ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಸತತ ಶೆಲ್ ದಾಳಿ, ಶಾಲಾ-ಕಾಲೇಜು ರಜೆ

By Manjunatha
|
Google Oneindia Kannada News

ಜಮ್ಮು ಕಾಶ್ಮೀರ, ಫೆಬ್ರವರಿ 01: ಪಾಕಿಸ್ತಾನವು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರಿ ಪ್ರಮಾಣದಲ್ಲಿ ಶೆಲ್ ದಾಳಿ ಮಾಡುತ್ತಿದೆ.

ರಜೌರಿ ಜಿಲ್ಲೆಯ ನೌಶೇರ್ ಬಳಿಯಲ್ಲಿ ಪಾಕಿಸ್ತಾನವು ಶೆಲ್ ದಾಳಿ ಮಾಡುತ್ತಿದ್ದು, ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ಅಲರ್ಟ್ ಘೋಷಿಸಲಾಗಿದ್ದು, 71 ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಶೆಲ್ ದಾಳಿ ಹೆಚ್ಚಾಗಿದ್ದರೂ ಕೂಡ ಈ ವರೆಗೆ ಯಾವುದೇ ಜೀವ ಹಾನಿಯಾಗಿರುವ ವರದಿ ಆಗಿಲ್ಲ, ಭಾರತವು ಪ್ರತಿ ದಾಳಿ ಮಾಡದೆ ಸಂಯಮ ಕಾಯ್ದುಕೊಂಡಿರುವುದು ವಿಶೇಷ.

Pakistan violated ceasefire in Nowshera sector

ಪಾಕಿಸ್ತಾನವು ಸತತವಾಗಿ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದ್ದು, ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಈ ವಿಷಯವನ್ನು ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಿಟ್ಟಿದ್ದು, ಭಾರತೀಯ ಸೇನಾ ಮುಖ್ಯಾಧಿಕಾರಿ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ನೇರವಾಗಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ ಆದರೂ ಸಹಿತ ಪಾಕಿಸ್ತಾನವು ತನ್ನ ಹಳೆಯ ಚಾಳಿಗಳನ್ನು ಮುಂದುವರೆಸಿದೆ.

Pakistan violated ceasefire in Nowshera sector
English summary
Pakistan violated ceasefire in Nowshera sector 71 schools closed due to heavy shelling in Lam area of Nowshera. Measures being taken for safety of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X