ಪಾಕಿಸ್ತಾನದಿಂದ ಭಾರತದ 78 ಮೀನುಗಾರರ ಬಿಡುಗಡೆ

ನವದೆಹಲಿ, ಜುಲೈ 10: ಭಾನುವಾರ ಪಾಕಿಸ್ತಾನ ಭಾರತದ 78 ಮೀನುಗಾರರನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಸಾಗರ ವಲಯ ಪ್ರವೇಶಿಸಿ ಮೀನುಗಾರಿಕೆ ಮಾಡಿದ ಕಾರಣಕ್ಕೆ ಇವರೆಲ್ಲಾ ಬಂಧಿತರಾಗಿದ್ದರು.

"ಕರಾಚಿಯ ಲಂಧಿ ಜೈಲಿನಿಂದ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ," ಎಂದು ಸಿಂಧ್ ಪ್ರಾಂತ್ಯದ ಗೃಹ ಇಲಾಖೆ ಅಧಿಕಾರಿ ಹೇಳಿದ್ದಾರೆ. ಇಂದು ಇವರೆಲ್ಲಾ ಭಾರತಕ್ಕೆ ಬರಲಿದ್ದಾರೆ.

Pakistan released 78 Indian fishermen from Karachi jail

ಇನ್ನೂ 298 ಮೀನುಗಾರರು ಪಾಕಿಸ್ತಾನದ ಜೈಲುಗಳಲಿದ್ದು ಅವರು ಭಾರತೀಯರು ಎಂಬುದನ್ನು ಭಾರತ ಸಾಕ್ಷಿ ಸಮೇತ ಸಾಬೀತು ಮಾಡಿದ ಬಳಿಕ ಪಾಕಿಸ್ತಾನ ಬಿಡುಗಡೆ ಮಾಡಲಿದೆ.

ಅರಬ್ಬೀ ಸಮುದ್ರದಲ್ಲಿ ಎರಡೂ ದೇಶಗಳ ನಡುವೆ ಗಡಿ ಇನ್ನೂ ಸರಿಯಾಗಿ ನಿರ್ಧಾರವಾಗಿಲ್ಲ. ಜತೆಗೆ ತಂತ್ರಜ್ಞಾನದ ಕೊರತೆಯಿಂದ ಮೀನುಗಾರರಿಗೆ ನಾವು ಎಲ್ಲಿದ್ದೇವೆ ಎಂದೇ ತಿಳಿಯುವುದಿಲ್ಲ. ಹೀಗಾಗಿ ಹಲವು ಸಂದರ್ಭದಲ್ಲಿ ಪಾಕಿಸ್ತಾನದ ಸಾಗರ ಪ್ರದೇಶ ಪ್ರವೇಶಿಸಿ ಬಂಧನಕ್ಕೆ ಗುರಿಯಾಗುತ್ತಾರೆ.

ಹಲವು ಸಂದರ್ಭದಲ್ಲಿ ಶಿಕ್ಷೆಅವಧಿ ಮುಗಿಸಿದ್ದರೂ ಎರಡೂ ದೇಶಗಳ ನಡುವೆ ಕಳಪೆ ರಾಜತಾಂತ್ರಿಕ ಸಂಬಂಧದಿಂದ ಪಾಕಿಸ್ತಾನದ ಜೈಲುಗಳಲ್ಲೇ ಕೊಳೆಯುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+