'ಗೋಬ್ಯಾಕ್ ಮೋದಿ' ಟ್ರೆಂಡಿಂಗ್ ಹಿಂದಿನ ಕಠೋರ ಸತ್ಯ ಬಯಲು
ನವದೆಹಲಿ, ಅ 12: ಚೀನಾದ ಅಧ್ಯಕ್ಷರ, ಭಾರತದ ಎರಡು ದಿನಗಳ ಪ್ರವಾಸದ ವೇಳೆ, 'ಗೋಬ್ಯಾಕ್ ಮೋದಿ' ಹ್ಯಾಷ್ ಟ್ಯಾಗ್, ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿತ್ತು. ಅದರ ಹಿಂದಿನ ಅಸಲಿಯತ್ತು ಈಗ ಬಯಲಾಗಿದೆ.
ಎಲ್ಲಾ ಹಂತದಲ್ಲೂ ಭಾರತವನ್ನು ಎದುರಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ಕೆಲವೊಂದು ಗ್ರೂಪ್ ಗಳ ಕೆಲಸ ಇದಾಗಿದೆ. ಸಾಮಾಜಿಕ ತಾಣವನ್ನು ಬಳಸಿಕೊಂಡು ಭಾರತ ಮತ್ತು ಪ್ರಧಾನಿ ಮೋದಿಯವನ್ನು ಅವಮಾನಿಸಲು ಈ ಕೆಲಸ ಮಾಡಿವೆ.
ಭಾರತ ವಿರೋಧಿ ನಿಲುವನ್ನು ತಾಳುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಚುನಾಯಿತ ನಾಯಕರನ್ನು ಅವಮಾನಿಸಲು, ಉದ್ದೇಶಪೂರ್ವಕವಾಗಿಯೇ ಮಾಡಿರುವ ಸಂಚು ಎನ್ನುವುದು, ಅಂಕಿಅಂಶಗಳ ಆಧಾರದಲ್ಲಿ ಬಯಲಾಗಿದೆ.
ಪ್ರತೀಬಾರಿ, ಮೋದಿ ತಮಿಳುನಾಡಿಗೆ ಹೋದಾಗಲೂ, 'ಗೋಬ್ಯಾಕ್ ಮೋದಿ' ಟ್ರೆಂಡಿಂಗ್ ನಲ್ಲಿ ಇರುತ್ತಿತ್ತು. ಆದರೆ, ಚೀನಾ ಅಧ್ಯಕ್ಷರ ಭೇಟಿ ವೇಳೆ, ಉದ್ದೇಶಪೂರ್ವಕವಾಗಿಯೇ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದನ್ನು, ಪಾಕಿಸ್ತಾನದ ಕೆಲವು ಗ್ರೂಪ್ ಗಳು ಟ್ರೆಂಡಿಂಗ್ ಮಾಡಿವೆ.

ಈ ಹ್ಯಾಷ್ ಟ್ಯಾಗ್ ನಲ್ಲಿ ಬಂದಿರುವ ಬಹುತೇಕ ಟ್ವೀಟ್ ಗಳು, ಪಾಕಿಸ್ತಾನದಿಂದ ಟ್ವೀಟ್ ಆಗಿರುವ ಅಕೌಂಟ್ ಗಳಾಗಿವೆ. ಉದ್ದೇಶಪೂರ್ವಕವಾಗಿಯೇ ಈ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಲು, ಪಾಕಿಸ್ತಾನದ ಕೆಲವು ಗ್ರೂಪ್ ಗಳು ಕುಮುಕ್ಕು ನೀಡಿರುವುದು ಬಹಿರಂಗಗೊಂಡಿದೆ.
ಇದಲ್ಲದೇ, ಈ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡ್ ಮಾಡಬೇಕೆಂದು, ವಾಟ್ಸಾಪ್ ಗ್ರೂಪ್ ನಲ್ಲೂ ಮನವಿ ಮಾಡಿರುವ ವಿಚಾರವೂ ಬಹಿರಂಗಗೊಂಡಿದೆ. ಈ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಲು, ಒಂದು ವಾರದ ಹಿಂದೆ, ನೂರು ಹೊಸ ಟ್ವಿಟ್ಟರ್ ಅಕೌಂಟ್ ಅನ್ನು ಶುರುಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications