ಸಂಕುಚಿತ ಮನೋಭಾವದ ಪಾಕ್ ಗೆ ಈದ್ ಸಿಹಿಯೂ ಕಹಿ
ಚಂಡಿಘಡ, ಜು. 18: ಕದನ ವಿರಾಮ ಉಲ್ಲಂಘನೆ ಮಾಡಿ, ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಂದ ಪಾಕ್ ಧ್ವಜ ಹಾರಾಟ ಮಾಡಿಸಿದ ಪಾಕಿಸ್ತಾನ ಭಾರತೀಯ ಯೋಧರು ನೀಡಿದ ಈದ್ ಸಿಹಿ ಸ್ವೀಕರಿಸಲು ನಿರಾಕರಿಸಿದೆ.
ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭೇಟಿ ನಂತರ ಸಂಬಂಧ ಸುಧಾರಿಸಬಹುದು ಎಂದುಕೊಳ್ಳಲಾಗಿತ್ತು. ರಂಜಾನ್ ಅಂಗವಾಗಿ ಪ್ರತಿವರ್ಷದಂತೆ ಭಾರತೀಯ ಗಡಿ ಭದ್ರತಾ ಪಡೆದ ಸಿಬ್ಬಂದಿ ಪಂಜಾಬ್ನ ಅಮೃತಸರದ ಜಮ್ಮು ಮತ್ತು ಅತ್ತಾರಿ ವಾಘಾ ಗಡಿಯಲ್ಲಿ ಪಾಕ್ ಯೋಧರಿಗೆ ಸಿಹಿ ನೀಡಲು ಮುಂದಾಗಿದ್ದರು. ಆದರೆ ಇಲ್ಲೂ ಉದ್ಧಟತನ ತೋರುವದನ್ನು ಪಾಕಿಸ್ತಾನ ಬಿಟ್ಟಿಲ್ಲ.[ಜಮ್ಮು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ ಪ್ರತ್ಯೇಕತಾವಾದಿಗಳು]

ಸಿಹಿ ನೀಡಿ ಹಬ್ಬದ ಶುಭಾಶಯ ಕೋರಲು ಮುಂದಾಗಿದ್ದೇವು. ಆದರೆ ಸ್ವೀಕಾರ ಮಾಡಿಲ್ಲ ಎಂದು ಡಿಐಜಿ ಎಂ.ಎಫ್.ಫಾರೂಕಿ ತಿಳಿಸಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದ್ದು ವಿಧ್ವಂಸಕ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಮತ್ತು ಪಂಜಾಬ್ ನ ಅಮೃತ್ ಸರ್ ಅಟ್ಟಾರಿ ವಾಘಾ ಗಡಿಯಲ್ಲಿ ಬಿಎಸ್ ಎಫ್ ಮತ್ತು ಪಾಕ್ ರೇಂಜರ್ಸ್ಸ ಈದ್ ಸಂದರ್ಭದಲ್ಲಿ ಸಿಹಿಯನ್ನು ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯವಾಗಿ ಬೆಳೆದು ಬಂದಿತ್ತು. ಆದರೆ ಈ ಬಾರಿ ಪಾಕ್ ಅದಕ್ಕೂ ಕ್ಯಾತೆ ತೆಗೆದಿದ್ದು ಅದರ ಸಂಕುಚಿತ ಮನೋಭಾವವನ್ನು ಜಗತ್ತಿಗೆ ಸಾರಿ ಹೇಳಿದೆ.












Click it and Unblock the Notifications