ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆ

ಪಾಕ್ ಸೇನೆಯು ಸೋಮವಾರ ಬೆಳಗ್ಗೆ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರ ದೇಹಗಳನ್ನು ತುಂಡರಿಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ

ಜಮ್ಮು, ಮೇ 1: ಪಾಕಿಸ್ತಾನದ ಅಪ್ರಚೋದಿತ ದಾಳಿಯಲ್ಲಿ ಸೋಮವಾರ ಬೆಳಗ್ಗೆ ಇಬ್ಬರು ಭಾರತೀಯ ಸೈನಿಕರನ್ನು ಕೊಂದು, ಅವರ ದೇಹವನ್ನು ಕತ್ತರಿಸಲಾಗಿದೆ. ಇಂಥ ಹೇಯ ಕೃತ್ಯಕ್ಕೆ 'ತಕ್ಕ ಪ್ರತ್ಯುತ್ತರ' ನೀಡುತ್ತೇವೆ ಎಂದು ಸೇನೆ ಹೇಳಿದೆ. ಸೈನಿಕ ಹಾಗೂ ಬಿಎಸ್ ಎಫ್ ನ ಕಾನ್ ಸ್ಟೇಬಲ್ ವೊಬ್ಬರನ್ನು ಕೊಲ್ಲಲಾಗಿದೆ.

ಕೃಷ್ಣ ಘಾಟಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರೂ ಪಹರೆ ಕಾಯುತ್ತಿದ್ದ ವೇಳೆ ಪಾಕಿಸ್ತಾನದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣದಂಡನೆ ವಿಧಿಸಿದ ನಂತರ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇನ್ನಷ್ಟು ಗಂಭೀರ ಪರಿಸ್ಥಿತಿ ಏರ್ಪಡಲು ಕಾರಣವಾಗಿದೆ.[ಪಾಕ್ ಕದನ ವಿರಾಮ ಉಲ್ಲಂಘನೆಗೆ ಇಬ್ಬರು ಭಾರತೀಯ ಯೋಧರು ಹುತಾತ್ಮ]

Pakistan Mutilates Bodies Of 2 Indian Soldiers

ಪಾಕ್ ಸೇನೆಯು ಪಹರೆಯಲ್ಲಿದ್ದ ಇಬ್ಬರು ಭಾರತೀಯ ಸೈನಿಕರ ದೇಹವನ್ನು ತುಂಡರಿಸಿದೆ. ಇಂಥ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ನಾರ್ಥರ್ನ್ ಕಮಾಂಡ್ ತಿಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಗಡಿನಿಯಂತ್ರಣ ರೇಖೆ ದಾಟಿ ಹೋಗಿದ್ದ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳನ್ನು ನಾಶಪಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+