OYO Rooms: ಇನ್ಮುಂದೆ ಈ ಜಾಗಗಳಲ್ಲೂ ಸಿಗುತ್ತೆ ಓಯೋ ರೂಂ, ಗ್ರಾಹಕರಿಗೆ ಹಬ್ಬ!
ಈಗಿನ ಯುವಕ, ಯುವತಿಯರಿಗೆ ಓಯೋ (OYO) ಪದ ಕೇಳಿದ ತಕ್ಷಣ ಒಂದು ಫುಲ್ ಅಲರ್ಟ್ ಆಗ್ತಾರೆ. ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಓಯೋ ರೂಮ್ಸ್. ಗ್ರಾಹಕರಿಗೆ ಉತ್ತಮ ಔಪಚಾರಿಕ ಸೇವೆ ನೀಡಬೇಕು ಎಂದು ಆರಂಭವಾದ ಈ ಓಯೋ ಹೆಚ್ಚಾಗಿ ಯುವಜನರನ್ನು ಸೆಳೆಯುವ ಮೂಲಕ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಭಾರತದ ಪ್ರಮುಖ ನಗರಗಳು ಹಾಗೂ ಪ್ರವಾಸಿ ಸ್ಥಳಗಳಲ್ಲಿ ಓಯೋ ಸೇವೆ ಸಿಗುತ್ತಿದೆ. ಇದೀಗ ಓಯೋ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು ಇನ್ಮುಂದೆ ಈ ಹೊಸ ಜಾಗಗಳಲ್ಲೂ ಓಯೋ ರೂಂ ಸೇವೆ ಸಿಗಲಿದೆ.
ಇಲ್ಲಿವರೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಪ್ರಮುಖ ನಗರದಲ್ಲಿ ಒಯೋ ಸರ್ವೀಸ್ ಜನಪ್ರಿಯತೆ ಪಡೆದುಕೊಂಡಿತ್ತು. ಬಳಿಕ ಸಣ್ಣ ಸಣ್ಣ ನಗರಗಳು ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಕೆಲವೇ ಪ್ರವಾಸಿ ತಾಣಗಳಲ್ಲಿ ಈ ಓಯೋ ಸೇವೆ ಇದೆ. ನೇರವಾಗಿ ಮೊಬೈಲ್‌ನಿಂದಲೇ ತಮಗೆ ಬೇಕಾದಾಗ ಸರಳ ವಿಧಾನದ ಮೂಲಕ ರೂಂ ಬುಕ್ ಮಾಡುವ ವ್ಯವಸ್ಥೆಯನ್ನು ಇದು ಕಲ್ಪಿಸಿತ್ತು. ಇದರಿಂದಲೇ ಓಯೋ ಕಡಿಮೆ ಸಮಯದಲ್ಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ ವಿವಾಹೇತರ ಯುವಕ-ಯುವತಿಗೂ ಒಂದೇ ರೂಂನಲ್ಲಿ ಉಳಿದುಕೊಳ್ಳುವ ಅವಕಾಶಗಳನ್ನು ಕೆಲ ಮಾನದಂಡಗಳೊಂದಿಗೆ ನೀಡಿದೆ. ಇದೀಗ ಈ ಸೇವೆ ಯಾರೂ ಊಹಿಸದ ಜಾಗದಲ್ಲೂ ಸಿಗಲಿದೆ.

ಶೀಘ್ರದಲ್ಲೇ ಬುಡಕಟ್ಟು ಪ್ರದೇಶಗಳಲ್ಲಿಯೂ ಹೋಂಸ್ಟೇಗಳನ್ನು ಅಭಿವೃದ್ಧಿಪಡಿಸಲು OYO ಹೋಮ್ಸ್ ಮತ್ತು ಹೋಮಿ ಹಟ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಬುಡಕಟ್ಟು ಕುಟುಂಬಗಳಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಜೀವನದ ಸ್ಥಳೀಯ ಅನುಭವವನ್ನು ಗ್ರಾಹಕರಿಗೆ ನೀಡುವ ಗುರಿಯನ್ನು ಹೊಂದಿದೆ.
ಪಕ್ಕದ ಆಂಧ್ರಪ್ರದೇಶದಲ್ಲಿ ಈ ಸೇವೆ ಮೊದಲಿಗೆ ಆರಂಭವಾಗಲಿದೆ. ಈ ಒಪ್ಪಂದವು ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಮತ್ತು ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಉದ್ದೇಶ ಹೊಂದಿದೆ. ಈ ಮೂಲಕ ಓಯೋ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದು, ಗ್ರಾಹಕರು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ತಿಳಿಯಲಿದೆ.
ಬುಡಕಟ್ಟು ಪ್ರದೇಶಗಳಲ್ಲಿ ಹೇಗೆ?
ಪ್ರವಾಸೋದ್ಯಮ ವಲಯದಲ್ಲಿ ಪ್ರಮುಖವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಹೋಂಸ್ಟೇಗಳನ್ನು ಸ್ಥಾಪಿಸಲು ಓಯೋ ಹೋಮ್ಸ್ ಮತ್ತು ಹೋಮಿ ಹಟ್ಸ್ ಒಪ್ಪಂದ ಮಾಡಿಕೊಂಡಿವೆ. ಈ ಉಪಕ್ರಮವು ಬುಡಕಟ್ಟು ಕುಟುಂಬಗಳಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲಿದೆ. ಇದರ ಜೊತೆಗೆ ಐಟಿಸಿ ಕೂಡ ತನ್ನ ಕಾಫಿ ತೋಟಗಾರಿಕೆಯನ್ನು ಹೆಚ್ಚುವರಿಯಾಗಿ 1,600 ಹೆಕ್ಟೇರ್‌ಗಳಿಗೆ ವಿಸ್ತರಿಸಲು ಐಟಿಡಿಎ ಪಾಡೇರು ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಬುಡಕಟ್ಟು ವಲಯಗಳಲ್ಲಿ ಕಾಫಿ ಕೃಷಿಯನ್ನು ಉತ್ತೇಜಿಸಲು ಕಾಫಿ ಮಂಡಳಿಯು ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ. ಬುಡಕಟ್ಟು ಉತ್ಪನ್ನಗಳು ಮತ್ತು ಅರಕು ಕಾಫಿಯ ಮಾರಾಟವನ್ನು ಹೆಚ್ಚಿಸಲು ಗಿರಿಜನ್ ಸಹಕಾರಿ ನಿಗಮದೊಂದಿಗೆ (ಜಿಸಿಸಿ) ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿವೆ.












Click it and Unblock the Notifications