ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11ರ ಮುಂಬೈ ದಾಳಿ ಬಗ್ಗೆ ಉಗ್ರ ಕಸಬ್‌ಗೆ ಪಶ್ಚಾತಾಪವೇ ಇರಲಿಲ್ಲ!

|
Google Oneindia Kannada News

ಮುಂಬೈ, ಡಿಸೆಂಬರ್ 15: ಮುಂಬೈ 26/11ರ ಉಗ್ರರ ದಾಳಿಯ ನಂತರದಲ್ಲಿ ಭಯೋತ್ಪಾದಕ ಅಜ್ಮಲ್ ಕಸಬ್ ಜೀವಂತವಾಗಿ ಸೆರೆಹಿಡಿಯಲ್ಪಟ್ಟರೂ ಜೈಲಿನಲ್ಲಿ ಅವನನ್ನು ನೋಡಿದಾಗ "ಅವನಿಗೆ ಪಶ್ಚಾತ್ತಾಪ" ಇರಲಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಸ್ಟಾಫ್ ನರ್ಸ್ ಅಂಜಲಿ ಕುಲ್ತೆ ಹೇಳಿದರು.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ ವಿಧಾನ: ಸವಾಲುಗಳು ಮತ್ತು ಮುಂದುವರಿಕೆ' ಕುರಿತು ವೀಡಿಯೊ ಲಿಂಕ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು. 10 ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಆ ದಿನದಲ್ಲಿ ದಾಳಿಯ ಬಲಿಪಶುಗಳು ಅನುಭವಿಸಿದ ಭಯಾನಕತೆಯನ್ನು ನೆನಪಿಸಿಕೊಂಡರು. ಮುಂಬೈನಲ್ಲಿ ಐದು ಪ್ರಮುಖ ಸ್ಥಳಗಳಲ್ಲಿ ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿಯಿಂದ 166 ಜನರನ್ನು ಕೊಂದಿದ್ದು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪಾಕ್‌ನಿಂದ ಮುಂಬೈ ಪೊಲೀಸರಿಗೆ 26/11ರ ಮಾದರಿ ದಾಳಿ ಸಂದೇಶಪಾಕ್‌ನಿಂದ ಮುಂಬೈ ಪೊಲೀಸರಿಗೆ 26/11ರ ಮಾದರಿ ದಾಳಿ ಸಂದೇಶ

ಮುಂಬೈನಲ್ಲಿ ಉಗ್ರರ ದಾಳಿ ನಡೆದಾಗ ಮಹಿಳೆಯರು ಮತ್ತು ಮಕ್ಕಳಿಗಾಗಿ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಕುಲ್ತೆ ಅವರು ಭದ್ರತಾ ಮಂಡಳಿಯ ಸದಸ್ಯರಿಗೆ ಕಸಬ್ ಸೆರೆಯಾದ ನಂತರ ಜೈಲಿನಲ್ಲಿ ಅವನನ್ನು ಜೀವಂತವಾಗಿ ನೋಡಿದಾಗ "ಒಂದಿಷ್ಟೂ ಪಶ್ಚಾತ್ತಾಪ" ಕಾಣಿಸಲಿಲ್ಲ ಎಂದು ಹೇಳಿದರು.

Pakistan: LeT terrorist Kasab did not have iota of remorse in jail after 26/11 mumbai attacks, says Anjali Kulthe

ಕಸಬ್ ಕ್ರೌರ್ಯವನ್ನು ಕಣ್ಣಾರೆ ಕಂಡಿದ್ದ ಕುಲ್ತೆ:

ಮುಂಬೈ ದಾಳಿ ಸಂದರ್ಭದಲ್ಲಿ ಅಜ್ಮಲ್ ಕಸಬ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಆಸ್ಪತ್ರೆಯ ಗೇಟ್‌ಗಳಿಗೆ ನುಗ್ಗಿ ಗಾರ್ಡ್‌ಗಳನ್ನು ಕೊಲ್ಲುವುದನ್ನು ಅಂಜಲಿ ಕುಲ್ತೆ ಕಣ್ಣಾರೆ ಕಂಡಿದ್ದರು. ಎಲ್‌ಇಟಿ ಭಯೋತ್ಪಾದಕರು ಆರ್ಥಿಕ ರಾಜಧಾನಿಯ ಐದು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಕಾಮಾ ಆಸ್ಪತ್ರೆ, ಲಿಯೋಪೋಲ್ಡ್ ಕೆಫೆ, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮತ್ತು ತಾಜ್ ಹೋಟೆಲ್ ಮತ್ತು ಟವರ್ ಉಗ್ರರ ಟಾರ್ಗೆಟ್ ಆಗಿದ್ದವು.

ಇದಕ್ಕೂ ಮೊದಲು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಭಯೋತ್ಪಾದನೆಯ ಮಾನವ ವೆಚ್ಚದ ನೆನಪನ್ನು ಸ್ಪಷ್ಟವಾಗಿ ಹಂಚಿಕೊಂಡಿದ್ದಕ್ಕಾಗಿ ಕುಲ್ತೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಅವರನ್ನು "26/11 ಭಯೋತ್ಪಾದಕ ದಾಳಿಯ ವೀರ ಬಲಿಪಶು" ಎಂದು ಬಣ್ಣಿಸಿದರು. "26/11 ಮುಂಬೈ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಘಟನೆಗಳ ಸಂತ್ರಸ್ತರಿಗೆ ಇನ್ನೂ ನ್ಯಾಯವನ್ನು ನೀಡಲು ಆಗಿಲ್ಲ. ಇಂದಿನ ಸಾಕ್ಷ್ಯವು ಕೌನ್ಸಿಲ್ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಂಪೂರ್ಣ ಜ್ಞಾಪನೆಯಾಗಿದೆ," ಎಂದು ಅವರು ಭದ್ರತಾ ಮಂಡಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಸಬ್ ವಿರುದ್ಧ ಸಾಕ್ಷಿ ನುಡಿದಿದ್ದ ಅಂಜಲಿ ಕುಲ್ತೆ:

ಅಂಜಲಿ ಕುಲ್ತೆ ಕೂಡ ಉಗ್ರ ಅಜ್ಮಲ್ ಕಸಬ್ ವಿರುದ್ಧ ಗುರುತಿಸಿ ಸಾಕ್ಷ್ಯ ನೀಡಿದ್ದರು. ಅವನ ವಿರುದ್ಧ ಸಾಕ್ಷಿ ಹೇಳುವಾಗ ಅವರು ತಮ್ಮ ಸಮವಸ್ತ್ರವನ್ನು ಹೆಮ್ಮೆಯಿಂದ ನ್ಯಾಯಾಲಯದಲ್ಲಿ ಧರಿಸಿದ್ದಳು. ಕಸಬ್‌ಗೆ ಮರಣದಂಡನೆ ವಿಧಿಸಲಾಯಿತು. ನವೆಂಬರ್ 21, 2012ರಂದು ಉಗ್ರ ಕಸಬ್ ಅನ್ನು ಗಲ್ಲಿಗೇರಿಸಲಾಯಿತು. ನಂತರದಲ್ಲಿ ಪುಣೆಯ ಯರವಾಡ ಜೈಲಿನಲ್ಲಿ ಸಮಾಧಿ ಮಾಡಲಾಯಿತು.

English summary
Pakistan: LeT terrorist Kasab did not have 'iota of remorse' in jail after 26/11 mumbai attacks, says Anjali Kulthe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X