ಭಾರತದ ಶತ್ರು ಪಾಕಿಸ್ತಾನ ಕುದಿಯುವ ಬಾಣಲೆಗೆ ಬಿದ್ದಿದೆ!

ಪಾಕಿಸ್ತಾನ ಈಗ ಕೊತ ಕೊತ ಕುದಿಯುತ್ತಿದೆ, ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಹಾಗಾದ್ರೆ ಪಾಕಿಸ್ತಾನದಲ್ಲಿ ಏನಾಯ್ತಪ್ಪಾ? ಅಂತಾ ಯೋಚನೆ ಮಾಡ್ತಾ ಇದ್ರಾ. ಇಲ್ಲಿ ಆಗಿರುವುದು ಬೇರೆ ಏನೂ ಅಲ್ಲ, ಪಾಕಿಸ್ತಾನದ ಮೇಲೆ ಪ್ರಕೃತಿಯು ಮುನಿಸಿಕೊಂಡ ಪರಿಣಾಮ ಇದೀಗ ದೊಡ್ಡ ವಿನಾಶಕ್ಕೆ ನಾಂದಿ ಹಾಡಿದಂತೆ ಆಗಿದೆ.

ಪಾಕಿಸ್ತಾನ ಈಗ ಕೈಯಲ್ಲಿ ಹಣ ಇಲ್ಲದೆ ಬೀದಿಗೆ ಬಿದ್ದಿದ್ದು, ಕಂಡ ಕಂಡ ದೇಶಗಳಿಗೆ ಸಾಲ ಕೊಡಿ ಸಾಲ ಕೊಡಿ ಅಂತಾ ಕಾಲು ಹಿಡಿಯುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಪಾಕಿಸ್ತಾನಕ್ಕೆ ಸಾಲ ನೀಡಿ ಸಾಕಾಗಿ ಹೋಗಿದೆ. ಹೀಗಾಗಿ ಪಾಕಿಸ್ತಾನ ಮತ್ತಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಇದೇ ಹೊತ್ತಲ್ಲಿ ಮತ್ತೊಂದು ಭೀಕರ ಸಮಸ್ಯೆ ಎದುರಾಗಿದೆ. ಈಗಾಗಲೇ, ಸಾಲು ಸಾಲು ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದ ಜನರ ವಿರುದ್ಧ ಪ್ರಕೃತಿ ಮಾತೆಯು ಕೂಡ ಮುನಿಸಿಕೊಂಡಿದ್ದಾಳೆ!

Pakistan Is Facing Deadliest Heatwave And Temperature Reached To 50 Degree Celsius

ದಕ್ಷಿಣದಲ್ಲಿ ಮಳೆ.. ಉತ್ತರದಲ್ಲಿ ಬಿಸಿಲು!

ಅಂದಹಾಗೆ ದಕ್ಷಿಣ ಭಾರತದಲ್ಲಿ ಕಳೆದ 3 ತಿಂಗಳು ವಿಪರೀತ ಬಿಸಿಲು ಬಿದ್ದು, ಜನರು ಭಾರಿ ಬಿಸಿಲಿನ ಪರಿಣಾಮ ನಲುಗಿ ಹೋಗಿದ್ದರು. ಆದರೆ ಇದೀಗ ದಕ್ಷಿಣ ಭಾರತದಲ್ಲಿ ಭರ್ಜರಿಯಾಗಿ ಮಳೆ ಬರಲು ಆರಂಭವಾಗಿದೆ. ಆದರೆ ಇದೇ ಸಮಯದಲ್ಲಿ ಉತ್ತರ ಭಾರತ ಭಾರಿ ಬಿಸಿಲಿಗೆ & ಬಿಸಿ ಗಾಳಿಗೆ ನರಳಿ ಹೋಗಿದೆ. ಅದರಲ್ಲೂ ಪಾಕಿಸ್ತಾನದ ಪರಿಸ್ಥಿತಿ ಹೀನಾಯವಾಗಿದೆ, ಯಾಕೆ ಅಂದ್ರೆ ಪಾಕಿಸ್ತಾನ ಈಗ ಬಿಸಿಲಿನ ಅಬ್ಬರಕ್ಕೆ ಕೊತ ಕೊತ ಕುದಿಯುತ್ತಿದೆ.

50 ಡಿಗ್ರಿ ಸೆಲ್ಸಿಯಸ್‌ ತಾಪಮಾನ!

ಹೌದು ಪಾಕಿಸ್ತಾನದಲ್ಲಿ ಬಿಸಿಗಾಳಿ ತೀವ್ರತೆ ಹೆಚ್ಚಾಗಿದ್ದು ಸಿಂಧ್‌ ಪ್ರಾಂತ್ಯದ ಮೊಹೆಂಜೊದಾರೊ ಮತ್ತು ದಾದು ಪ್ರದೇಶದಲ್ಲಿ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಅಲ್ಲದೆ ಪಾಕ್‌ನ ಬಹುತೇಕ ಸಿಟಿ ಪ್ರದೇಶಗಳಲ್ಲಿ 46 ಡಿಗ್ರಿ ಸೆಲ್ಸಿಯಸ್‌ ಮೀರಿ ತಾಪಮಾನ ದಾಖಲಾಗಿದೆ. ಇದು ಪಾಕಿಸ್ತಾನದ ಜನರ ನಿದ್ದೆಗೆಡಿಸಿ, ಹೊರಗಡೆ ಕಾಲು ಇಡದಂತೆ ಮಾಡಿದೆ. ಸರ್ಕಾರ ಕೂಡ, ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಭಾರಿ ಬಿಸಿಲು ಇರುವ ಹಿನ್ನೆಲೆ ಜನ ಅಗತ್ಯವಿಲ್ಲದೆ ಇದ್ದರೆ ಹೊರಗೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ. ಬಿಸಿಲಿನ ಆಘಾತಕ್ಕೆ ನರಳಿ, 100ಕ್ಕೂ ಹೆಚ್ಚು ಜನರು ಪಾಕಿಸ್ತಾನದಲ್ಲಿ ಇದೀಗ ಆಸ್ಪತ್ರೆ ಪಾಲಾಗಿದ್ದಾರೆ.

ಒಟ್ನಲ್ಲಿ ಮೊದಲೇ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದೆ ನರಳಾಡಿ ಹೋಗಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಏನು ಮಾಡುವುದು ಅಂತಾ ಅಲ್ಲಿನ ಜನರು & ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಅದರಲ್ಲೂ ಮಳೆ ಬಾರದ ಪ್ರದೇಶಗಳಲ್ಲಿ ಈಗ ಬಿಸಿಲು ಹೆಚ್ಚಾಗಿರುವ ಪರಿಣಾಮ ಬೆಳೆ ಉಳಿಸಿಕೊಳ್ಳುವುದು ಕೂಡ ಕಷ್ಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+