8 ಉಗ್ರರು ಉಡೀಸ್, 39 ಉಗ್ರರಿಗೆ ಗಾಯ... ಪಾಕಿಸ್ತಾನ ಕೊಟ್ಟಿರುವ ಲೆಕ್ಕ ಎಷ್ಟು? Operation Sindoor
ಭಾರತೀಯ ಸೇನೆ ಇಂದು ಪಾಪಿ ಪಾಕಿಸ್ತಾನಕ್ಕೆ ಮುಟ್ಟಿ ಮುಟ್ಟಿ ನೋಡಿಕೊಳ್ಳುವ ರೀತಿಯೇ ಏಟು ಕೊಟ್ಟಿದೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಕಾದು ಕುಳಿತಿತ್ತು. ಹೀಗಿದ್ದಾಗ ದಿಢೀರ್ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ, ಉಗ್ರರು ಅಡಗಿ ಕುಳಿತಿದ್ದ ಬಿಡಾರಗಳನ್ನು ಉಡೀಸ್ ಮಾಡಿದೆ. ಹಾಗಾದರೆ, ಇದೀಗ ಎಷ್ಟು ಉಗ್ರರ ಹೆಣ ಬಿದ್ದಿದೆ? ಬನ್ನಿ ತಿಳಿಯೋಣ.
ಭಾರತ ಸೇನೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೇಲೆ ದಾಳಿಯನ್ನ ನಡೆಸಲಾಗಿದೆ. ಉಗ್ರರ ಫ್ಯಾಕ್ಟರಿಯಂತೆ ಆಗಿರುವ ಪಾಕಿಸ್ತಾನ ಗಡಿ ಭಾಗದಲ್ಲಿ ಮಹತ್ವದ ಕಾರ್ಯಾಚರಣೆ ನಡೆದಿದ್ದು, ಪಾಪಿ ಪಾಕಿಸ್ತಾನದ ಗಡಿಭಾಗದಲ್ಲಿ ಇರುವ ಉಗ್ರರ ಶಿಬಿರಗಳನ್ನು ಉಡಾಯಿಸಲಾಗಿದೆ. ಹೀಗೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಬಹುದೊಡ್ಡ ಹಾನಿ ಪಾಕಿಸ್ತಾನಕ್ಕೆ ಆಗಿದ್ದು, ಖುದ್ದು ಪಾಕಿಸ್ತಾನ ಸಾವು & ನೋವಿನ ಬಗ್ಗೆ ವರದಿ ನೀಡಿದೆ. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಈ ರೀತಿ ಭಾರಿ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿ ತಕ್ಕಪಾಠ ಕಲಿಸಲಾಗಿದೆ.

8 ಉಗ್ರರು ಪೀಸ್.. ಪೀಸ್...
ಹೌದು, ಇದೀಗ ಪಾಕಿಸ್ತಾನ ಕೊಟ್ಟಿರುವ ಲೆಕ್ಕದ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೇನೆ ನಡೆಸಿರುವ ದಾಳಿಯಲ್ಲಿ ಒಟ್ಟು 8 ಉಗ್ರರು ಉಡೀಸ್ ಆಗಿದ್ದರೆ 39 ಉಗ್ರರಿಗೆ ಗಾಯವಾಗಿದೆ ಎಂಬ ಮಾಹಿತಿ ನೀಡಿದೆ. ಆದರೆ ಉಗ್ರರನ್ನ ಜನರು ಎಂದಿರುವ ಪಾಪಿ ಪಾಕ್ ಅಧಿಕಾರಿಗಳು, ಮತ್ತೆ ಸುಳ್ಳು ಮಾಹಿತಿ ನೀಡುತ್ತಿದ್ದಾರಾ? ಎಂಬ ಅನುಮಾನ ಕೂಡ ಇದೀಗ ಮೂಡಿದೆ. ಇದೇ ಕಾರಣಕ್ಕೆ ಭಾರತೀಯ ಸೇನೆಯಿಂದ ಅಧಿಕೃತ ಮಾಹಿತಿಗಾಗಿ ಕಾಯಲಾಗ್ತಿದೆ. ಮತ್ತೊಂದು ಕಡೆ ಭಾರತದ ಗಡಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
12 ಉಗ್ರರ ಹೆಣ ಬಿತ್ತಾ?
ಮತ್ತೊಂದು ಕಡೆ ಭಾರತದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆಯಿಂದ ನಡೆದ ಕಾರ್ಯಾಚರಣೆ ವೇಳೆ ಒಟ್ಟಾರೆ 12ಕ್ಕೂ ಹೆಚ್ಚು ಉಗ್ರರ ಹೆಣ ಬಿದ್ದಿದೆ ಎನ್ನಲಾಗ್ತಿದೆ. ಅಲ್ಲದೆ ಉಗ್ರರು ಅಡಗಿ ಕುಳಿತಿರುವ & ಉಗ್ರರಿಗೆ ತರಬೇತಿ ನೀಡುವ ಜಾಗಗಳ ಕುರಿತು ಪಕ್ಕಾ ಮಾಹಿತಿ ಪಡೆದುಕೊಂಡೇ ಈ ದಾಳಿಯನ್ನ ನಡೆಸಲಾಗಿದೆ ಎಂಬ ಮಾಹಿತಿ ಇದೆ. ಹೀಗಿದ್ದಾಗ ಭಾರಿ ದೊಡ್ಡ ಪ್ರಮಾಣದಲ್ಲೇ ಉಗ್ರರ ಹೆಣ ಬಿದ್ದಿರುವುದು ಗ್ಯಾರಂಟಿ.
ಪಾಕಿಸ್ತಾನಕ್ಕೆ ಸಿಕ್ಕಿತು ತಕ್ಕ ಉತ್ತರ!
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತು, ಮಹತ್ವದ ಪ್ರತಿಕ್ರಿಯೆ ನೀಡುತ್ತಾ 'ಭಾರತ ಮಾತೆಗೆ ಜಯವಾಗಲಿ...' ಎಂದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯನ್ ಆರ್ಮಿಯ ಕಾರ್ಯಾಚರಣೆ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಭಾರತೀಯ ಸೇನಾ ದಾಳಿಯಿಂದ ಪಾಪಿ ಪಾಕಿಸ್ತಾನ ಬೆಚ್ಚಿ ಬಿದ್ದಿದ್ದು, ಗಡಿ ಭಾಗದಲ್ಲಿ ಮತ್ತಷ್ಟು ಹದ್ದಿನ ಕಣ್ಣು ಇಡಲಾಗಿದೆ.












Click it and Unblock the Notifications