Vani Jairam Passes Away : ಹೆಸರಾಂತ ಗಾಯಕಿ 'ವಾಣಿ ಜಯರಾಮ್' ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜೈರಾಮ್ ನಿಧನರಾದರು. ಚೆನ್ನೈನ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಸ್ತಂಗತರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ಹಣೆಗೆ ಗಾಯವಾಗಿದೆ ಎಂದೂ ತಿಳಿದುಬಂದಿದೆ. ಇದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಅವರಿಗೆ ಭಾರತದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಘೋಷಿಸಲಾಗಿತ್ತು. ವಾಣಿ ಜೈರಾಮ್ ಅವರು ವಿವಿಧ ಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದಾರೆ. ಪ್ರತಿಭಾವಂತ ಗಾಯಕಿ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಭೋಜ್‌ಪುರಿ, ತುಳು ಮತ್ತು ಒರಿಯಾ ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ.

ವಾಣಿ ಜಯರಾಮ್‌ ಅವರು ದೇಶ ಮತ್ತು ಪ್ರಪಂಚದಾದ್ಯಂತ ವ್ಯಾಪಕವಾಗಿ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Padma awardee Veteran singer Vani Jayaram passes away

ವಾಣಿ ಜೈರಾಮ್ ಇತ್ತೀಚೆಗೆ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದಾರೆ. 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆಯನ್ನೂ ಮಾಡಿದ್ದಾರೆ. ಅವರು ಇಳಯರಾಜ, ಆರ್‌ ಡಿ ಬರ್ಮನ್, ಕೆ ವಿ ಮಹದೇವನ್, ಒ ಪಿ ನಯ್ಯರ್ ಮತ್ತು ಮದನ್ ಮೋಹನ್ ಸೇರಿದಂತೆ ಇತರ ಪ್ರಸಿದ್ಧ ಸಂತೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದಾರೆ.

ಕನ್ನಡದಲ್ಲಿ ವಾಣಿ ಜಯರಾಮ್‌

ತಮಿಳು ಚಿತ್ರಗಳಲ್ಲಿ ವಾಣಿ ಜಯರಾಮ್‌ ಅವರೊಂದಿಗೆ ಕೆಲಸ ಮಾಡಿದ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು 1973 ರಲ್ಲಿ ಕೆಸರಿನ ಕಮಲ ಚಿತ್ರಕ್ಕಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಅವರು ಈ ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ಉಪಾಸನೆ ಚಿತ್ರದ 'ಭಾವವೆಂಬ ಹೂವು ಅರಳಿ' ಗೀತೆಯನ್ನು ವಾಣಿ ಜಯರಾಮ್ ಹಾಡಿದರು. ಈ ಹಾಡು ಮೂರು ದಶಕಗಳ ಕಾಲ ಕನ್ನಡ ಚಲನಚಿತ್ರಗಳಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿತು.

Padma awardee Veteran singer Vani Jayaram passes away

ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಸತ್ಯಂ, ಉಪೇಂದ್ರ ಕುಮಾರ್, ಟಿ.ಜಿ.ಲಿಂಗಪ್ಪ, ಎಲ್. ವೈದ್ಯನಾಥನ್ ಮತ್ತು ಹಂಸಲೇಖ ಅವರಂತಹ ಖ್ಯಾತ ಸಂಗೀತ ಸಂಯೋಜಕರೊಂದಿಗೆ ವಾಣಿ ಜಯರಾಮ್‌ ಅವರು ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ - ವಿಜಯ ಭಾಸ್ಕರ್ - ವಾಣಿ ಜಯರಾಮ್ ಅವರ ಸಂಯೋಜನೆಯು ಅತ್ಯಂತ ಜನಪ್ರಿಯವಾಗಿತ್ತು.

'ಈ ಶತಮಾನದ ಮಾದರಿ ಹೆಣ್ಣು', 'ಬೆಸುಗೆ ಬೆಸುಗೆ', 'ಬೆಳ್ಳಿ ಮೋಡವೆ ಎಲ್ಲಿ ಓದು', 'ಜೀವನ ಸಂಜೀವನ', 'ದೇವ ಮಂದಿರದಲ್ಲಿ', 'ಹಾಡು ಹಳೆಯದಾದರೆನು', 'ಕನ್ನಡ ನಾಡಿನ ಕರಾವಳಿ', 'ಪ್ರಿಯತಮಾ ಕರುಣೆಯ ತೊರೆಯಾ' ವಾಣಿ ಜಯರಾಮ್‌ ಅವರ ಕೆಲವು ಮರೆಯಲಾಗದ ಹಾಡುಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+