ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ವೃದ್ಧೆ ಬಲಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಅಮೃತ್ ಸರ್, ಮೇ 15:ಮೇ 15: ಪಂಜಾಬಿನ ಗುರುದಾಸ್ಪುರ್ ಬಳಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ನುಸುಳಲು ಯತ್ನಿಸಿದ ಪಾಕಿಸ್ತಾನ ಮೂಲದ ವೃದ್ಧೆಯೊಬ್ಬರನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಸೋಮವಾರ ಮುಂಜಾನೆ ಕೊಂದು ಹಾಕಿದ್ದಾರೆ.

ಗಡಿಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಪಾಕಿಸ್ತಾನಿ ಪ್ರಜೆ ಈ ಮಹಿಳೆ(60ವರ್ಷ)ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಯಿತು. ಆದರೆ, ಎಚ್ಚರಿಕೆಯನ್ನು ಲೆಕ್ಕಿಸದೆ ಗಡಿ ಬೇಲಿ ದಾಟಲು ಮುಂದಾಗಿದ್ದಕ್ಕೆ ಆಕೆಯನ್ನು ಹೊಡೆದುರುಳಿಸಬೇಕಾಯಿತು ಎಂದು ಬಿಎಸ್ಎಫ್ ಹೇಳಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇಂಥದ್ದೇ ಘಟನೆ ಸಂಭವಿಸಿತ್ತು, ಕಳೆದ ಮೂರು ತಿಂಗಳಿನಲ್ಲಿ ಈ ಭಾಗದಲ್ಲಿ ಇಬ್ಬರು ನುಸುಳುಕೋರರನ್ನು ಕೊಂದು ಹಾಕಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

Pak intruder shot dead by BSF at Gurdaspur, Punjab

ಭಾರತ-ನೇಪಾಳ ಗಡಿಯಲ್ಲಿ ಹಿಜ್ಬುಲ್‌ ಮುಜಾಹೀದ್ದೀನ್‌ ಉಗ್ರನನ್ನು ಭಾನುವಾರದದು ಸೆರೆ ಹಿಡಿಯಲಾಯಿತು. ಇದರ ಬೆನ್ನಲ್ಲೇ ಪಾಕ್‌ ನುಸುಳುಕೋರರ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಕಳೆದ ಶನಿವಾರ, ಲಷ್ಕರ್‌ ಎ ತೊಯ್ಬಾ ಸಂಘಟನೆಯ ಐವರು ಉಗ್ರರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಬಂಧಿತ ಉಗ್ರರು ಮೇ 7ರಂದು ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Pakistani intruder has been shot dead by the BSF at Gurdaspur, Punjab. The incident took place along the International Border with Pakistan. BSF personnel spotted some movement ahead of the fence at the IB.
Please Wait while comments are loading...