Padma Shri Awards: ಕರ್ನಾಟಕದ ವೆಂಕಪ್ಪ ಅಂಬಾಜಿ ಸೇರಿ ರಾಜ್ಯದ ಆರು ಮಂದಿಗೆ ಪದ್ಮಶ್ರೀ ಪ್ರಶಸ್ತಿ
ಗಣರಾಜ್ಯೋತ್ಸವ ಪ್ರಶಸ್ತಿಗೆ ಮುನ್ನ ಕೇಂದ್ರ ಸರ್ಕಾರ ಶನಿವಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರನ್ನು ಪ್ರಕಟಿಸಿದೆ. ಕರ್ನಾಟಕದ ಮೂವರು ಸೇರಿ ಹಲವು ಸಾಧಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಗೋವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ 100 ವರ್ಷದ ಗೋವಾ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕದ ಜಾನಪದ ಗಾಯಕರಾದ ವೆಂಕಪ್ಪ ಅಂಬಾಜಿ ಅವರಿಗೂ ಪ್ರಶಸ್ತಿ ಸಿಕ್ಕಿದೆ.
ಬಾಗಲಕೋಟೆ ನಿವಾಸಿಯಾಗಿರುವ ವೆಂಕಪ್ಪ ಅಂಬಾಜಿ ಸುಗಟೇಕರ್ ಜಾನಪದ ಗಾಯಕರಾಗಿದ್ದು, 1,000 ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ. ಸಾವಿರಾರು ಜನವರಿಗೆ ಉಚಿತವಾಗಿ ಹಾಡುಗಾರಿಕೆಯನ್ನು ಹೇಳಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನ್ ಕಿ ಬಾತ್‌ನಲ್ಲಿ ಶ್ಲಾಘಿಸಿದ್ದರು. ಈಗ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿದೆ.

ಕಲಬುರಗಿ ಮೂಲದ ಕ್ಯಾನ್ಸರ್ ರೋಗ ತಜ್ಞೆ ವಿಜಯಲಕ್ಷ್ಮಿ ದೇಶಮನೆ ಅವರಿಗೂ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧವಾಗಿದ್ದಾರೆ. ಸ್ತನ ಕ್ಯಾನ್ಸರ್ ಕುರಿತಂತೆ ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. 4 ದಶಕಗಳಿಂದ ಅವರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ
ಅಳಿದು ಹೋಗುತ್ತಿರುವ ಜಾನಪದ ಕಲೆಯಾಗಿರುವ ತೊಗಲು ಗೊಂಬೆಯಾಟದ ಮೂಲಕವೇ ಹೆಸರು ಮಾಡಿರುವ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಭೀಮವ್ವರನ್ನು ಮೊದಲ ಮಹಿಳಾ ಗೊಂಬೆಯಾಟಗಾರ್ತಿ ಎಂದು ಗುರುತಿಸಲಾಗಿದೆ. 96 ವರ್ಷದ ಅವರು ತಮ್ಮ 14ನೇ ವರ್ಷದಲ್ಲಿ ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ 70 ವರ್ಷಗಳಿಂದ ರಾಮಾಯಣ ಮತ್ತು ಮಹಾಭಾರತವನ್ನು ಗೊಂಬೆಯಾಟದ ಮೂಲಕ ಜನರಿಗೆ ತಲುಪಿಸಿದ್ದಾರೆ. ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಮತ್ತು ಸೌದಿ ಅರೇಬಿಯಾದಲ್ಲೂ ಅವರು ಪ್ರದರ್ಶನ ನೀಡಿದ್ದಾರೆ. ತೊಗಲು ಗೊಂಬೆಯಾಟ ಕಲೆಯನ್ನು ಉಳಿಸಲು ತಮ್ಮ ಕುಟುಂಬಸ್ಥರಿಗೆ ಮತ್ತು ಆಸಕ್ತಿ ಇರುವ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ.
ಈವರೆಗೆ ಬಿಡುಗಡೆಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ
ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಕರ್ನಾಟಕ)
ವಿಜಯಲಕ್ಷ್ಮಿ ದೇಶಮನೆ (ಕರ್ನಾಟಕ)
ಎಲ್ ಹ್ಯಾಂಗ್‌ಥಿಂಗ್ (ನಾಗಾಲ್ಯಾಂಡ್)
ಹರಿಮನ್ ಶರ್ಮಾ (ಹಿಮಾಚಲ ಪ್ರದೇಶ)
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಅರುಣಾಚಲ ಪ್ರದೇಶ)
ಜೋಯ್ನಾಚರಣ್ ಬತಾರಿ (ಅಸ್ಸಾಂ)
ನರೇನ್ ಗುರುಂಗ್ (ಸಿಕ್ಕಿಂ)
ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)
ಶೈಖಾ ಎ ಜೆ ಅಲ್ ಸಬಾಹ್ (ಕುವೈತ್)
ನಿರ್ಮಲಾ ದೇವಿ (ಬಿಹಾರ)
ಭೀಮ್ ಸಿಂಗ್ ಭಾವೇಶ್ (ಬಿಹಾರ)
ರಾಧಾ ಬಹಿನ್ ಭಟ್ (ಉತ್ತರಾಖಂಡ)
ಜೋನಾಸ್ ಮಾಸೆಟ್ (ಬ್ರೆಜಿಲ್)
ಜಗದೀಶ್ ಜೋಶಿಲಾ (ಮಧ್ಯಪ್ರದೇಶ)
ಸುರೇಶ್ ಸೋನಿ (ಗುಜರಾತ್)
ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)
ಲಿಬಿಯಾ ಲೋಬೋ ಸರ್ದೇಸಾಯಿ (ಗೋವಾ)
ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)
ಹ್ಯೂ ಗ್ಯಾಂಟ್ಜರ್ (ಉತ್ತರಾಖಂಡ)
ಹರ್ವಿಂದರ್ ಸಿಂಗ್ (ಹರಿಯಾಣ)
ಭೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)
ಪಿ ದಚ್ಚನಮೂರ್ತಿ (ಪುದುಚೇರಿ)
ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ)
ಡಾ. ನೀರ್ಜಾ ಭಟ್ಲಾ (ದೆಹಲಿ)
ಸ್ಯಾಲಿ ಹೋಳ್ಕರ್ (ಮಧ್ಯಪ್ರದೇಶ)
ಮಾರುತಿ ಭುಜಂಗರಾವ್ ಚಿಟಂಪಲ್ಲಿ (ಮಹಾರಾಷ್ಟ್ರ).












Click it and Unblock the Notifications