಿಸ್ತಾನ ಮತ್ತು ಭಾರತದ ವಿಚಾರದಲ್ಲಿ ತಾರಿಕ್ ಫತಾಹ್ ಭಾರತದ ಪರವೇ ನಿಂತಿದ್ದರು. ಭಾರತದ ನೀತಿಗಳ ಬಗ್ಗೆ ಸದಾ ಬೆಂಬಲ ವ್ಯಕ್ತಪಡಿಸುತ್ತಾ, ಪಾಕಿಸ್ತಾನ ಮಾಡುವ ತಪ್ಪುಗಳನ್ನು ನೇರವಾಗಿ ಖಂಡಿಸುತ್ತಿದ್ದರು. ಹೀಗಾಗಿ ಮಹಾನ್ ಬರಹಗಾರನಿಗೆ 'ಹಿಂದೂಸ್ತಾನದ ಮಗ' ಎಂಬ ಬಿರುದು ಇತ್ತು. ಇವರ ಅಗಲಿಕೆ ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲಿ ಕಂಬನಿ ತರಿಸಿದೆ. 'ಪಂಜಾಬಿನ ಸಿಂಹ, ಹಿಂದೂಸ್ತಾನದ ಮಗ, ಕೆನಡಾದ ಗೆಳೆಯ, ಸತ್ಯದ ಪ್ರತಿಪಾದಕ, ನ್ಯಾಯಕ್ಕಾಗಿ ಹೋರಾಡುವ ವ್ಯಕ್ತಿ, ತುಳಿತಕ್ಕೊಳಗಾದವರ ಧ್ವನಿ ತಾರೀಖ್ ಫತೇಹ್ ಇನ್ನಿಲ್ಲ' ಅವರ ಪುತ್ರಿ ಟ್ವೀಟ್ ಮಾಡಿದ್ದಾರೆ.

73 ವರ್ಷ ವಯಸ್ಸಿನ ತಾರಿಕ್ ಫತಾಹ್ ಅಗಲಿಕೆ ಸಾಮಾಜಿಕ ಜಾಲತಾಣದಲ್ಲೂ ಬೇಸರ ಮೂಡಿಸಿದೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೃತಪಟ್ಟಿರುವ ಬಗ್ಗೆ ಅವರ ಪುತ್ರಿಯೇ ಮಾಹಿತಿ ನೀಡಿದ್ದಾರೆ. ಆದರೆ ಈ ಸುದ್ದಿ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮತ್ತೊಂದು ಕಡೆ ತಾರಿಕ್ ಫತಾಹ್ ಅವರಿಗೆ ಇಸ್ರೇಲ್‌ನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳು ಇದ್ದರು. ಅವರ ಪುಸ್ತಕಗಳು ಬಿಡುಗಡೆ ಆದ ದಿನವೇ ಬಿಸಿ ದೋಸೆಯಂತೆ ಮಾರಾಟ ಆಗುತ್ತಿದ್ದವು. ಅಷ್ಟರಮಟ್ಟಿಗೆ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದ ಬರಹಗಾರ ಇಂದು ನಮ್ಮನ್ನು ಅಗಲಿದ್ದಾರೆ.

ಪರ-ವಿರೋಧದ ಚರ್ಚೆ

ತಾರಿಕ್ ಫತಾಹ್ ಪುಸ್ತಕಗಳಿಗೆ ಅಭಿಮಾನಿಗಳು ಇದ್ದಷ್ಟೆ ವಿರೋಧಿಗಳು ಕೂಡ ಇದ್ದರು. ಹೀಗಾಗಿಯೇ ಅವರ ಪುಸ್ತಕಗಳು ಬಿಡುಗಡೆ ಆದಾಗ ಪರ-ವಿರೋಧದ ಚರ್ಚೆ ನಡೆಯುತ್ತಿತ್ತು. ಅದರಲ್ಲೂ 2010ರಲ್ಲಿ ಬಿಡುಗಡೆ ಆಗಿದ್ದ ತಾರಿಕ್ ಫತಾಹ್ ಅವರ 'The Jew is Not My Enemy: Unveiling the Myths that Fuel Muslim Anti-Semitism' ಪುಸ್ತಕವಂತು ಸಾಕಷ್ಟು ಚರ್ಚೆ ಜೊತೆಗೆ ಭಾರಿ ಪ್ರಮಾಣದಲ್ಲಿ ಮಾರಾಟವಾಯಿತು. ಹೀಗೆ ಸಮಾಜದಲ್ಲಿ ತಮ್ಮ ಬರವಣಿಗೆ ಮೂಲಕ ಜನರಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದರು ತಾರಿಕ್ ಫತಾಹ್.

ಎನ್‌ಡಿಎ ಸರ್ಕಾರಕ್ಕೆ ಬೆಂಬಲ

ಭಾರತದಲ್ಲಿ NDA ನೇತೃತ್ವದ ಸರ್ಕಾರ ಬಂದಾಗ ಸಾಕಷ್ಟು ಟೀಕೆ ಹಾಗೂ ಚರ್ಚೆಗಳು ವ್ಯಕ್ತವಾಗಿದ್ದವು. ಆದರೆ ತಾರಿಕ್ ಫತಾಹ್ ಮಾತ್ರ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ತಾರಿಕ್ ಫತಾಹ್ ನಿಲುವಿನ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದರೂ ಅದಕ್ಕೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಹೀಗೆ ತಮ್ಮ ನಿಲುವನ್ನು ನೇರವಾಗಿಯೇ ಹೇಳುತ್ತಿದ್ದ ಬರಹಗಾರ ಕೋಟ್ಯಂತರ ಅಭಿಮಾನಿಗಳನ್ನ ಅಗಲಿದ್ದಾರೆ. ಬರಹಗಾರರ ಲೋಕಕ್ಕೆ ತಾರಿಕ್ ಫತಾಹ್ ಅವರ ಅಗಲಿಕೆ ತುಂಬಲಾಗದ ನಷ್ಟವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+