ಗಡಿಯಲ್ಲಿ ಸ್ವಚ್ಛತೆ ಮಾಡುತ್ತಿದ್ದ ಸೈನಿಕರ ಮೇಲೆ ಗುಂಡು ಹಾರಿಸಿದ ಪಾಕ್

ಜಮ್ಮು, ಸೆಪ್ಟೆಂಬರ್ 18: ಭಾರತ-ಪಾಕಿಸ್ತಾನದ ಗಡಿ ನಿಯಂತ್ರಣಾ ರೇಖೆ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸೈನಿಕರ ಮೇಲೆ ಪಾಕಿಸ್ತಾನ ಸೇನೆಯು ಗುಂಡಿನ ದಾಳಿ ನಡೆಸಿದೆ.

ಬಿಎಸ್‌ಎಫ್ ಸೈನಿಕರ ಗುಂಪೊಂದು ಎಲ್‌ಓಸಿ (ಗಡಿ ನಿಯಂತ್ರಣ ರೇಖೆ) ಬಳಿ ಬೆಳೆದಿದ್ದ ಹುಲ್ಲು ಕತ್ತರಿಸಿ ಸ್ವಚ್ಛ ಮಾಡುತ್ತಿರುವಾಗ ಪಾಕಿಸ್ತಾನದ ಸೇನೆಯು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ.

ಪಾಕಿಸ್ತಾನದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಬಿಎಸ್‌ಎಫ್ ಸೈನಿಕರು ಯಶಸ್ವಿಯಾಗಿದ್ದಾರೆ ಆದರೆ ವಾಪಸ್ ಬಂದಾಗ ಒಬ್ಬ ಬಿಎಸ್‌ಎಫ್ ಸೈನಿಕ ನಾಪತ್ತೆಯಾಗಿರುವುದು ತಿಳಿದುಬಂದಿದೆ.

Pakistan opened unprovoked fire on Indian Army

ಆರ್‌.ಎಸ್.ಪುರ ಸೆಕ್ಟರ್ ಬಳಿ ಫೈರಿಂಗ್ ನಡೆದಿದ್ದು. ಸೈನಿಕನು ಗಡಿ ರೇಖೆ ಬಳಿ ಅಡಗಿಕೊಂಡಿರಬೇಕು ಎಂದು ಸೈನ್ಯವು ಅಂದಾಜು ಮಾಡಿದೆ. ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆದಾಗ ಬಿಎಸ್‌ಎಫ್ ತಂಡವು ಗಡಿ ರೇಖೆ ಬಳಿ ಅಡಗಿಕೊಂಡಿತ್ತು. ಹಾಗಾಗಿ ಆತ ಅಲ್ಲಿಯೇ ಇದ್ದಿರಬೇಕು ಎಂದು ಸೈನ್ಯದ ಹಿರಿಯ ಅಧಿಕಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+