ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015 ರಿಂದ 3 ಲಕ್ಷಕ್ಕೂ ಅಧಿಕ ಮಕ್ಕಳು ನಾಪತ್ತೆ, 2.7 ಲಕ್ಷ ಮಕ್ಕಳ ರಕ್ಷಣೆ

|
Google Oneindia Kannada News

ನವದೆಹಲಿ, ಡಿಸೆಂಬರ್‌ 03: ಕಳೆದ ಆರು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದು, ಸುಮಾರು 2.7 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದರು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ 2015 ಮತ್ತು 2020 ರ ನಡುವೆ ಕಾಣೆಯಾದ ಮತ್ತು ರಕ್ಷಿಸಲಾದ ಮಕ್ಕಳ ಡೇಟಾವನ್ನು ಒದಗಿಸಿದ್ದಾರೆ. "2015 ಮತ್ತು 2020 ರ ನಡುವೆ 3,11,290 ಮಕ್ಕಳು ನಾಪತ್ತೆಯಾಗಿದ್ದು, 2,70,698 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದರು.

Winter Session Day 5 Roundup; ಕಲಾಪದ ಮುಖ್ಯಾಂಶಗಳು Winter Session Day 5 Roundup; ಕಲಾಪದ ಮುಖ್ಯಾಂಶಗಳು

"ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಾಣೆಯಾದ ಮತ್ತು ಪತ್ತೆಯಾದ ಮಕ್ಕಳನ್ನು ಪತ್ತೆಹಚ್ಚಲು trackthemissingchild ಪೋರ್ಟಲ್‌ ಅನ್ನು ರಚಿಸಿದೆ. ಪೊಲೀಸ್ ಠಾಣೆಗಳು, ಬಾಲಾಪರಾಧ ನ್ಯಾಯ ಮಂಡಳಿಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳು ಕಾಣೆಯಾದ ಹಾಗೂ ತಮ್ಮಲ್ಲಿ ಇರುವ ಮಕ್ಕಳ ಬಗ್ಗೆ ಮಾಹಿತಿಯನ್ನು ನವೀಕರಿಸುವ ಅಗತ್ಯವಿದೆ. ನಿಯಮಿತವಾಗಿ ಕಂಡು ಬಂದಿದೆ," ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದರು.

Over 3 Lakh Children Went Missing Since 2015, 2.7 Lakh Rescued Says Union Minister

ಕಾಣೆಯಾದ ಮಕ್ಕಳ ಸಂಖ್ಯೆ ಇಳಿಮುಖ

ಕಾಣೆಯಾದ ಮಕ್ಕಳ ಸಂಖ್ಯೆಯು ಇಳಿಮುಖವಾಗಿದೆ. 2015 ರಲ್ಲಿ 80,633 ರಿಂದ ಮಕ್ಕಳು ನಾಪತ್ತೆಯಾಗಿದೆ. ಈ ಅಂಕಿ ಅಂಶಗಳನ್ನು ನೋಡಿದಾಗ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಪೋರ್ಟಲ್‌ನ ಡೇಟಾ ತೋರಿಸುತ್ತದೆ. ಈ ಸಂಖ್ಯೆಯು 39,362 ಕ್ಕೆ ಇಳಿಕೆ ಕಂಡಿದೆ. 2019 ರಲ್ಲಿ 49,267 ಮಕ್ಕಳು ನಾಪತ್ತೆಯಾಗಿದ್ದು, ಅದರಲ್ಲಿ 44,289 ಮಕ್ಕಳನ್ನು ಪತ್ತೆಹಚ್ಚಲಾಗಿದೆ. 2018 ರಲ್ಲಿ, 48,873 ಮಕ್ಕಳು ಕಾಣೆಯಾಗಿದ್ದಾರೆ ಮತ್ತು 40,296 ಮಕ್ಕಳನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು.

2017ರಲ್ಲಿ 47,080 ಮಕ್ಕಳು ನಾಪತ್ತೆಯಾಗಿದ್ದು, ಅದರಲ್ಲಿ 43,251 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. 2016 ರಲ್ಲಿ, 46,075 ಮಕ್ಕಳು ಕಾಣೆಯಾಗಿದ್ದಾರೆ ಮತ್ತು 41,931 ಮಕ್ಕಳನ್ನು ಪತ್ತೆಹಚ್ಚಲಾಗಿದೆ. 2015ರಲ್ಲಿ 80,633 ಮಕ್ಕಳು ನಾಪತ್ತೆಯಾಗಿದ್ದು, 66,711 ಮಂದಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ಸಂಸತ್ತಿನಲ್ಲಿ ಇಂದು ಬೇರೆನು ನಡೆದಿದೆ?

12 ಮಂದಿ ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿಪಕ್ಷ ನಾಯಕರಿಂದ ಪ್ರತಿಭಟನೆ ಮುಂದುವರಿಸಿದೆ. ಬಿಜೆಪಿ ಸಚಿವರೊಬ್ಬರು ಸಂಸತ್ತಿನಲ್ಲಿ ಎನ್‌ಆರ್‌ಸಿಯನ್ನು ಭಾರತದಾದ್ಯಂತ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದಾರೆ, ಎನ್‌ಆರ್‌ಸಿಯನ್ನು ಕೂಡ ರದ್ದುಗೊಳಿಸುತ್ತಾರೆ. ಕೇಂದ್ರ ವಿಚಕ್ಷಣ ಆಯೋಗ ತಿದ್ದುಪಡಿ ಮಸೂದೆ 2021 ಹಾಗೂ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಕೋವಿಡ್ 2ನೇ ಅಲೆ ಪರಿಸ್ಥಿತಿಯಲ್ಲಿ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ರಾಜಕೀಯ ನಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ವಿರೋಧ ಪಕ್ಷಗಳ ವಿರುದ್ಧ ಲೋಕಸಭೆಯಲ್ಲಿ ಆರೋಪ ಮಾಡಿದರು. ಶುಕ್ರವಾರ ಬಿಜೆಪಿ ಸದಸ್ಯರು ಸದನದಲ್ಲಿ ವಿರೋಧ ಪಕ್ಷಗಳ ಅಸಂವಿಧಾನಿಕ ವರ್ತನೆಯನ್ನು ಖಂಡಿಸಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. "ವಿರೋಧ ಪಕ್ಷಗಳ ದ್ವಂದ್ವ ನಿಲುವನ್ನು ಎತ್ತಿ ಹಿಡಿಯಲು ನಾವು ಇಲ್ಲಿದ್ದೇವೆ" ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಸಭಾ ಸದಸ್ಯರ ಅಮಾನತು ವಿವಾದದ ಬಗ್ಗೆ ಮಾತನಾಡಿದ ಸಭಾನಾಯಕ ಪಿಯೂಷ್ ಗೋಯಲ್, "ಹಿಂದಿನ ಅಧಿವೇಶನದಲ್ಲಿನ ತಮ್ಮ ಅಶಿಸ್ತಿನ ವರ್ತನೆಗೆ ಸಂಸದರು ಕ್ಷಮೆಯಾಚಿಸಲು ಸಿದ್ಧರಿಲ್ಲ. ಹೀಗಿರುವಾಗ ರಾಜಿಯಾಗುವುದು ಹೇಗೆ?" ಎಂದು ಪ್ರಶ್ನಿಸಿದರು.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

English summary
Over 3 Lakh Children Went Missing Since 2015, 2.7 Lakh Rescued Says Union Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X